Bharat Jodo Yatra:ಭಾರತ್​ ಜೋಡೋ ಯಾತ್ರೆಯಲ್ಲಿ ಗಮನಸೆಳೆಯುತ್ತಿರುವ ಈ ಗಡ್ಡಧಾರಿ ವ್ಯಕ್ತಿ ಯಾರು ಗೊತ್ತೇ

ರಾಯಚೂರು : Bharat Jodo Yatra : ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆ ಆಂಧ್ರ ಪ್ರದೇಶದಿಂದ ಶುಕ್ರವಾರ ರಾಯಚೂರನ್ನು ತಲುಪಿದೆ. ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆಯಲ್ಲಿ ಹಲವಾರು ಜನರೊಂದಿಗೆ ಸಂಸದ ರಾಹುಲ್​ ಗಾಂಧಿ ಸಮಾಲೋಚನೆ ನಡೆಸಿದ್ದಾರೆ. ಈ ಭಾರತ್​ ಜೋಡೋ ಯಾತ್ರೆಯಲ್ಲಿ ರಾಹುಲ್​ ಗಾಂಧಿ ಜೊತೆಯಲ್ಲಿ ಮತ್ತೊಬ್ಬ ವ್ಯಕ್ತಿ ಹೈಲೈಟ್​ ಆಗ್ತಿದ್ದಾರೆ. ಅಂದಹಾಗೆ ಭಾರತ್​ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿರುವ ಈ ವ್ಯಕ್ತಿ ಇದೀಗ ಟಾಕ್​ ಆಫ್​ ದಿ ಟೌನ್ ಆಗಲು ಮುಖ್ಯ ಕಾರಣ ಇವರ ಗಡ್ಡ..!


ಹೌದು..! ಕೇರಳದ ಕೊಚ್ಚಿ ನಿವಾಸಿಯಾಗಿರುವ ಪ್ರವೀಣ್​ ಪರಮೇಶ್ವರ್​​ ಭಾರತ್​ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. 38 ವರ್ಷ ಪ್ರಾಯದ ಪ್ರವೀಣ್​ ಪರಮೇಶ್ವರ್​​ ಭಾರತದಲ್ಲಿಯೇ ಅತೀ ಉದ್ದದ ಗಡ್ಡವನ್ನು ಹೊಂದಿರುವ ವ್ಯಕ್ತಿ ಎಂಬ ಕೀರ್ತಿಯನ್ನು ಗಳಿಸಿದ್ದಾರೆ. ಇವರ ಗಡ್ಡ ಬರೋಬ್ಬರಿ ನಲವತ್ತು ಇಂಚು ಉದ್ದವಿದೆ. ಕಳೆದ ಎಂಟು ವರ್ಷಗಳಿಂದ ಗಡ್ಡ ಬೆಳೆಸುವ ಕಾರ್ಯ ಮಾಡುತ್ತಿರುವ ಪ್ರವೀಣ್​ ಪರಮೇಶ್ವರ್​ ಭಾರತ್​ ಜೋಡೋ ಯಾತ್ರೆಯಲ್ಲಿ ಸಖತ್​ ಹೈಲೈಟ್​ ಆಗ್ತಿದ್ದಾರೆ.


ನಲವತ್ತು ಇಂಚು ಗಡ್ಡದ ಮೂಲಕ ದೇಶದಲ್ಲಿಯೇ ಅತೀ ಉದ್ದದ ಗಡ್ಡವನ್ನು ಹೊಂದಿರುವ ವ್ಯಕ್ತಿ ಎನಿಸಿರುವ ಪ್ರವೀಣ್​ ಪರಮೇಶ್ವರ್​ ವಿಶ್ವದಲ್ಲಿ ಅತೀ ಉದ್ದದ ಗಡ್ಡವನ್ನು ಹೊಂದಿರುವ ಎರಡನೇ ವ್ಯಕ್ತಿ ಎನಿಸಿದ್ದಾರೆ. ಮೂಲತಃ ಟೆಕ್ಕಿಯಾಗಿದ್ದ ಪ್ರವೀಣ್​ ಪರಮೇಶ್ವರ್​ ಕಾಲ ಕ್ರಮೇಣ ಸಿನಿಮಾ ಕ್ಷೇತ್ರದತ್ತ ವಾಲಿದರು. ತಮಿಳು ಹಾಗೂ ಮಲಯಾಳಂನ ಕೆಲವು ಸಿನಿಮಾಗಳಲ್ಲಿ ನಟನೆ ಕೂಡ ಮಾಡಿರುವ ಪ್ರವೀಣ್​​ ಸಹಾಯಕ ನಿರ್ದೇಶಕರಾಗಿ ಕೂಡ ಕಾರ್ಯ ಮಾಡ್ತಿದ್ದಾರೆ.


ಇನ್ನು ಭಾರತ್​ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿರುವ ವಿಚಾರವಾಗಿ ಮಾತನಾಡಿದ ಗಡ್ಡಧಾರಿ ಪ್ರವೀಣ್​ ಪರಮೇಶ್ವರ್​, ನಾನು ರಾಹುಲ್​ ಗಾಂಧಿ ಅಭಿಮಾನಿಯಾಗಿದ್ದೇನೆ. ಭಾರತದಲ್ಲಿ ಪ್ರಸ್ತುತ ಭಾರತ್​ ಜೋಡೋ ಯಾತ್ರೆಯ ಮಹತ್ವ ಏನಿದೆ ಎಂಬುದನ್ನು ಅರಿತುಕೊಂಡು ನಾನು ಈ ಯಾತ್ರೆಗೆ ಸಾಥ್​ ನೀಡಿದ್ದೇನೆ. ಭಾರತ್​ ಜೋಡೋ ಯಾತ್ರೆಯಲ್ಲಿ ಕಾಶ್ಮೀರದವರೆಗೂ ನಾನು ತೆರಳುತ್ತೇನೆ. ಈ ಮೂಲಕ ನನ್ನ ದೇಶವನ್ನು ಅರ್ಥ ಮಾಡಿಕೊಳ್ಳುತ್ತೇನೆ. ಈ ಪಾದಯಾತ್ರೆಯಲ್ಲಿ ಭಾಗಿಯಾದರೆ ದೇಶದ ಎಲ್ಲಾ ಸಂಸ್ಕೃತಿಗಳನ್ನು ನೋಡೋಕೆ ಸಾಧ್ಯವಾಗುತ್ತೆ ಎಂದು ಹೇಳಿದ್ದಾರೆ.

ಇದನ್ನು ಓದಿ : ಕಾಂತಾರ ಸಿನಿಮಾ ಮೆಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ : ನಟ ಚೇತನ್ ಹೇಳಿಕೆಗೆ ಪ್ರತಿಕ್ರಿಯೆ

ಇದನ್ನೂ ಓದಿ : Gujarath Traffic rules: ಈ ರಾಜ್ಯದಲ್ಲಿ 7 ದಿನ ಟ್ರಾಫಿಕ್ ರೂಲ್ಸ್ ಇರಲ್ವಂತೆ.. ವಾಹನ ಸವಾರರಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್..!

Do you know who is this bearded man who is involved in Bharat Jodo Yatra?

Comments are closed.