ವಾಟ್ಸಾಪ್ ಇಂದಿನ ಕಾಲದಲ್ಲಿ ಅತ್ಯವಶ್ಯಕ ಮತ್ತು ಅನಿವಾರ್ಯ ಎಂಬಂತಾಗಿದೆ. ಒಂದು ಫೋನ್ ಕಾಲ್ ಮಾಡುವ ಬದಲು ವಾಟ್ಸಾಪ್ ಮಾಡಿ ಎಂಬಷ್ಟರಮಟ್ಟಿಗೆ ಅದು ನಮ್ಮ ಜೀವನದ ಸಂವನ ಪ್ರಕ್ರಿಯೆಯನ್ನು ಆವರಿಸಿದೆ. ಆದರೆ ವಾಟ್ಸಾಪ್‌ನಂತಹ (WhatsApp) ಖಾಸಗಿ ಕಂಪನಿಯ ಸೇವೆಯನ್ನು ಎಲ್ಲರೂ ಬಳಸಲು ಸಾದ್ಯವಿಲ್ಲ. ಗೌಪ್ಯತೆ (Privacy) ಮತ್ತು ಭದ್ರತೆಯ (Security) ದೃಷ್ಟಿಯಿಂದ ಸೇನೆ, ರಕ್ಷಣೆಗೆ ಸಂಬಂಧಿಸಿದ ಸಿಬ್ಬಂದಿಗಳು ವಾಟ್ಸಾಪ್‌ನಲ್ಲಿ ಸಂವಹನ ನಡೆಸಲು ಸಾಧ್ಯವಿಲ್ಲ. ಆದರೆ ಇಂತಹ ಸಂದೇಶ ವಿನಿಮಯದ ಅಪ್ಲಿಕೇಶನ್ ಒಂದರ ಅಗತ್ಯವಿದೆ. ಇದನ್ನರಿತ ಭಾರತೀಯ ಸೇನೆಯು (Indian Army) ತನ್ನ ಸಿಬ್ಬಂದಿಗಳ ಉಪಯೋಗಕ್ಕಾಗಿ ASIGMA Army Messaging App ಎಂಬ ಅಪ್ಲಿಕೇಶನ್ ಒಂದನ್ನು ಬಿಡುಗಡೆಗೊಳಿಸಿದೆ.
ವಾಟ್ಸ್ಆ್ಯಪ್ ಮಾದರಿಯಲ್ಲಿ “ಅಸಿಗ್ಮಾ’ (ಆಮಿರ್ ಸೆಕ್ಯೂರ್ ಇಂಡಿಜಿನಿಸ್ ಮೆಸೇಜಿಂಗ್ ಅಪ್ಲಿಕೇಷನ್) ಎಂಬ ಸುರಕ್ಷಿತ ಆ್ಯಪ್ಅನ್ನು ಭಾರತೀಯ ಸೇನೆಯ ಸಿಗ್ನಿಲ್ ಕಾರ್ಪ್ಸ್ ವಿಭಾಗ ಅಭಿವೃದ್ಧಿ ಪಡಿಸಿದೆ. ಇದು ಸೇನೆಯ ಆಂತರಿಕ ಬಳಕೆಗೆ ಮಾತ್ರ ಇದ್ದು, ಆ್ಯಪ್ ಸ್ಟೋರ್ನಲ್ಲಿ ದೊರೆಯುವುದಿಲ್ಲ. ಸೇನೆಯಲ್ಲಿ 15 ವರ್ಷಗಳಿಂದ ಬಳಕೆಯಲ್ಲಿರುವ “ಆಮಿರ್ ವೈಡ್ ಏರಿಯಾ ನೆಟ್ವೆರ್ಕ್’ ಎಂಬ ಆ್ಯಪ್ಗೆ ಪರ್ಯಾಯವಾಗಿ ಅಸಿಗ್ಮಾ ಬಳಕೆಗೆ ಬರಲಿದೆ.
