ನಿಮಗೆ ಗೊತ್ತೇ: ಮಾನವ ಮೂತ್ರದಿಂದಲೂ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡಬಹುದು

(Human urine charges smartphone) ಈಗಿನ ಕಾಲದಲ್ಲಿ ಪ್ರತಿಯೊಬ್ಬರ ಬಳಿಯೂ ಸ್ಮಾರ್ಟ್ಫೋನ್‌ ಇದ್ದೇ ಇದೆ. ವಿದ್ಯಾವಂತರಿಂದ ಹಿಡಿದು ಅವಿದ್ಯಾವಂತರೂ ಕೂಡ ಸ್ಮಾರ್ಟ್‌ ಫೋನ್‌ ಬಳಸುತ್ತಿದ್ದಾರೆ. ಆದರೆ ಎಲ್ಲರಿಗೂ ಮೊಬೈಲ್‌ ಬಳಸುವಾಗ ಬರುವ ಒಂದೇ ಒಂದು ಸಮಸ್ಯೆಯೆಂದರೆ ಅದು ಬ್ಯಾಟರಿ . ಕೆಲವು ಮೊಬೈಲ್‌ ಗಳಲ್ಲಿ ಫುಲ್‌ ಚಾರ್ಜ್‌ ಮಾಡಿದರೂ ಕೂಡ ಕೆಲವೇ ನಿಮಿಷಗಳಲ್ಲಿ ಅದು ಖಾಲಿಯಾಗಿರುತ್ತೆ. ಹೀಗಿರುವಾಗ ದೂರದ ಊರಿಗೆ ಹೋದಾಗ ಈ ಸಮಸ್ಯೆ ಎದುರಾದರೆ ಫೋನ್‌ ಸ್ವಿಚ್‌ ಆಫ್‌ ಮಾಡಬೇಕಾಗುತ್ತದೆ ಹೀಗಾಗಿ ಕೆಲವರು ಮೊಬೈಲ್‌ ಜೊತೆಗೆ ಪವರ್‌ ಬ್ಯಾಂಕ್‌ ಹೊತ್ತೊಯ್ಯುತ್ತಾರೆ.

ಆದರೆ ಇನ್ನು ಮುಂದೆ ಇದರ ಅಗತ್ಯವಿಲ್ಲ. ಎಲ್ಲಾದರೂ ಹೋದಾಗ ಮೊಬೈಲ್‌ ಚಾರ್ಜ್‌ ಮುಗಿದರೆ ಪವರ್‌ ಬ್ಯಾಂಕ್‌ ಚಾರ್ಜರ್‌ ನ ಅಗತ್ಯವಿಲ್ಲ. ಬದಲಾಗಿ ಮಾನವರ ಮೂತ್ರದ ಮೂಲಕ ಫೋನ್‌ ಅನ್ನು ಚಾರ್ಜ್‌ ಮಾಡಿಕೊಳ್ಳಬಹುದು. ದೇಹದಿಂದ ಹೊರಬರುವ ಮೂತ್ರದಲ್ಲಿ ವಿದ್ಯುತ್‌ ಉತ್ಪಾದನೆಯಾಗುತ್ತದೆ ಎನ್ನುವುದು ಎಷ್ಟು ಜನರಿಗೆ ಗೊತ್ತು? ಹೌದು ದೇಹದಿಂದ ಹೊರಬರುವ ಮೂತ್ರದಿಂದ ವಿದ್ಯುತ್‌ ಉತ್ಪತ್ತಿಯಾಗುತ್ತದೆ. ಈ ಶಕ್ತಿಯಿಂದ ಉತ್ಪತ್ತಿಯಾಗುವ ವಿದ್ಯುತ್‌ ನಿಂದ ಮೊಬೈಲ್‌ ಅಥವಾ ಲ್ಯಾಪ್‌ ಟಾಪ್‌ ಅನ್ನು ಚಾರ್ಜ್‌ ಮಾಡಬಹುದು.

ಈ ಪ್ರಯೋಗವನ್ನು ಸಾಧ್ಯವಾಗಿಸಲು ಬ್ರಿಟನ್‌ ನ ವಿಜ್ಞಾನಿಗಳ ತಂಡ ನಿರಂತರವಾಗಿ ಪ್ರಯೋಗಗಳನ್ನು ನಡೆಸುತ್ತಿದೆ. ವರದಿಗಳ ಪ್ರಕಾರ, ಈ ಕೆಲಸದಲ್ಲಿ ಯಶಸ್ಸನ್ನು ಸಾಧಿಸಿದ್ದು, ಮಾನವ ಮೂತ್ರದಿಂದ ವಿದ್ಯುತ್‌ ಉತ್ಪಾದಿಸಿದರೆ ಅದು ಭವಿಷ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಏಕೆಂದರೆ ಮಾನವ ಮಲವಿಸರ್ಜನೆಯು ನವೀಕರಿಸಬಹುದಾದ ಸಂಪನ್ಮೂಲವಾಗಿದ್ದು, ಮೂತ್ರದಿಂದ ಉತ್ಪತ್ತಿಯಾಗುವ ವಿದ್ಯುತ್‌ ಮೂಲಕ ಚಿಕ್ಕ ಮೊಬೈಲ್‌ ಅನ್ನು ಚಾರ್ಜ್‌ ಮಾಡಬಹುದು ಎಂದು ಪ್ರಯೋಗಗಳು ಸಾಬೀತುಪಡಿಸಿದೆ.

