Honor 80 Series : 160 ಮೆಗಾಪಿಕ್ಸೆಲ್‌ ಕ್ಯಾಮೆರಾ ಇರುವ ಹಾನಾರ್‌ 80 ಸೀರಿಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಹಾನರ್‌ 80 ಸರಣಿಯ (Honor 80 Series) ಮೂರು ಸ್ಮಾರ್ಟ್‌ಫೋನ್‌ಗಳನ್ನು ಹಾನರ್‌ ಬಿಡುಗಡೆಮಾಡಿದೆ. ಸದ್ಯ ಇದು ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದೆ. ಈ ಸರಣಿಯಲ್ಲಿ ಹಾನರ್‌ 80, ಹಾನರ್‌ 80 ಪ್ರೊ ಮತ್ತು ಹಾನರ್‌ 80 ಎಸ್‌ಇ ಫೋನ್‌ಗಳನ್ನು ಲಾಂಚ್‌ ಮಾಡಲಾಗಿದೆ. ಹಾನರ್‌ ಕಂಪನಿಯು ಕ್ಯಾಮೆರಾಕ್ಕೆ ವಿಶೇಷ ಆದ್ಯತೆ ನೀಡಿದಂತಿದೆ. ಹಾನರ್‌ 80 ಸರಣಿಯಲ್ಲಿ 160 ಮೆಗಾಪಿಕ್ಸೆಲ್‌ ಕ್ಯಾಮೆರಾ ಅಳವಡಿಸಿದೆ. ಇದರಿಂದ ಗ್ಯಾಜೆಟ್‌ ಪ್ರಿಯರು ಅಚ್ಚರಿಗೊಳ್ಳುವಂತೆ ಮಾಡಿದೆ. ಇದು ಬಿಡಗಡೆ ಮಾಡಿದ ಮೂರು ಸ್ಮಾರ್ಟ್‌ಪೋನ್‌ಗಳ ವಿಶೇಷತೆಗಳೇನು ಎಂಬುದು ಈ ಲೇಖನದಲ್ಲಿದೆ ಓದಿ.

ಹಾನರ್‌ 80 ವೈಶಿಷ್ಟ್ಯಗಳು :
6.67 ಇಂಚಿನ ಬಾಗಿದ ಫುಲ್‌ ಹೆಚ್‌ಡಿ ಪ್ಲಸ್‌ OLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್‌ ದರ ಹೊಂದಿದೆ. ಸ್ನಾಪ್‌ಡ್ರಾಗನ್ 782G ಪ್ರೊಸೆಸರ್‌ನೊಂದಿಗೆ Adreno 642L GPU ಗ್ರಾಫಿಕ್ಸ್ ಅನ್ನು ಹೊಂದಿದೆ. ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾವು 160 ಮೆಗಾಪಿಕ್ಸೆಲ್‌ ಆಗಿದೆ. ಎರಡನೇ ಕ್ಯಾಮೆರಾವು 8 ಮೆಗಾಪಿಕ್ಸೆಲ್‌ ಮತ್ತು ಮೂರನೇ ಕ್ಯಾಮೆರಾವು 2 ಮೆಗಾಪಿಕ್ಸೆಲ್‌ ಹೊಂದಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್‌ ಕ್ಯಾಮರಾವನ್ನು ನೀಡಿದೆ. ಇದರ ಬ್ಯಾಟರಿಯು 4,800mAh ಸಾಮರ್ಥ್ಯ ಹೊಂದಿದೆ. ಇದು 66 W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ.

ಹಾನರ್‌ 80 ಪ್ರೊ ವೈಶಿಷ್ಟ್ಯಗಳು :
ಈ ಸ್ಮಾರ್ಟ್‌ಫೋನ್‌ ಹಾನರ್‌ 80ಗಿಂತ ಸ್ವಲ್ಪ ದೊಡ್ಡದಾಗಿದೆ. ಇದು 6.78 ಇಂಚಿನ OLED ಡಿಸ್ಪ್ಲೇಯನ್ನು ಪಡೆದಿದೆ. ಇದು 1.5K ರೆಸಲ್ಯೂಶನ್ ಹೊಂದಿದೆ. ಇದರ ರಿಫ್ರೆಶ್ ದರವು 120Hz ಮತ್ತು ಗರಿಷ್ಠ ಹೊಳಪು 1,000 nits ಆಗಿದೆ. ಇದು ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್‌ನೊಂದಿಗೆ ಗ್ರಾಫಿಕ್ಸ್‌ಗಾಗಿ ಫೋನ್ Adreno 730 GPU ಮತ್ತು Android 12 ನೊಂದಿಗೆ ಮ್ಯಾಜಿಕ್ OS 7.0 ಅನ್ನು ಬೆಂಬಲಿಸುತ್ತದೆ. ಕ್ಯಾಮೆರಾದ ವಿಚಾರದಲ್ಲಿ ಇದೂ ಸಹ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳನ್ನು ಅಳವಡಿಸಿಕೊಂಡಿದೆ. ಇದರಲ್ಲಿ ಪ್ರಾಥಮಿಕ ಲೆನ್ಸ್ 160 ಮೆಗಾಪಿಕ್ಸೆಲ್‌ ಆಗಿದೆ. ಇದರ ಎರಡನೇ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಮತ್ತು ಮೂರನೇ ಕ್ಯಾಮೆರಾವು 2 ಮೆಗಾಪಿಕ್ಸೆಲ್‌ ಆಗಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಈ ಕ್ಯಾಮೆರಾದಲ್ಲಿ 4K ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದಾಗಿದೆ. ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ವೈಶಿಷ್ಟ್ಯವನ್ನೂ ಹೊಂದಿದೆ. ಹೂನರ್‌ 80 ಪ್ರೊ ಸ್ಮಾರ್ಟ್‌ಫೋನ್‌ 66W ಸೂಪರ್‌ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲಿಸುತ್ತದೆ. ಇದು 4800mAh ಕ್ಷಮೆತೆಯ ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಡ್ಯುಯಲ್ ಬ್ಯಾಂಡ್ Wi-Fi, NFC ಮತ್ತು ಬ್ಲೂಟೂತ್ v5.2 ಅನ್ನು ಬೆಂಬಲಿಸುತ್ತದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.

