Bombay High Court : ಮಹಿಳೆಯ ಪಾದವನ್ನು ಸ್ಪರ್ಶಿಸಿದರೂ ಮಾನಭಂಗಕ್ಕೆ ಸಮ: ಬಾಂಬೆ ಹೈಕೋರ್ಟ್​

Bombay High Court: ಹೆಣ್ಣು ಮಕ್ಕಳ ಸುರಕ್ಷತೆಗಾಗಿ ದೇಶದಲ್ಲಿ ಸಾಕಷ್ಟು ಕಾನೂನುಗಳು ಜಾರಿಗೆ ಬಂದಿವೆ. ನ್ಯಾಯಾಂಗ ವ್ಯವಸ್ಥೆ ಕೂಡ ಮಹಿಳೆಯರ ಗೌರವವನ್ನು ಕಳೆಯುವಂತಹ ಯಾವುದೇ ನಡೆಗಳಿಗೂ ಉತ್ತೇಜನ ನೀಡುವುದೇ ಇಲ್ಲ . ಈ ಹಿಂದೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವಿವಿಧ ಕೋರ್ಟ್​ಗಳು ನೀಡಿರುವ ತೀರ್ಪುಗಳನ್ನು ಅವಲೋಕಿಸಿದಾಗ ದೇಶದಲ್ಲಿ ಮಹಿಳೆಯರ ಆತ್ಮ ಗೌರವವನ್ನ ಕಾಪಾಡಲು ಏನೆಲ್ಲ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.


ಇದೀಗ ಇದೇ ಸಾಲಿಗೆ ಬಾಂಬೆ ಹೈಕೋರ್ಟ್​ನಲ್ಲಿ ವಿಚಾರಣೆಗೆ ಒಳಪಟ್ಟ ಪ್ರಕರಣವೊಂದು ಸೇರಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಮಧ್ಯರಾತ್ರಿಯ ಸಮಯದಲ್ಲಿ ಪರಿಚಿತ ಮಹಿಳೆಯ ಹಾಸಿಗೆಯ ಮೇಲೆ ಕುಳಿತುಕೊಂಡರೂ ಸಹ ಅಪಮಾನವೆಸಗಿದಂತೆ ಎಂದು ಮಹತ್ವದ ತೀರ್ಪನ್ನು ನೀಡಿದೆ.

ಔರಂಗಾಬಾದ್​​ನ ಜಲ್ನಾ ಜಿಲ್ಲೆಗೆ ಸೇರಿದ್ದ 36 ವರ್ಷದ ಪರಮೇಶ್ವರ್​ ಧಾಗೆ ಎಂಬವರು ಬಾಂಬೆ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು ಈ ಸಂಬಂಧ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್​ ಮಧ್ಯರಾತ್ರಿಯ ವೇಳೆಯಲ್ಲಿ ಮಹಿಳೆಯ ಹಾಸಿಗೆ ಮೇಲೆ ಕುಳಿತುಕೊಳ್ಳುವುದು ಹಾಗೂ ಆಕೆಯ ಪಾದಗಳನ್ನು ಮುಟ್ಟಲು ಯತ್ನಿಸುವುದು ಮಾನಭಂಗ ಮಾಡಿದಂತೆ ಎಂದು ತೀರ್ಪನ್ನು ನೀಡಿದೆ. ಅಪರಾಧಿ ಪರಮೇಶ್ವರ್​ ಧಾಗೆ 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

ಇದು 2014ರ ಜುಲೈನಲ್ಲಿ ನಡೆದ ಘಟನೆಯಾಗಿದೆ. ಆರೋಪಿ ಪರಮೇಶ್ವರ ಧಾಗೆ ಸಂತ್ರಸ್ತೆಯ ಮನೆಗೆ ತೆರಳಿ ಆಕೆಯ ಪತಿಯ ಬಗ್ಗೆ ಮಾಹಿತಿ ಕೇಳಿದ್ದ. ಪರಮೇಶ್ವರ ಧಾಗೆ ಪರಿಚಯಸ್ಥನೇ ಆಗಿದ್ದ ಕಾರಣ ಮಹಿಳೆಯು ತನ್ನ ಪತಿ ಪರ ಊರಿಗೆ ತೆರಳಿದ್ದಾಗಿಯೂ ಇಂದು ರಾತ್ರಿ ಆತ ಮನೆಗೆ ಬರುವುದಿಲ್ಲವೆಂದೂ ಹೇಳಿದ್ದಾಳೆ. ಆಕೆಯ ಪತಿ ಮನೆಯಲ್ಲಿ ಇಲ್ಲ ಎಂಬ ಮಾಹಿತಿ ತಿಳಿದಿದ್ದರೂ ಸಹ ರಾತ್ರಿ 11 ಗಂಟೆ ಸುಮಾರಿಗೆ ಮಹಿಳೆಯ ಮನೆಗೆ ತೆರಳಿದ್ದು ಮಾತ್ರವಲ್ಲದೇ ಆಕೆಯ ಮಲಗಿದ್ದ ಹಾಸಿಗೆ ಬಳಿ ತೆರಳಿ ಆಕೆಯ ಪಾದಗಳನ್ನು ಸ್ಪರ್ಶಿಸಿದ್ದಾನೆ.


