Woman consumes sanitiser : ಸ್ಯಾನಿಟೈಸರ್ ಸೇವಿಸಿ ಆತ್ಮಹತ್ಯೆಗೆ ಯತ್ನ: ಮಹಿಳೆಯನ್ನು ಖಾಕಿ ರಕ್ಷಿಸಿದ ಪರಿಯೇ ರೋಚಕ

Woman consumes sanitiser :ಸೋಶಿಯಲ್​ ಮೀಡಿಯಾವನ್ನು ನಾವು ಹೇಗೆ ಬಳಕೆ ಮಾಡುತ್ತೇವೆ ಎಂಬುದರ ಮೇಲೆ ನಾವು ಅದನ್ನು ಪೂರಕವೋ ಅಥವಾ ಮಾರಕವೋ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಆದರೆ ದೆಹಲಿಯಲ್ಲಿ ಸಂಭವಿಸಿದ ಘಟನೆಯೊಂದರಲ್ಲಿ ಸೋಶಿಯಲ್​ ಮೀಡಿಯಾ ಸಹಾಯದಿಂದ ಪೊಲೀಸರು ಮಹಿಳೆಯ ಜೀವವನ್ನು ಕಾಪಾಡಿದ್ದಾರೆ.


ಉತ್ತರ ದೆಹಲಿಯ ಭಾಗದಲ್ಲಿ ಪತಿಯ ಜೊತೆ ವಾಸವಿದ್ದ ಮಹಿಳೆಯು ಆತ್ಮಹತ್ಯೆಗೆ ಮುಂದಾಗಿದ್ದಳು. ಆದರೆ ಆಕೆ ಆತ್ಮಹತ್ಯೆಗೂ ಮುನ್ನ ಇನ್​ಸ್ಟಾಗ್ರಾಂ ಲೈವ್​ ಬಂದಿದ್ದಾಳೆ. ಇನ್​ಸ್ಟಾಗ್ರಾಂ ಲೈವ್​ನಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದು ಮಾತ್ರವಲ್ಲದೇ ಸ್ಯಾನಿಟೈಸರ್​ ಸೇವನೆ ಮಾಡಿದ್ದಾಳೆ.


ಈ ವಿಚಾರವನ್ನು ಅರಿತ ದೆಹಲಿ ಸೈಬರ್​​ ಸೆಲ್​ ವಿಭಾಗ ಕೂಡಲೇ ಮಾಹಿತಿಯನ್ನು ದೆಹಲಿ ಪೊಲೀಸರಿಗೆ ರವಾನಿಸಿದೆ. ರಾತ್ರಿ 9:55ರ ಸುಮಾರಿಗೆ ಮಹಿಳೆ ಇನ್​ಸ್ಟಾಗ್ರಾಂ ಲೈವ್​ ಬಂದಿದ್ದರೆ ಪೊಲೀಸರು ಎಂಟು ನಿಮಿಷಕ್ಕೂ ಕಡಿಮೆ ಸಮಯದಲ್ಲಿ ಅಂದರೆ 10:55ರ ಒಳಗಾಗಿ ಮಹಿಳೆಯನ್ನು ಟ್ರ್ಯಾಕ್​ ಮಾಡಿ ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಿದ್ದಾರೆ.


ಮಹಿಳೆ ಮೊಬೈಲ್​ ಸಂಖ್ಯೆಯನ್ನು ಪಡೆದ ಪೊಲೀಸರು, ಒಂದು ಮೊಬೈಲ್​ನಲ್ಲಿ ಜಿಪಿಎಸ್​ ಆನ್​ ಮಾಡಿಕೊಂಡು ಮತ್ತೊಂದು ಮೊಬೈಲ್​​ನಲ್ಲಿ ಮಹಿಳೆಗೆ ಕರೆ ಮಾಡಿದ್ದಾರೆ. ಮಹಿಳೆಯು ರಸ್ತೆಯ ಬದಿ ನಿಂತು ಇನ್​ಸ್ಟಾಗ್ರಾಂ ಲೈವ್​ ಮಾಡುತ್ತಿದ್ದಳು. 8 ನಿಮಿಷಗಳ ಕಾಲ ಮಹಿಳೆಯ ಜೊತೆ ನಿರಂತರ ಸಂಪರ್ಕದಲ್ಲಿದ್ದ ಪೊಲೀಸರು ಕೊನೆಗೂ ಆಕೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.


