Google Photos : ನಿಮ್ಮ ಫೋನಿನ ಮೆಮೊರಿ ಉಳಿಸುವ ಗೂಗಲ್‌ ಫೋಟೋದ ಈ ಟ್ರಿಕ್‌ ನಿಮಗೆ ಗೊತ್ತಾ..

ಈಗ ಎಲ್ಲರಿಗೂ ಪೋಟೋ (Photo) ಕ್ಲಿಕ್ಕಿಸುವುದು, ವೀಡಿಯೋ (Video) ಮಾಡಿಕೊಳ್ಳುವುದು ಹವ್ಯಾಸವಾಗಿಬಿಟ್ಟಿದೆ. ಹಾಗೆ ಕ್ಲಿಕ್ಕಿಸಿದ ಕೆಲವು ಫೋಟೋಗಳು ಅವಶ್ಯಕವಾಗಿದ್ದರೆ, ಇನ್ನು ಕೆಲವು ಒಳ್ಳೆಯ ನೆನಪಾಗಿರುತ್ತವೆ. ಹಾಗಾಗಿ ಆ ಎಲ್ಲ ಫೋಟೋಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಬೇಕೆಂಬ ಹಂಬಲವಿರುತ್ತದೆ. ಆದರೆ ಇದರಿಂದ ಫೋನಿನ ಮೆಮೋರಿ ಬಹು ಬೇಗನೆ ಖಾಲಿಯಾಗುತ್ತದೆ. ಅಂದರೆ ಮೊಮೋರಿ ಫುಲ್‌ (Memory Full) ಆಗಿಬಿಡುತ್ತದೆ. ಗೂಗಲ್ ನ ಆಂಡ್ರಾಯ್ಡ್ ಸಿಸ್ಟಂ ಈ ಸ್ಟೋರೇಜ್‌ ಸಮಸ್ಯೆಯನ್ನು ಸರಾಗವಾಗಿ ಕಾರ್ಯನಿರ್ವಹಿಸುತ್ತದೆ. ಗೂಗಲ್‌ ಫೋಟೋಸ್‌ ಕ್ಲೌಡ್- ಇದೊಂದು ಫೋಟೋ ಲೈಬ್ರರಿಯಾಗಿ ಕೆಲಸಮಾಡುತ್ತದೆ. ಅನೇಕ ಜನರು ತಮ್ಮ ಫೋನ್‌ನಲ್ಲಿ ಫೋಟೋಗಳನ್ನು ಸೇವ್‌ ಮಾಡುವ ಬದಲು ಗೂಗಲ್‌ ಫೋಟೋಸ್‌ (Google Photos) ನಲ್ಲಿ ಸೇವ್‌ ಮಾಡಲು ಬಯಸುತ್ತಾರೆ. ಆದರೆ, ಕೆಲವೊಬ್ಬರು ಇದನ್ನು ಬಳಸಿದಾಗ ಫೋಟೋಗಳನ್ನು ಮೂಲ ಗುಣಮಟ್ಟದಲ್ಲಿ ಉಳಿಸಲಾಗಿಲ್ಲ ಎಂದು ಹೇಳುತ್ತಾರೆ. ಫೋಟೋಗಳನ್ನು ಮೂಲ ಗುಣಮಟ್ಟದಲ್ಲಿ ಬ್ಯಾಕಪ್ ಮಾಡಲು ಗೂಗಲ್ ಸಹಾಯ ಮಾಡುತ್ತದೆ. ಹೇಗೆಂದರೆ ಇಲ್ಲಿದೆ ಓದಿ.