ಹೀಗಾಗಿ ಅಪರಾಧಿ ಪರಮೇಶ್ವರ ಧಾಗೆಯು ನಾನು ಆಕೆಯ ಪಾದವನ್ನು ಮಾತ್ರ ಸ್ಪರ್ಶಿಸಿದ್ದೇನೆಯೇ ಹೊರತು ಮತ್ಯಾವುದೇ ಲೈಂಗಿಕ ದೌರ್ಜನ್ಯ ಎಸಗಿಲ್ಲ ಎಂದು ಕೋರ್ಟ್​ನಲ್ಲಿ ವಾದಿಸಿದ್ದ. ವಾದ – ಪ್ರತಿವಾದಗಳನ್ನು ಆಲಿಸಿದ ಬಾಂಬೆ ಹೈಕೋರ್ಟ್​ ಪರಮೇಶ್ವರ್​ ಮಹಿಳೆ ಮೇಲೆ ಅತ್ಯಾಚಾರವೆಸಗದೇ ಇದ್ದರೂ ಸಹ ರಾತ್ರಿಯ ವೇಳೆ ಆಕೆಯ ಮನೆಗೆ ತೆರಳಿ ಆಕೆ ಮಲಗಿದ್ದ ಹಾಸಿಗೆ ಮೇಲೆ ಕುಳಿತು ಆಕೆಯ ಪಾದವನ್ನು ಸ್ಪರ್ಶಿಸಿರುವುದರ ಹಿಂದೆ ಕೆಟ್ಟ ಉದ್ದೇಶವೇ ಇದೆ. ಅಲ್ಲದೇ ಆತ ಈವರೆಗೆ ಮಧ್ಯರಾತ್ರಿ ಮಹಿಳೆಯ ಮನೆಯಲ್ಲಿ ತನಗೇನು ಕೆಲಸವಿತ್ತು ಎಂಬುವುದಕ್ಕೆ ತೃಪ್ತಿಕರ ಉತ್ತರವನ್ನು ನೀಡಿಲ್ಲ . ಹೀಗಾಗಿ ಮಹಿಳೆಯ ಒಪ್ಪಿಗೆಯಿಲ್ಲದೇ ಆಕೆಯ ದೇಹದ ಯಾವುದೇ ಭಾಗವನ್ನು ಸ್ಪರ್ಶಿಸುವುದು, ರಾತ್ರಿಯ ವೇಳೆ ಮಹಿಳೆ ಮಲಗಿದ ಹಾಸಿಗೆ ಮೇಲೆ ಕುಳಿತುಕೊಳ್ಳವುದು ಮಹಿಳೆಗೆ ಮಾನಭಂಗ ಮಾಡಿದಂತೆ ಎಂದು ಆದೇಶ ನೀಡಿದೆ.

bombay high court gives verdict on attempt to rape case

ಇದನ್ನು ಓದಿ : Gangrape Instagram Friend: ಚಲಿಸುತ್ತಿದ್ದ ಕಾರಿನಲ್ಲಿ 18 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ ಇನ್‌ಸ್ಟಾಗ್ರಾಂ ಗೆಳೆಯ

ಇದನ್ನೂ ಓದಿ : Benefits of Banana : ಒಂದು ಬಾಳೆಹಣ್ಣಿನಲ್ಲಿ ಅಡಗಿದೆ ಅಗಾಧ ಪ್ರಮಾಣದ ಆರೋಗ್ಯಕರ ಅಂಶ

Comments are closed.