Consuming carbon monoxide-6 died: ಸೊಳ್ಳೆ ಬತ್ತಿ ಹಚ್ಚುವ ಮುನ್ನ ಹುಷಾರ್ : ಒಂದೇ ಕುಟುಂಬದ 6 ಮಂದಿ ಬಲಿ

ನವದೆಹಲಿ : (Consuming carbon monoxide-6 died) ಕುಟುಂಬವೊಂದರಲ್ಲಿ ಸೊಳ್ಳೆ ಕಾಟದಿಂದ ಪಾರಾಗಲು ಸೊಳ್ಳು ಬತ್ತಿ ಹಚ್ಚಿದ್ದು, ಸೊಳ್ಳೆ ಬತ್ತಿಯ ಹೊಗೆಯಿಂದ ಆರು ಮಂದಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ದೆಹಲಿಯ ಮಝರ್‌ ವಾಲಾ ರಸ್ತೆಯ ಶಾಸ್ತ್ರಿ ಪಾರ್ಕ್‌ ಬಳಿಯ ಮಸ್ತಿ ಮಾರ್ಕೆಟ್ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದರೆ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಶಾಸ್ತ್ರಿ ಪಾರ್ಕ್‌ ಪ್ರದೇಶದ ಬಳಿಯಲ್ಲಿ ವಾಸವಾಗಿದ್ದ ಕುಟುಂಬವೊಂದು ರಾತ್ರಿಯ ವೇಳೆ ಸೊಳ್ಳೆ ಕಾಟದಿಂದಾಗಿ ಮನೆಯಲ್ಲಿ ಸೊಳ್ಳೆ ಬತ್ತಿ ಹಚ್ಚಿ ಕುಳಿತಿದ್ದರು. ಈ ವೇಳೆ ಸೊಳ್ಳೆ ಬತ್ತಿಯಿಂದ ಬಿಡುಗಡೆಯಾಗುವ ಕಾರ್ಬನ್‌ ಮೋನೋಕ್ಸೈಡ್‌ ಅನಿಲವನ್ನು ಸೇವಿಸಿ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಘಟನೆಯ ಬಗ್ಗೆ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪೊಲೀಸರು ಇಬ್ಬರು ಜೀವಂತವಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಪೊಲೀಸರು ಜ್ಯಾಗ್‌ ಪ್ರವೇಶ್‌ ಚಂದ್ರ ಆಸ್ಪತ್ರೆಗೆ ದಾಖಲಿಸಿದ್ದಾರೆ. ” ಸೊಳ್ಳೆ ಬತ್ತಿಯಿಂದ ಬಿಡುಗಡೆಯಾದ ಕಾರ್ಬನ್‌ ಮೊನೊಕ್ಸೈಡ್‌ ಹೊಗೆಯನ್ನು ಸೇವಿಸಿ ಶಾಸ್ತ್ರಿ ಪಾರ್ಕ್‌ ಸಮೀಪದಲ್ಲಿ ವಾಸವಾಗಿದ್ದ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ. ಬತ್ತಿಯಿಂ ಬಿಡುಗಡೆಯಾದ ಅನಿಲ ಸೇವಿಸಿದ ಆರು ಮಂದಿ ಮೊದಲು ಪ್ರಜ್ಞಾಹೀನರಾಗಿದ್ದು, ನಂತರ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ” ಎಂದು ಡಿಸಿಪಿ ತಿಳಿಸಿದ್ದಾರೆ.

ಡಿಸಿಪಿ ಪ್ರಕಾರ, ಇಬ್ಬರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟವರಲ್ಲಿ ನಾಲ್ಕು ಮಂದಿ ಪುರುಷರು, ಓರ್ವ ಮಹಿಳೆ ಹಾಗೂ ಆರು ತಿಂಗಳ ಮಗು ಸೇರಿದ್ದು, ಓರ್ವ ಮಹಿಳೆ ಹಾಗೂ ಹದಿನೈದು ವರ್ಷದ ಬಾಲಕಿ ಗಾಯಗೊಂಡಿದ್ದಾರೆ. ಸದ್ಯ ಘಟನೆಯ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Suicide on lodge: ಮಂಗಳೂರಿನ ಲಾಡ್ಜ್ ನಲ್ಲಿ ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ

ಇದನ್ನೂ ಓದಿ : Dhaiva nartaka death : ದೈವ ನರ್ತನ ಸೇವೆ ಮಾಡುತ್ತಿರುವಾಗಲೇ ಕುಸಿದು ಬಿದ್ದು ದೈವ ನರ್ತಕ ಸಾವು

Consuming carbon monoxide-6 died: Be careful before burning mosquito nets: 6 members of the same family died

Comments are closed.