iQOO 11 5G Smartphone : ಇಂದು ಭಾರತದಲ್ಲಿ ಬಿಡುಗಡೆಯಾಗಲಿರುವ iQOO 11 5G ಸ್ಮಾರ್ಟ್‌ಫೋನ್‌

iQOO 11 5G ಸ್ಮಾರ್ಟ್‌ಫೋನ್‌ ಇಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಈ ಸ್ಮಾರ್ಟ್‌ಫೋನ್‌ ಇತ್ತೀಚಿಗಿನ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್‌ ಜೆನ್ 2 ಚಿಪ್‌ಸೆಟ್‌ನಿಂದ ಸಂಯೋಜಿಸಲ್ಪಟ್ಟಿರುವ ಕಂಪನಿಯ ಮೊದಲ ಸ್ಮಾರ್ಟ್‌ಫೋನ್‌ (iQOO 11 5G Smartphone) ಎಂದು ಕಂಪನಿ ಹೇಳಿಕೊಂಡಿದೆ. ನೈಟ್‌ಫೋಟೋಗ್ರಾಫಿಗಾಗಿ ಈ ಸ್ಮಾರ್ಟ್‌ಫೋನ್‌ ವಿವೋನ ಹೊಸ V2 ಚಿಪ್‌ಸೆಟ್‌ ಅನ್ನು ಹೊಂದಿದ್ದು, ಉತ್ತಮ ಛಾಯಾಗ್ರಹಣ ಅನುಭವ ನೀಡುವ ಭರವಸೆ ನೀಡಿದೆ. ಕಳೆದ ಡಿಸೆಂಬರ್‌ನಲ್ಲಿ iQOO ಚೀನಾದಲ್ಲಿ iQOO 11 ಮತ್ತು iQOO 11ಪ್ರೋ 5G ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿತ್ತು. ಆದರೆ ಕಂಪನಿಯು ಭಾರತದಲ್ಲಿ ವೆನಿಲ್ಲಾ iQOO 11 5G ರೂಪಾಂತರಗಳನ್ನು ಮಾತ್ರ ಪ್ರಾರಂಭಸಲಿದೆ. iQOOನ ಲ್ಯಾಂಡಿಗ್‌ ಪುಟದಲ್ಲಿ ಪಟ್ಟಿಮಾಡಿದಂತೆ ಇದುBMW ಮೋಟಾರ್‌ಸ್ಪೋರ್ಟ್‌–ಥೀಮ್ಡ್‌ ವಿನ್ಯಾಸವನ್ನು ಹೊಂದಿರಲಿದೆ. ಕಂಪನಿಯು ಈ ಸ್ಮಾರ್ಟ್‌ಫೋನ್‌ನ ಬಿಡುಗಡೆಯ ವಿಷಯವನ್ನು ತಿಳಿಸಲು ಸಾಮಾಜಿಕ ಮಾಧ್ಯಮ ಟ್ವಿಟರ್‌ ಮೂಲಕ ಹೇಳಿದೆ. ಕಂಪನಿಯು iQOO 11 5G ಸ್ಮಾರ್ಟ್‌ಫೋನ್‌ ಬಿಡುಗಡೆಯನ್ನು ಜನವರಿ 10 ರ (ಇಂದು) 12 ಗಂಟೆಗೆ ಪ್ರಾರಂಭಿಸಲಿದೆ.

iQOO 11 ವಿಶೇಷತೆಗಳು :
iQOO 11 5G ಸ್ಮಾರ್ಟ್‌ಫೋನ್‌ 144Hz ರಿಫ್ರೆಶ್ ದರದೊಂದಿಗೆ 6.78-ಇಂಚಿನ E6 AMOLED ಡಿಸ್ಪ್ಲೇಯನ್ನು ಹೊಂದಿರುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್‌ಕಾಮ್‌ನ ಇತ್ತೀಚಿನ ಸ್ನಾಪ್‌ಡ್ರಾಗನ್ 8+ ಜನ್ 2 ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ ಮತ್ತು ಉತ್ತಮ ಇಮೇಜ್ ಗುಣಮಟ್ಟಕ್ಕಾಗಿ Vivo V2 ಇಮೇಜ್ ಸಿಗ್ನಲ್ ಪ್ರೊಸೆಸರ್ ಅನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಇದು ತನ್ನದೇ ಸ್ವಂತ OxygenOS ಪದರದೊಂದಿಗೆ ಆಂಡ್ರಾಯ್ಡ್ 13 ರಿಂದ ಚಾಲನೆಗೊಳ್ಳಬಹುದು ಎಂದು ವದಂತಿಗಳು ಸೂಚಿಸುತ್ತವೆ. iQOO ಸ್ಮಾರ್ಟ್‌ಫೋನ್ ಎರಡು RAM ಆಯ್ಕೆಗಳಲ್ಲಿ ಬರುವ ನಿರೀಕ್ಷೆಯಿದೆ – 8GB ಮತ್ತು 12GB. ಮತ್ತು ಇದು ಮೂರು ಸಂಗ್ರಹಣೆಗಳಲ್ಲಿ 128GB, 256GB ಮತ್ತು 512GB ಯಲ್ಲಿ ಬರುವ ನಿರೀಕ್ಷೆಯಿದೆ.

ಇಂದು ಬಿಡುಗಡೆಯಾಗಲಿರುವ iQOO ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುತ್ತದೆ ಎಂದು ವರದಿಯಾಗಿದೆ. ಇದು 50MP ಮುಖ್ಯ ಸಂವೇದಕ, 13MP ಅಲ್ಟ್ರಾ-ವೈಡ್ ಶೂಟರ್ ಮತ್ತು 12MP ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಫೋನ್ ಪಂಚ್-ಹೋಲ್ ಡಿಸ್ಪ್ಲೇ ಮತ್ತು 16MP ಸೆಲ್ಫಿ ಶೂಟರ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಇನ್ನು ಬ್ಯಾಟರಿಯ ವಿಚಾರದಲ್ಲಿ iQOO11 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಪ್ಯಾಕ್‌ನೊಂದಿಗೆ ಬರುವ ನಿರೀಕ್ಷೆಯಿದೆ.

iQOO 11 5G ನಿರೀಕ್ಷಿತ ಬೆಲೆ ಮತ್ತು ಲಭ್ಯತೆ :
ವರದಿಗಳ ಪ್ರಕಾರ, iQOO 11 5G ಬೆಲೆ ಅಂದಾಜು 50,000 ರಿಂದ 60,000 ರೂ. ಒಳಗೆ ನಿರೀಕ್ಷಿಸಬಹುದಾಗಿದೆ. ಇದನ್ನು ಗ್ರಾಹಕರು ಜನವರಿ 13 ರಿಂದ ಅಮೆಜಾನ್‌ ವೆಬ್‌ಸೈಟ್‌ನ ಮೂಲಕ ಖರೀದಿಸಬಹುದಾಗಿದೆ.

ಇದನ್ನೂ ಓದಿ : Mahindra Thar 4X2 RWD : 9.99 ಲಕ್ಷಕ್ಕೆ ಥಾರ್‌ 4X2 RWD ಅನ್ನು ಪರಿಚಯಿಸಿದ ಮಹಿಂದ್ರ

ಇದನ್ನೂ ಓದಿ : PUC Anual exam timetable: 2022-2023ನೇ ಸಾಲಿನ ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

(iQOO 11 5G smartphone to launch in India today. Know the expecting features and price)

Comments are closed.