ಭಾನುವಾರ, ಏಪ್ರಿಲ್ 27, 2025
HometechnologyInstagram : ಹೊಸ ‘ನೋಟ್ಸ್‌’ ವೈಶಿಷ್ಟ್ಯ ಪರಿಚಯಿಸಿದ ಇನ್‌ಸ್ಟಾಗ್ರಾಮ್‌; ಬಳಸುವುದು ಹೇಗೆ ಅಂತೀರಾ

Instagram : ಹೊಸ ‘ನೋಟ್ಸ್‌’ ವೈಶಿಷ್ಟ್ಯ ಪರಿಚಯಿಸಿದ ಇನ್‌ಸ್ಟಾಗ್ರಾಮ್‌; ಬಳಸುವುದು ಹೇಗೆ ಅಂತೀರಾ

- Advertisement -

ಮೆಟಾದ ಒಡೆತನದಲ್ಲಿರುವ ಇನ್‌ಸ್ಟಾಗ್ರಾಮ್‌ (Instagram) ಬಳಕೆದಾರರ ಅನುಕೂಲಕ್ಕಾಗಿ ಆಗಾಗ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಬಂದಿದೆ. ಅವುಗಳ ಸಾಲಿಗೆ ಈಗ ‘ನೋಟ್ಸ್‌ (Notes)’ ಎಂಬ ವೈಶಿಷ್ಟ್ಯ ಸೇರಿಕೊಂಡಿದೆ. 60 ಅಕ್ಷರಗಳ ಮಿತಿಯಿರುವ ಸಣ್ಣ ಟಿಪ್ಪಣಿ (ನೋಟ್ಸ್‌) ಅನ್ನು ರಚಿಸಬಹುದಾಗಿದೆ. ಹೀಗೆ ರಚಿಸಿರುವ ಟಿಪ್ಪಣಿಗಳು DM ವಿಭಾಗದಲ್ಲಿ ಫಾಲೋವರ್ಸ್‌ಗಳಿಗೆ ಕಾಣಿಸುತ್ತದೆ. ಇದು ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ ನಂತೆ 24 ಗಂಟೆಗಳ ನಂತರ ಕಣ್ಮರೆಯಾಗುತ್ತದೆ. ಈ ನೋಟ್ಸ್‌ಗಳಿಗೆ ಫಾಲೋವರ್ಸ್‌ಗಳು ಕಳುಹಿಸುವ ಪ್ರತಿಕ್ರಿಯೆಗಳು DM ಗಳಾಗಿ ಕಾಣಿಸುತ್ತದೆ.

ನೋಟ್ಸ್‌ ವೈಶಿಷ್ಟ್ಯವು ಯಾವುದೇ ಅಡಚಣೆಗಳಲ್ಲದೆ ಮಾಹಿತಿಯನ್ನು ಹೊರಹಾಕುವ ಸುಲಭದ ಮಾರ್ಗವಾಗಿದೆ. ಸದ್ಯಕ್ಕೆ ನೀವು ಒಂದು ಬಾರಿಗೆ ಒಂದು ನೋಟ್ಸ್‌ಅನ್ನು ಮಾತ್ರ ಪೋಸ್ಟ್‌ ಮಾಡಬಹುದಾಗಿದೆ. ಒಂದು ವೇಳೆ ನೀವು 24 ಗಂಟೆಗಳ ಒಳಗೆ ಮತ್ತೊಮ್ಮೆ ಪೋಸ್ಟ್‌ ಮಾಡಿದರೆ ಈಗಾಗಲೇ ಇರುವ ನೋಟ್ಸ್‌ ಅನ್ನು ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ.

ನೋಟ್ಸ್‌ (ಟಿಪ್ಪಣಿ) ಬಳಸುವುದು ಹೇಗೆ?

  • ಹೊಸ ಆವೃತ್ತಿಯ ಇನ್‌ಸ್ಟಾಗ್ರಾಮ್‌ ಅನ್ನು ಅಪ್ಡೇಟ್‌ ಮಾಡಿಕೊಳ್ಳಿ.
  • ಇನ್‌ಸ್ಟಾಗ್ರಾಮ್‌ ಆಪ್‌ ತೆರೆಯಿರಿ.
  • DM ವಿಭಾಗಕ್ಕೆ ಹೋಗಿ.
  • ‘ಯುವರ್‌ ನೋಟ್‌’ ಮೇಲೆ ಟ್ಯಾಪ್‌ ಮಾಡಿ. ನಿಮ್ಮ ಮನಸ್ಸಿನಲ್ಲೇನಿದೆಯೋ ಅದನ್ನು ಟೈಪ್‌ ಮಾಡಿ.
  • ನಂತರ ನೀವು ಯಾರೊಂದಿಗೆ ಈ ನೋಟ್ಸ್‌ ಅನ್ನು ಹಂಚಿಕೊಳ್ಳಲು ಬಯಸುತ್ತೀರಿ ಎಂಬುದರ ಮೇಲೆ ಫಾಲೊವರ್ಸ್‌ ಮತ್ತು ಕ್ಲೋಸ್‌ ಫ್ರೆಂಡ್ಸ್‌ಗಳ ನಡುವೆ ಆಯ್ಕೆ ಮಾಡಿಕೊಳ್ಳಿ.
  • ನಂತರ ಶೇರ್‌ ಒತ್ತಿ.

ಇದನ್ನೂ ಓದಿ : Tata Tiago EV : ಇಂದು ಬಿಡುಗಡೆಯಾದ ಟಾಟಾ ಟಿಯಾಗೊ ಎಲೆಕ್ಟ್ರಿಕಲ್‌ ಕಾರ್‌; ಇದು ಜನಸಾಮಾನ್ಯರ ಕಾರ್‌ ಆಗಬಹುದೇ…

ಇದನ್ನೂ ಓದಿ : SAIL Recruitment 2022 : ಸ್ಟೀಲ್‌ ಅಥೋರಿಟಿ ಆಪ್‌ ಇಂಡಿಯಾದಲ್ಲಿ ಉದ್ಯೋಗಾವಕಾಶ : ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ

(Instagram launched a new notes feature. How it works)

RELATED ARTICLES

Most Popular