ASIGMA ಅಪ್ಲಿಕೇಶನ್ ಸರಳವಾಗಿ ಬಳಕೆದಾರರಿಗೆ ಅಗತ್ಯವಿರುವ ಎಲ್ಲ ಅವಶ್ಯಕತೆಗಳನ್ನು ಪೂರೈಸುತ್ತದೆ. ಗ್ರೂಪ್ ಚಾಟ್‌ಗಳು, ಚಿತ್ರ ಮತ್ತು ವೀಡಿಯೊ ಹಂಚುವಿಕೆ, ಧ್ವನಿ ಸಂದೇಶಗಳು ಮುಂತಾದ ಹಲವು ಆಪ್ಶನ್‌ಗಳನ್ನು ಬಳಕೆದಾರರಿಗೆ ಒದಗಿಸುತ್ತದೆ. ಟ್ರ್ಯಾಕಿಂಗ್ ಸೇರಿದಂತೆ ಸೈನ್ಯದ ಅವಶ್ಯಕತೆಗಳನ್ನು ಪೂರೈಸಲು ವಿವಿಧ ಆಯ್ಕೆಗಳನ್ನು ಒಳಗೊಂಡಂತೆ ವಿವಿಧ ಸಮಕಾಲೀನ ವೈಶಿಷ್ಟ್ಯಗಳನ್ನು ASIGMA ಅಪ್ಲಿಕೇಶನ್ ಒದಗಿಸುತ್ತದೆ
ASIGMA ಮೆಸೇಜಿಂಗ್ ಅಪ್ಲಿಕೇಶನ್ ವಿಶೇಷವಾಗಿ ಪ್ರಸ್ತುತ ಭೌಗೋಳಿಕ ರಾಜಕೀಯ ಭದ್ರತಾ ಪರಿಸರದಲ್ಲಿ ಸೇನೆಯ ರಿಯಲ್ ಟೈಮ್ ಡೇಟಾ ವರ್ಗಾವಣೆ ಮತ್ತು ಸಂದೇಶ ವಿನಿಮಯದ ಅಗತ್ಯತೆಗಳನ್ನು ಪೂರೈಸುತ್ತದೆ. ಅಲ್ಲದೇ ಇನ್ನೂ ವಿಶೇಷವೆಂದರೆ ಭಾರತ ಸರ್ಕಾರ ಇತ್ತೀಚಿಗೆ ಒತ್ತು ನೀಡುತ್ತಿರುವ ಮೇಕ್ ಇನ್ ಇಂಡಿಯಾ ಯೋಜನೆಯಡಿ ಈ ಅಪ್ಲಿಕೇಶನ್ ಅನ್ನು ರೂಪಿಸಲಾಗಿದೆ.
ಅಸಿಗ್ಮಾ ಆ್ಯಪ್ಗೆ ಅತ್ಯಾಧುನಿಕ ತಂತ್ರಜ್ಞಾನದ ಬೆಂಬಲ ಇದ್ದು, ಅನೇಕ ಹೊಸ ಫೀಚರ್ಗಳನ್ನು ಒಳಗೊಂಡಿದೆ. ಆದ್ದರಿಂದ ಸದ್ಯೋಭವಿಷ್ಯದ ಅವಶ್ಯಕತೆಯನ್ನು ಇದು ಈಡೇರಿಸಲಿದೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಆಶಯದಂತೆ ಮತ್ತು ಸಂವಹನದ ಸುರಕ್ಷತೆಗೆ ಗರಿಷ್ಠ ಒತ್ತು ನೀಡಿ ಈ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ. ಅಂದರೆ ಬಹುಹಂತದ ಭದ್ರತೆ, ಮೆಸೇಜ್ಗೆ ಆದ್ಯತೆ, ಟ್ರ್ಯಾಕಿಂಗ್, ಡೈನಮಿಕ್ ಗ್ಲೋಬಲ್ ಅಡ್ರೆಸ್ ಬುಕ್ ಸೇರಿದಂತೆ ಸೇನೆಯ ಅವಶ್ಯಕತೆಯನ್ನು ಪೂರೈಸುವಂತಹ ಎಲ್ಲ ಫೀಚರ್ಗಳು ಇದರಲ್ಲಿವೆ. ವಾಸ್ತವಿಕ ಅವಧಿಯಲ್ಲಿ ಡೇಟಾ ವರ್ಗಾವಣೆ ಆಗುತ್ತದೆ. ಮಿಕ್ಕಂತೆ ಸಾಮಾಜಿಕ ಜಾಲತಾಣದ ಆ್ಯಪ್ಗಳಲ್ಲಿ ಇರುವಂತೆ ಗ್ರೂಪ್ ಚಾಟ್, ವಿಡಿಯೋ ಮತ್ತು ಇಮೇಜ್ ಹಂಚಿಕೊಳ್ಳುವಿಕೆ, ಧ್ವನಿ ಸಂವಹನಗಳು ಇದರಲ್ಲಿ ಇವೆ ಎಂದು ಸೇನೆ ಕೇಂದ್ರ ಸರ್ಕಾರದ ವಾರ್ತಾ ಇಲಾಖೆ ಮೂಲಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Google Search Tricks : ಗೂಗಲ್ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು
(Indian Army launches messaging app ASIGMA)