Actor Upendra: ಆರಾಮಾಗಿದ್ದೇನೆ ನನಗೆ ಏನು ಆಗಿಲ್ಲ, ಯಾರು ಚಿಂತೆ ಮಾಡಬೇಡಿ ಎಂದ ಉಪೇಂದ್ರ

(Actor Upendra) ಶೂಟಿಂಗ್‌ ವೇಳೆಯಲ್ಲಿ ನಟ ಉಪೇಂದ್ರ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಶೂಟಿಂಗ್‌ ಗೆ ಮರಳಿದ್ದಾರೆ. ಈ ಕುರಿತು ನನಗೆ ಏನು ಆಗಿಲ್ಲ, ನಾನು ಆರಾಮಾಗಿದ್ದೇನೆ, ಶೂಟಿಂಗ್‌ ಗೆ ಮರಳಿದ್ದೇನೆ ಎಂದು ವಿಡೀಯೋ ಮಾಡಿ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಅವರ ಆರೋಗ್ಯದ ಕುರಿತು ವೈದ್ಯರು ಕೂಡ ಸ್ಪಷ್ಟನೇ ನೀಡಿದ್ದಾರೆ.

ಹಾಗಿದ್ದರೆ ವೈದ್ಯರು ಹೇಳಿದ್ದೇನು ?
“ಮಧ್ಯಾಹ್ನ 1:30 ರ ಸುಮಾರಿಗೆ ನಟ ಉಪೇಂದ್ರ (Actor Upendra) ಅವರು ಆರೋಗ್ಯದಲ್ಲಿ ಏರು ಪೇರಾದ ಕಾರಣ ಆಸ್ಪತ್ರೆಗೆ ಬಂದಿದ್ದರು. ಶೂಟಿಂಗ್‌ ಮಾಡುವಾಗ ಉಸಿರಾಟದ ತೊಂದರೆ ಇದೆ ಅಂತ ಆಸ್ಪತ್ರೆಗೆ ಬಂದಿದ್ದಾರೆ. ಬರುವಾಗ ಸ್ವಲ್ಪ ಸ್ಯಾಚುರೇಷನ್‌ ಲೋ ಇತ್ತು. ಅದಕ್ಕೆ ತಕ್ಕ ಹಾಗೆ ನಮ್ಮ ವೈದ್ಯರು ಟ್ರೀಟ್‌ ಮೆಂಟ್‌ ನೀಡಿದ್ದಾರೆ. ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ” ಎಂದು ವೈದ್ಯರು ಹೇಳಿದ್ದಾರೆ.

https://www.youtube.com/watch?v=pR182aB2kIM&feature=youtu.be

ಆತಂಕಕ್ಕೊಳಗಾದ ಅಭಿಮಾನಿಗಳಿಗೆ ವಿಡಿಯೋ ಮೂಲಕ ಉಪೇಂದ್ರ ಅವರು ಸ್ಪಷ್ಟನೆ ನೀಡಿದ್ದು, “ಎಲ್ಲರೂ ನೋಡಿ, ನಾವು ಮೋಹನ್ ಸ್ಟುಡಿಯೋದಲ್ಲಿದ್ದೇವೆ. ಎಲ್ಲರೂ ಇದ್ದಾರೆ. ನಾನು ಆರಾಮವಾಗಿದ್ದೇನೆ. ಮ್ಯಾನೇಜರ್ ಎಲ್ಲರೂ ಇದ್ದಾರೆ. ಏನೂ ತೊಂದರೆ ಆಗಿಲ್ಲ. ಸ್ವಲ್ಪ ಧೂಳು ತುಂಬಿತ್ತು. ಡಸ್ಟ್ ಸ್ಮೋಕ್ ಜಾಸ್ತಿ ಇತ್ತು. ಕೆಮ್ಮಿದೆ ಅಷ್ಟೇ. ಆರಾಮವಾಗಿದ್ದೇನೆ ನಾನು. ಅದು ಏನೇನೋ ಸುದ್ದಿಯಾಗಿದೆ. ದಯವಿಟ್ಟು ಅನ್ಯಥಾ ಸುದ್ದಿಗಳನ್ನು ಹಬ್ಬಿಸಬೇಡಿ. ಇಲ್ಲೇ ಮಾಸ್ಟರ್ ಇದ್ದಾರೆ. ಎಲ್ಲವೂ ಆರಾಮವಾಗಿದೆ. ಮತ್ತೆ ಶೂಟಿಂಗ್ ಪ್ರಾರಂಭಿಸುತ್ತೇವೆ” ಎಂದು ನಟ ಸೆಲ್ಫೀ ವಿಡಿಯೋ ಮಾಡುವುದರ ಮೂಲಕ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ : KL Rahul and Athiya Shetty : ಕೆಎಲ್ ರಾಹುಲ್ ಮತ್ತು ಆತಿಯಾ ಶೆಟ್ಟಿ ಮದುವೆ ಫಿಕ್ಸ್‌ ಎಂದ ಸುನೀಲ್‌ ಶೆಟ್ಟಿ

ಇದನ್ನೂ ಓದಿ : Punyakoti Adoption Scheme : ಪುಣ್ಯಕೋಟಿ ದತ್ತು ಯೋಜನೆಗೆ ಕಿಚ್ಚ ಸುದೀಪ್‌ ರಾಯಭಾರಿ

ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಯುಐ ಶೂಟಿಂಗ್ ನಡೆಯುತ್ತಿತ್ತು. ಯುಐ ಚಿತ್ರದ ಆಕ್ಷನ್‌ ಸೀಕ್ವೇನ್ಸ್‌ ವೇಳೆ ಬಳಸಿದ್ದ ಡಸ್ಟ್‌ ನಿಂಧಾಗಿ ಉಪೇಂದ್ರ ಅವರು ಮೂಗು ಬ್ಲಾಕ್‌ ಆಗಿ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಕೂಡಲೆ ಉಪೇಂದ್ರ ಅವರನ್ನು ನೆಲಮಂಗಲದ ಬಳಿ ಇರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೂಟಿಂಗ್ ಸ್ಥಳಕ್ಕೆ ವೈದ್ಯರ ಕರೆತಂದು ಉಪ್ಪಿಗೆ ಪ್ರಥಮ‌ ಚಿಕಿತ್ಸೆ ನೀಡಲಾಗಿತ್ತು. ನಂತರ ಹತ್ತಿರದಲ್ಲೇ ಇದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಆಸ್ಪತ್ರೆಯಿಂದ ಶೂಟಿಂಗ್ ಸ್ಥಳಕ್ಕೆ ವಾಪಸ್ಸಾದ ಉಪ್ಪಿ ಅರಾಮಾಗಿ ಇದ್ದಾರೆ ಎಂದು ನಿರ್ಮಾಪಕ‌ ಕೆಪಿ ಶ್ರೀಕಾಂತ್ ಕೂಡಾ ತಿಳಿಸಿದ್ದಾರೆ.

https://www.youtube.com/watch?v=CI0vHnn-LRU

(Actor Upendra) During the shooting, actor Upendra’s health deteriorated a bit, he got treatment in the hospital and now he is back to shooting. He made a video and clarified to his fans that nothing happened to him, I am comfortable, I am back to shooting. The doctors have also given clear about his health.

Comments are closed.