ಫ್ರೀ ಅಪ್‌ ಸ್ಪೇಸ್‌ ಅನ್ನು ಬಳಸುವುದು ಹೇಗೆ?
ಒಮ್ಮೆ ನೀವು ಫೋಟೋಗಳನ್ನು ಯಶಸ್ವಿಯಾಗಿ ಬ್ಯಾಕಪ್ ಮಾಡಿದ ನಂತರ, ನಿಮ್ಮ ಒರಿಜನಲ್‌ ಫೈಲ್‌ಗಳನ್ನು ಸಹ ಅಳಿಸಬಹುದು. ವಾಸ್ತವವಾಗಿ, ಟೈಮ್‌–ಟು–ಟೈಮ್‌ ಫೋಟೋಗಳು ಮತ್ತು ವೀಡಿಯೊಗಳು ಹತ್ತಾರು GBಗಳಾಗಿ ಸಂಗ್ರಹಿಸಲ್ಪಡುತ್ತದೆ. ಇವುಗಳನ್ನು ಮೂಲಭೂತವಾಗಿ ಎರಡು ಸ್ಥಳಗಳಲ್ಲಿ ಸಂಗ್ರಹಿಸಲಾಗುತ್ತದೆ. ಒಂದು ಸ್ಥಳವು ಕ್ಲೌಡ್‌ನಲ್ಲಾದರೆ ಇನ್ನೊಂದು ಫೋನ್‌ನಲ್ಲಿ. ಗೂಗಲ್‌ ಫೋಟೋಸ್‌ ನಲ್ಲಿರುವ ಫ್ರೀ ಅಪ್‌ ಸ್ಪೇಸ್‌ ಟೂಲ್‌ ಉಪಯೋಗಿಸಿಕೊಳ್ಳಬಹುದು. ಇವುಗಳನ್ನು ಸುರಕ್ಷಿತವಾಗಿ ಬ್ಯಾಕಪ್‌ ಮಾಡಲಾಗುತ್ತದೆ. ಹೀಗೆ ಒಮ್ಮೆ ಬ್ಯಾಕಪ್‌ ಮಾಡಿದ ನಂತರ ಫೋಟೊಗಳನ್ನು ಆಟೋಮೆಟಿಕ್ ಆಗಿ ತೆಗೆದುಹಾಕುವ ಅಪ್ಲಿಕೇಶನ್‌ ಅನ್ನು ಬಳಸಿಕೊಳ್ಳಬಹುದು.
ಇದನ್ನು ಮಾಡಲು ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ.

ಇದನ್ನೂ ಓದಿ: Infinix Hot 30i : ಸಿಂಗಲ್‌ ಚಾರ್ಜ್‌ನಲ್ಲಿ ದಿನಪೂರ್ತಿ ಓಡುವ ಇನ್‌ಫಿನಿಕ್ಸ್‌ ಹಾಟ್‌ 30i ಬಿಡುಗಡೆ. ಬೆಲೆ ಕೇಳಿದರೆ ಇಷ್ಟೇನಾ ಅಂತೀರಾ…

  • ಗೂಗಲ್‌ ಫೋಟೋಸ್‌ ಅಪ್ಲಿಕೇಶನ್‌ನಲ್ಲಿ, ಲೈಬ್ರರಿ ಟ್ಯಾಬ್‌ಗೆ ಹೋಗಿ.
  • ಮೇಲ್ಭಾಗದಲ್ಲಿಯ ಯುಟಿಲಿಟಿಯ ಮೇಲೆ ಟ್ಯಾಪ್‌ ಮಾಡಿ.
  • ಈಗ ಫ್ರೀ ಅಪ್‌ ಸ್ಪೇಸ್‌ ಮೇಲೆ ಟ್ಯಾಪ್‌ ಮಾಡಿ.
  • ಈಗ ಲೋಕಲ್‌ ಫೋಟೋ ಕಾಪಿಗಳನ್ನು ಅಳಿಸಲು ಫ್ರೀ ಅಪ್ ಕ್ಲಿಕ್ ಮಾಡಿ.

‌ಗಮನಿಸಿ : ಒಮ್ಮೆ ಈ ಪ್ರಕ್ರಿಯೆಯನ್ನು ಪ್ರಾರಂಭಿಸಿದರೆ, ಗೂಗಲ್‌ ಫೋಟೋಸ್‌ ಅದನ್ನು ನೋಡಿಕೊಳ್ಳುತ್ತದೆ. ಇದು ಕ್ಲೌಡ್‌ನಲ್ಲಿ ಕಾಪಿ ಫೋಟೋಗಳನ್ನು ಮಾತ್ರ ಅಳಿಸುತ್ತದೆ. ಲೋಕಲ್‌ ಫೋಟೋಗಳು ಹಾಗೆಯೇ ಸೆಕ್ಯೂರ್‌ ಆಗಿ ಇರುತ್ತವೆ.

ಇದನ್ನೂ ಓದಿ: Smart Watches : ಎರಡು ಸಾವಿರ ರೂಪಾಯಿಗಳ ಒಳಗೆ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್ ವಾಚ್‌ಗಳು

(How to use free up space tab in google photos and maintain storage in smartphone)

Comments are closed.