charlie 777 movie review : ಶ್ವಾನಪ್ರಿಯರ ಹೃದಯ ತಟ್ಟಿದ 777 ಚಾರ್ಲಿ : ಇಲ್ಲಿದೆ ಸಿನಿಮಾ ವಿಮರ್ಷೆ

charlie 777 movie review : ಶ್ವಾನ ಹಾಗೂ ಮನುಷ್ಯನ ನಡುವಿನ ಬಂಧ ಇಂದು ನಿನ್ನೆಯದಲ್ಲ. ಮನುಷ್ಯನಿಗೆ ಶ್ವಾನ ನೀಡುವಷ್ಟು ಪ್ರೀತಿಯನ್ನು ಮತ್ಯಾರಿಂದಲೂ ನೀಡಲು ಸಾಧ್ಯವಿಲ್ಲ. ಇದೇ ರೀತಿಯ ಕತೆಯ ಎಳೆಯನ್ನು ಇಟ್ಕೊಂಡು ಹುಟ್ಟಿರುವ ಸಿನಿಮಾ 777 ಚಾರ್ಲಿ. ಇಂದು ಈ ಸಿನಿಮಾ ಅದ್ಧೂರಿ ಓಪನಿಂಗ್​ ಕಂಡಿದೆ. ಸಿನಿಮಾ ರಿಲೀಸ್​ಗೂ ಮುನ್ನ ಪ್ರೀಮಿಯರ್​ ಶೋ ವೀಕ್ಷಿಸಿದ ಜನರು ಚಾರ್ಲಿ ನಟನೆಗೆ ಫುಲ್​ ಫಿದಾ ಆಗಿದ್ದಾರೆ,
ಹಿಂದೆ ಮಹಾಭಾರತದಲ್ಲಿ ಧರ್ಮರಾಯ ಹಾಗೂ ಶ್ವಾನದ ಸಂಬಂಧ ನಿಮಗೆ ತಿಳಿದಿರಬಹುದು. ಅದೇ ರೀತಿ ಕಲಿಯುದಲ್ಲಿ ಧರ್ಮ (ರಕ್ಷಿತ್​ ಶೆಟ್ಟಿ) ಹೇಗೆ ಶ್ವಾನದೊಂದಿಗೆ ಬಂಧ ಬೆಸೆದುಕೊಳ್ತಾನೆ..? ಜೀವನದಲ್ಲಿ ಉತ್ಸಾಹವನ್ನೇ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬನ ಜೀವನವನ್ನು ಶ್ವಾನವು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಅತ್ಯಂತ ಸುಂದರವಾಗಿ ತೋರಿಸಿಕೊಳ್ಳಲಾಗಿದೆ.


ಬಾಲ್ಯದಲ್ಲಿ ಪೋಷಕರು ಹಾಗೂ ತಂಗಿಯನ್ನು ಕಳೆದುಕೊಂಡಿದ್ದ ಧರ್ಮ ಜೀವನದಲ್ಲಿ ಇನ್ಯಾವುದರ ಮೇಲೆಯೂ ಆಸಕ್ತಿ ಹೊಂದಿರುವುದಿಲ್ಲ. ದೇವರ ಮೇಲೆ ಕೂಡ ನಂಬಿಕೆಯಿಲ್ಲದೇ ತಾನಾಯ್ತು ತನ್ನ ಫ್ಯಾಕ್ಟರಿ ಕೆಲಸವಾಯ್ತು ಎಂದಿರ್ತಾನೆ. ಇಂತಹ ಸಮಯದಲ್ಲೇ ಈತನ ಬಾಳಲ್ಲಿ ಚಾರ್ಲಿಯ ಪ್ರವೇಶವಾಗುತ್ತೆ. ಮೊದ ಮೊದಲು ಚಾರ್ಲಿಯನ್ನು ಇಷ್ಟ ಪಡದ ಧರ್ಮ ಬಳಿಕ ಹೇಗೆ ಚಾರ್ಲಿಯನ್ನು ಇಷ್ಟ ಪಡ್ತಾನೆ ಹಾಗೂ ಚಾರ್ಲಿ ಜೊತೆ ಧರ್ಮ ಮೈಸೂರಿನಿಂದ ಕಾಶ್ಮೀರದವರೆಗೆ ಹೇಗೆ ತಿರುಗಾಡ್ತಾನೆ ಎನ್ನುವುದೇ ಈ ಸಿನಿಮಾ.


ಕಿರಣ್​ ರಾಜ್​ ತಮ್ಮ ಚೊಚ್ಚಲ ಸಿನಿಮಾದಲ್ಲಿ ಯಶಸ್ವಿ ಆಗಿದ್ದಾರೆ ಎನಿಸುತ್ತದೆ. ರಕ್ಷಿತ್​ ಶೆಟ್ಟಿ ಎಂದಿನಂತೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಾಜ್​ ಬಿ ಶೆಟ್ಟಿ ಪಶುವೈದ್ಯನಾಗಿ ಅಮೋಘ ನಟನೆಯನ್ನು ಮಾಡಿದ್ದಾರೆ. ಶಾರ್ವರಿ, ಬೆಂಗಳೂರು ನಾಗೇಶ್​ ಹಾಗೂ ದಿವಂಗತ ಭಾರ್ಗವಿ ನಾರಾಯಣ್​​ ಪಾತ್ರಗಳು ನೆನಪಿನಲ್ಲಿ ಉಳಿಯುತ್ತದೆ. ನಟಿ ಸಂಗೀತಾ ಶೃಂಗೇರಿ ನಟನೆ ಅಷ್ಟಕಷ್ಟೆ ಎಂಬಂತಿದೆ. ಫಸ್ಟ್​ ಹಾಫ್​ ಸಿನಿಮಾ ಪ್ರೇಕ್ಷಕರಿಗೆ ನಗುವಿನ ಬಾಡೂಟ ಬಡಿಸಿದರೆ ಸೆಕೆಂಡ್​ ಕೊಂಚ ದೀರ್ಘವಾದರೂ ಸಹ ಸಖತ್​ ಭಾವನಾತ್ಮಕವಾಗಿದೆ.

ಇದನ್ನು ಓದಿ : Free Logo Creation: ಫ್ರೀಯಾಗಿ ಲೋಗೋ ಕ್ರಿಯೇಟ್ ಮಾಡುವುದು ಹೇಗೆ?

ಇದನ್ನೂ ಓದಿ : Virat Kohli New Record : 10 ವರ್ಷಗಳಲ್ಲಿ 20 ಸಾವಿರ ರನ್ ; ಶತಕ “ಬರ”ದೇ ಇದ್ರೂ ಕೊಹ್ಲಿಯೇ ಕಿಂಗ್

sandalwood rakshit shetty and sangeetha starrer charlie 777 movie review

Comments are closed.