ಹಾನರ್‌ 80 SE ವೈಶಿಷ್ಟ್ಯಗಳು :
ಹಾನರ್‌ 80 SE ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ HD ಪ್ಲಸ್‌ OLED ಡಿಸ್ಪ್ಲೇಯನ್ನು ಹೊಂದಿದೆ. ಇದರ ರಿಫ್ರೆಶ್‌ ದರವು 120Hz ಆಗಿದೆ. ಇದು ಮಿಡಿಯಾ ಟೆಕ್‌ ಡೈಮೆನ್ಸಿಟಿ 900 ಪ್ರೊಸೆಸ್ಸರ್‌ ನಿಂದ ಚಾಲನೆಗೊಳ್ಳುತ್ತದೆ. ಗ್ರಾಫಿಕ್ಸ್‌ಗಾಗಿ Mali-G68 GPU ಅನ್ನು ಅಳವಡಿಸಿಲಾಗಿದೆ. ಇದರಲ್ಲೂ ಸಹ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರಾಥಮಿಕ ಕ್ಯಾಮೆರಾವು 64 ಮೆಗಾಪಿಕ್ಸೆಲ್ ಆಗಿದೆ. ಇತರ ಎರಡು ಲೆನ್ಸ್‌ಗಳು 5 ಮತ್ತು 2 ಮೆಗಾಪಿಕ್ಸೆಲ್‌ಗಳು. ಮುಂಭಾಗದಲ್ಲಿ ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಹೂನರ್‌ 80 SE 66W ವೇಗದ ಚಾರ್ಜಿಂಗ್‌ನೊಂದಿಗೆ 4600mAh ಬ್ಯಾಟರಿಯನ್ನು ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ :
ಹಾನರ್‌ 80 :
8GB + 256GB ಸ್ಟೋರೇಜ್ ರೂಪಾಂತರಕ್ಕೆ CNY 2,699 ( ಅಂದಾಜು 31,000 ರೂ.)
12GB + 256GB ಸ್ಟೋರೇಜ್​ ರೂಪಾಂತರಕ್ಕೆ CNY 2,999 (ಅಂದಾಜು 34,000 ರೂ.)
12GB + 512GB ಸ್ಟೋರೇಜ್​ ರೂಪಾಂತರಕ್ಕೆ CNY 3,299 (ಅಂದಾಜು 38,000 ರೂ.)

ಹಾನರ್ 80 ಪ್ರೊ:
8GB + 256GB ಸ್ಟೋರೇಜ್ ರೂಪಾಂತರಕ್ಕೆ CNY 3,499 (ಅಂದಾಜು 40,000 ರೂ.)
12GB + 256GB ಸ್ಟೋರೇಜ್​ ರೂಪಾಂತರಕ್ಕೆ CNY 3,799 (ಅಂದಾಜು 43,000 ರೂ.)
12GB + 512GB ಸ್ಟೋರೇಜ್ ರೂಪಾಂತರಕ್ಕೆ CNY 4,099 (ಅಂದಾಜು 47,000 ರೂ.)

ಹಾನರ್ 80 SE:
8GB + 256GB ಸ್ಟೋರೇಜ್ ರೂಪಾಂತರಕ್ಕೆ CNY 2,399 (ಅಂದಾಜು 27,000 ರೂ.)
2GB + 256GB ಸ್ಟೋರೇಜ್​ ರೂಪಾಂತರಕ್ಕೆ CNY 2,699 (ಅಂದಾಜು 31,000 ರೂ.)

ಹಾನರ್‌ 80 ಸರಣಿಯ ಎಲ್ಲಾ ಮೂರು ಸ್ಮಾರ್ಟ್‌ಫೋನ್‌ಗಳು ಸದ್ಯ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲೂ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ : India’s Longest Train Journey : ಭಾರತದ ಅತಿ ಉದ್ದದ ರೈಲು ಮಾರ್ಗದಲ್ಲಿ ನೀವು ಪ್ರಯಾಣಿಸಿದ್ದೀರಾ?

ಇದನ್ನೂ ಓದಿ : Vivo X90 Series :ವಿವೋ X90 ಸರಣಿ ಲಾಂಚ್‌; ಕಾಯುವಿಕೆಗೆ ಫುಲ್‌ಸ್ಟಾಪ್‌ ಇಟ್ಟ ವಿವೋ

(Honor 80 Series launched honor 80, honor 80 Pro and honor 80 SE)

Comments are closed.