ಇನ್ನು ಈ ವಿಚಾರವಾಗಿ ಮಾತನಾಡಿದ ಡಿಸಿಪಿ ಸಾಗರ್​ ಸಿಂಗ್​ ಕಲ್ಸಿ, ಸೈಬರ್​ ಸೆಲ್​ನಿಂದ ಈ ವಿಚಾರವಾಗಿ ಮಾಹಿತಿ ಪಡೆಯುತ್ತಿದ್ದಂತೆಯೇ ನಾವು ಕೂಡಲೇ ಅಲರ್ಟ್ ಆದೆವು. ಸೈಬರ್​ ಸೆಲ್​ ತಂಡವು ನಮಗೆ ಮಹಿಳೆಯಿದ್ದ ಸ್ಥಳ ಹಾಗೂ ಮೊಬೈಲ್​ ನಂಬರ್​ ನೀಡಿತು.


ಈ ಪ್ರಕರಣದ ವಿಚಾರವಾಗಿ ಮಾತನಾಡಿದ ಡಿಸಿಪಿ ಸಾಗರ್​ ಸಿಂಗ್​ ಕಲ್ಸಿ ನಾವು ಸೈಬರ್​ ಸೆಲ್​ನಿಂದ ರಾತ್ರಿ 9:55ರ ಸುಮಾರಿಗೆ ಈ ವಿಡಿಯೋ ಬಗ್ಗೆ ಮಾಹಿತಿ ಪಡೆದಿದ್ದೆವು. ಸೈಬರ್​ ಸೆಲ್​ ತಂಡ ನಮಗೆ ಈ ವಿಡಿಯೋ ಯಾವ ಏರಿಯಾದಿಂದ ಚಿತ್ರೀಕರಿಸಲಾಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿತ್ತು.


ನಾವು ಕೂಡಲೇ ಸ್ಟೇಷನ್​ ಹೌಸ್​ ಆಫೀಸರ್​ ರಾಜೇಂದ್ರ ಪ್ರಸಾದ್​​​ರನ್ನು ಸಂಪರ್ಕಿಸಿದೆವು. ಹಾಗೂ ಆ ಏರಿಯಾದಲ್ಲಿದ್ದ ಮಹಿಳೆಗಾಗಿ ತಲಾಶ್​ ಆರಂಭವಾಯ್ತು. ಆಕೆಯ ಸರಿಯಾದ ವಿಳಾಸವನ್ನು ಪಡೆದುಕೊಳ್ಳಲು ಆಕೆಯನ್ನು ಫೋನ್​ ಮೂಲಕ ಸಂಪರ್ಕಿಸಲಾಗಿತ್ತು ಎಂದು ಹೇಳಿದರು.

Delhi: Woman consumes sanitiser on Instagram Live, rescued by cops

ಇದನ್ನು ಓದಿ : Bill Against family politics : ಕುಟುಂಬ ರಾಜಕಾರಣದ ವಿರುದ್ಧ ಮಸೂದೆ ತನ್ನಿ: ಕೈ, ಕಮಲ‌ ಪಾಳಯಕ್ಕೆ ಎಚ್.ಡಿ.ರೇವಣ್ಣ ಸವಾಲು

ಇದನ್ನೂ ಓದಿ : woman shoots at boyfriend : ಪ್ರೀತಿಯಲ್ಲಿ ಹೆಚ್ಚಿದ ಅಂತರ; ಪ್ರಿಯತಮೆಯಿಂದಲೇ ಪ್ರಿಯತಮನ ಮೇಲೆ ಫೈರಿಂಗ್​..!

Comments are closed.