ವಾಟ್ಸಾಪ್ ನಮಗೆಲ್ಲ ಗೊತ್ತಿದ್ದ ಹಾಗೆ ಇಡೀ ವಿಶ್ವದಲ್ಲೇ ನಂಬರ್ ಒನ್ ಮೆಸೇಜಿಂಗ್ ಆ್ಯಪ್ ವಾಟ್ಸಾಪನ್ನು (WhatsApp app) ನಾನ್ನೂರು ಮಿಲಿಯನ್‌ಗಿಂತ.ಅಧಿಕ ಜನ ಬಳಸುತ್ತಾರೆ. ಅದೆಷ್ಟೋ ಬಾರಿ ನಮ್ಮಲ್ಲೇ ಅನೇಕ ಮಂದಿಗೆ ಅನಿಸಿದ್ದಿದೆ, ನಂಬರ್ ಸೇವ್ ಮಾಡದೆ ಮೆಸೇಜ್ ಮಾಡುವ ಫೀಚರ್ ಇದ್ದರೆ ಒಳ್ಳೆಯದಿತ್ತು ಎಂದು. ಯಾವುದಾದರೂ ಒಂದು ಬಾರಿಗೆ ಮೆಸೇಜ್ ಮಾಡಬೇಕು ಅಂದರೂ ಅವರ ನಂಬರ್ ಸೇವ್ ಮಾಡದೆ (WhatsApp chat without saving a number) ಮೆಸೇಜ್ ಮಾಡಲು ಅಸಾಧ್ಯವಾಗಿತ್ತು. (ಉದಾ: ಫುಡ್ ಡೆಲಿವರಿ ಬಾಯ್‌ಗೆ ಲೊಕೇಶನ್ ಕಳಿಸಲು) ಆದರೆ ಇನ್ನುಮುಂದೆ ಆ ಟೆನ್ಶನ್ ಮಾಡಿಕೊಳ್ಳಬೇಕು ಎಂದೇ ಇಲ್ಲ. ಇಂಟರ್ನೆಟ್ ಬ್ರೌಸರ್ ಬಳಸಿಕೊಂಡೇ ಇನ್ನುಮುಂದೆ ನಂಬರ್ ಸೇವ್ ಮಾಡದೆಯೂ ಚಾಟಿಂಗ್ ಸಾಧ್ಯ. ಹೇಗೆ ಎಂತೀರಾ? ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿದರೆ ಸಾಕು.
- ನಿಮ್ಮಿಷ್ಟದ ಅಥವಾ ನೀವು ನಿಯಮಿತವಾಗಿ ಬಳಸುವ ಯಾವುದೇ ಬ್ರೌಸರ್ ಓಪನ್ ಮಾಡಿ.( ಗೂಗಲ್, ಫೈರ್ ಫಾಕ್ಸ್, ವೆಬ್ ಬ್ರೌಸರ್)
- https://wa.me/phonenumber – ಈ ಲಿಂಕ್ ಕಾಪಿ ಪೇಸ್ಟ್ ಮಾಡಿ.
( ಇಲ್ಲಿ ನೀವು ಚಾಟ್ ಮಾಡಲು ಇಷ್ಟ ಪಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ ನಂಬರ್ ಅನ್ನು ಫಿಲ್ ಮಾಡಿ. ಕಂಟ್ರಿ ಕೋಡ್ ಹಾಕಲು ಮರೆಯಬೇಡಿ. ಅಂದಹಾಗೆ ನೀವು ನಮೂದಿಸಬೇಕಾದ ಭಾರತದ ಕೋಡ್ +91 ಆಗಿದೆ. ಉದಾ: https://wa.me/919734652818 - ಈ ಪೇಜ್‌ನಲ್ಲಿ ವಾಟ್ಸಾಪ್ ನಿಮ್ಮನ್ನು ಹೊಸ ಪುಟಕ್ಕೆ ಕರೆದೊಯ್ಯುತ್ತದೆ. ಅಲ್ಲಿ ಗ್ರೀನ್ ಮೆಸೇಜ್ ಬಟನ್ ಕಾಣಸಿಗುತ್ತದೆ.
- ಆ ಬಟನ್ ಕ್ಲಿಕ್ ಮಾಡಿ, ಯಾವುದೇ ನಂಬರ್ ಸೇವೆ ಮಾಡದೆಯೇ ಚಾಟಿಂಗ್ ಸ್ಟಾರ್ಟ್ ಮಾಡಬಹುದು.
ಅಂದಹಾಗೆ ಈ ಸರಳ ವಿಧಾನಗಳನ್ನು ಬಳಸಿ ಆಂಡ್ರಾಯ್ಡ್ ಹಾಗೂ ಐಫೋನ್ ಎರಡರಲ್ಲೂ ನಂಬರ್ ಸೇವ್ ಮಾಡದೆ ಚಾಟ್ ಮಾಡಲು ಸಾಧ್ಯವಿದೆ. ಇದಲ್ಲದೆ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಯಾವುದಾದರೂ ಆ್ಯಪ್ ಬಳಸಿಯೂ ಚಾಟ್ ಮಾಡಲು ಆಗುತ್ತದೆ. ವಾಟ್ಸ್ ಡೈರೆಕ್ಟ್ (WatsDirect) ಇದಕ್ಕೊಂದು ಉತ್ತಮ ಉದಾಹರಣೆ. ಇದರಲ್ಲಿ ಫೋನ್ ನಂಬರ್ ನಮೂದಿಸಿ ಡೈರೆಕ್ಟ್ ಚಾಟ್ ಮಾಡುವ ಆಪ್ಶನ್ ಇದೆ. ಈ ಪೇಜ್ ಡೈರೆಕ್ಟ್ ಆಗಿ ವಾಟ್ಸಾಪ್ ಜೊತೆ ಕನೆಕ್ಟ್ ಆಗುತ್ತದೆ.
ಇದನ್ನೂ ಓದಿ : Jio ₹1 Prepaid Plan : ಕೇವಲ 1 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್ ಪರಿಚಯಿಸಿದ ರಿಲಯನ್ಸ್ ಜಿಯೋ
ಇದನ್ನೂ ಓದಿ : ವರ್ಕ್ ಫ್ರಂ ಹೋಂ ಮಾಡುವವರಿಗೆ ಕೇವಲ 19,999 ರೂ. ಬೆಲೆಯ ಉತ್ತಮ ಲ್ಯಾಪ್‌ಟಾಪ್ ಇಲ್ಲಿದೆ
ಇದನ್ನು ಓದಿ: Marriage Age : ಬೇರೆ ಬೇರೆ ದೇಶಗಳಲ್ಲಿ ಎಷ್ಟು ವರ್ಷಕ್ಕೆ ಮದುವೆಯಾಗಬಹುದು?
(How to start a WhatsApp app chat without saving a number)