ಈ ರೀತಿಯ ವಿದ್ಯುತ್‌ ಉತ್ಪಾದನಾ ಪ್ರಕ್ರಿಯೆಯನ್ನು ಕೈಗೊಳ್ಳಲು ಮೈಕ್ರೊಬಿಯಲ್‌ ಫ್ಯೂಯಲ್‌ ಸೇಲ್‌ ಅನ್ನು ಬಳಸಲಾಗುತ್ತದೆ. ಇದು ಶಕ್ತಿಯನ್ನು ಪರಿವರ್ತನೆ ಮಾಡುತ್ತದೆ. ಇದಕ್ಕಾಗಿ ಮೂತ್ರದಲ್ಲಿ ಕೆಲವು ಬ್ಯಾಕ್ಟೀರಿಯಾಗಳು ಬೆರೆತಿರುತ್ತವೆ. ಬ್ರಿಸ್ಟಲ್‌ ರೋಬೋಟಿಕ್ಸ್‌ ಪ್ರಯೋಗಾಲಯದಲ್ಲಿ ಮೂತ್ರದಿಂದ ತಯಾರಿಸಿದ ಮೂತ್ರದಿಂದ ತಯಾರಿಸಿದ ಈ ವಿದ್ಯುತ್ ಉಚಿತವಾಗಿರುತ್ತದೆ. ವಿಜ್ಞಾನಿಗಳ ಪ್ರಕಾರ, ಈ ತಂತ್ರಜ್ಞಾನ ಯಶಸ್ವಿಯಾದರೆ, ಇದನ್ನು ಸ್ನಾನಗೃಹಗಳಲ್ಲಿ ಬಳಸಬಹುದು. ಈ ವಿದ್ಯುತ್ ಶವರ್, ಲೈಟಿಂಗ್, ರೇಜರ್‌ಗಳು ಮತ್ತು ಸ್ಮಾರ್ಟ್‌ಹೋಮ್‌ ಡಿವೈಸ್​ಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಗೋವಿನ ಸಗಣಿ ಮತ್ತು ಮೂತ್ರದಿಂದ ಇಂಧನವನ್ನು ಪಡೆಯುವುದು ನಮಗೆಲ್ಲರಿಗೂ ತಿಳಿದಿದೆ. ಮಾನವನ ಮಲಮೂತ್ರ ಸಹ ಈಗ ಈ ಸಾಲಿಗೆ ಸೇರ್ಪಡೆಯಾಗಲಿದೆ. ಮಾನವ ಮೂತ್ರದಿಂದ ಹೆಚ್ಚಿನ ಪ್ರಮಾಣದ ವಿದ್ಯುತ್ ಉತ್ಪಾದಿಸುವುದರಿಂದ ವಿದ್ಯುತ್ ಬೇಡಿಕೆಯನ್ನು ಪೂರೈಸಲುಇದು ಸಹಾಯ ಮಾಡುತ್ತದೆ. ಏಕೆಂದರೆ, ಪ್ರಸ್ತುತ ವಿದ್ಯುತ್ ಅಗತ್ಯವನ್ನು ನೋಡಿದರೆ, ವಿದ್ಯುತ್ ಉತ್ಪಾದನಾ ವಲಯದ ಮೇಲೆ ಭಾರೀ ಒತ್ತಡವಿದೆ. ಈ ಕಾರಣಕ್ಕೆ ವಿಜ್ಞಾನಿಗಳು ವಿದ್ಯುತ್‌ ಉತ್ಪಾದನೆಯ ಹೊಸ ಮೂಲಗಳನ್ನು ಕಂಡುಹಿಡಿಯುವಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ : Twitter Shuts 2 Office : ದೆಹಲಿ ಮತ್ತು ಮುಂಬೈನಲ್ಲಿರುವ ಟ್ವಿಟರ್‌ ಕಛೇರಿಗೆ ಬೀಗ ಹಾಕಿದ ಎಲಾನ್‌ ಮಸ್ಕ್‌; ಕಾರಣ ಏನು ಗೊತ್ತಾ…

Human urine charges smartphone: Did you know: Human urine can also charge a smartphone

Comments are closed.