Supreme Court : ಹಿಜಾಬ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಗೆ ಅರ್ಜಿ ಸಲ್ಲಿಸಿದ 66 ವರ್ಷದ ವೃದ್ಧೆ

ನವದೆಹಲಿ : ರಾಜ್ಯದಲ್ಲಿ ಈಗಾಗಲೇ ಸಂಚಲನ ಸೃಷ್ಟಿಸಿರೋ ಹಿಜಾಬ್ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣವಿಲ್ಲ. ಹೈಕೋರ್ಟ್ ಹಿಜಾಬ್ ಧಾರ್ಮಿಕ ಹಕ್ಕಲ್ಲ. ಸಮವಸ್ತ್ರ ಪಾಲಿಸ ಬೇಕೆಂದು ತೀರ್ಪು ನೀಡಿದೆ. ಈ‌ಮಧ್ಯೆ ಹೈಕೋರ್ಟ್ ತೀರ್ಪಿನ ವಿರುದ್ಧ ಅಸಮಧಾನ ವ್ಯಕ್ತಪಡಿಸಿರುವ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಈ‌ಮಧ್ಯೆ 66 ವರ್ಷದ ವೃದ್ಧ ಮಹಿಳೆಯೊರ್ವಳು ಹಿಜಾಬ್ ಹಕ್ಕಿಗಾಗಿ ಸುಪ್ರೀಂ‌ಕೋರ್ಟ್ ಮೊರೆ ಹೋಗಿದ್ದಾರೆ. ಹಿಜಾಬ್ (hijab) ಇಸ್ಲಾಂ ಧರ್ಮದ ಆಚರಣೆ ಅಲ್ಲ ಎನ್ನುವ ಅಂಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ 66 ವರ್ಷದ ವೃದ್ಧೆಯೊಬ್ಬರು ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿದ್ದು, ಹಿಜಾಬ್ ಧರಿಸುವ ಅವಕಾಶವನ್ನು ನಿಷೇಧಿಸುವ ಅಧಿಕಾರವನ್ನು ಕಾಲೇಜುಗಳಿಗೆ ನೀಡಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ್ದಾರೆ.

ಸಜಿದಾ ಬೇಗಂ ಎಂಬ ವೃದ್ಧೆ, ಈ ಹಿಂದೆಯೂ ಹೈಕೋರ್ಟ್ ಪ್ರಕರಣದಲ್ಲಿ ವಾದ ಮಂಡಿಸಲು ಸಜಿದಾ ಬೇಗಂ ಅವಕಾಶ ಕೋರಿದ್ದರು. ಆದರೆ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ತಮಗೆ ಹೈಕೋರ್ಟ್ ನಲ್ಲಿ ವಾದ ಮಂಡಿಸಲು ಅವಕಾಶ ಸಿಗದೇ ಇರೋದನ್ನು ಮೌಖಿಕತೆಯ ತತ್ವಕ್ಕೆ ವಿರೋಧವಾದ ನಿರ್ಧಾರ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಹದಿ ಹರೆಯದ ಹುಡುಗಿಯರು ಶಿಕ್ಷಣ ಪಡೆಯಲು ತೆರಳಿದಾಗ ತಮ್ಮನ್ನು ತಾವು ವಸ್ತ್ರದಿಂದ ಮುಚ್ಚಿಕೊಂಡರೇ ಇದರಿಂದ ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯ ಉಂಟಾಗದು ಎಂದು ಸಜೀದಾ ಬೇಗಂ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.

ಸಂವಿಧಾನದ 14,15,17,19 ಹಾಗೂ 21 ನೇ ವಿಧಿಗಳುಹಿಜಾಬ್ ಧರಿಸುವುದು ಹಕ್ಕು ಎಂದಿವೆ. 25 ನೇ ವಿಧಿಯಡಿ ಹಿಜಾಬ್ ಧರಿಸುವುದು ಆಯ್ಕೆಯಲ್ಲ ಎಂಬುದು ಕೊನೆಯ ಆಯ್ಕೆಯಾಗಿದೆ. ಸರ್ಕಾರಿ ಆದೇಶ ಹಿಜಾಬ್ ನಿಷೇಧಿಸುವುದಿಲ್ಲವಾದ್ದರಿಂದ ಹೈಕೋರ್ಟ್ ಆಡಳಿತಾತ್ಮಕ ಕಾನೂನಿನ ಸರಳ ಅಂಶದ ಮೇಲೆ ಸಮಸ್ಯೆಯನ್ನು ನಿರ್ಧರಿಸಬೇಕಿತ್ತು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಅಲ್ಲದೇ ಹುಡುಗಿಯರ ಘನತೆ ಹಾಗೂ ಧಾರ್ಮಿಕ ಮೌಲ್ಯಗಳಿಗೆ ಸಂಬಂಧಿಸಿರುವ ಹಿಜಾಬ್ ತೆಗೆಯುವಂತೆ ಒತ್ತಾಯಿಸುವುದು ಸರ್ಕಾರಿ ಅನುಮೋದಿತ ಅಪಮಾನ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಕೀಲರಾದ ತಲ್ಹಾ ಅಬ್ದುಲ್ ರಹಮಾನ್, ಮಹಮ್ಮದ್ ಆಸೀಫ್, ಬಸವ ಪ್ರಸಾದ್ ಕುನಾಳೆ ಎಂ ಶಾಜ್ ಖಾನ್ ಮತ್ತು ಹರ್ಷವರ್ಧನ್ ಕೇಡಿಯಾ ಅವರ ಮೂಲಕ ಸಾಜಿದಾ ಬೇಗಂ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಹಿಜಾಬ್ ಗೆ ಅವಕಾಶ ಕೋರಿ ಉಡುಪಿ ಮೂಲದ ಆರು ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ೧೧ ದಿನಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು. ಬಳಿಕ ಹಿಜಾಬ್ ಗೆ ಅವಕಾಶವಿಲ್ಲ ಎಂದು ಆದೇಶಿಸಿತ್ತು.

ಇದನ್ನೂ ಓದಿ : Hijab Re Exams : ಹಿಜಾಬ್ ವಿದ್ಯಾರ್ಥಿನಿಯರಿಗೆ ಮರು ಪರೀಕ್ಷೆ: ರೀ ಎಕ್ಸಾಂಗೆ ಅವಕಾಶವಿಲ್ಲ ಎಂದ ಸರ್ಕಾರ

ಇದನ್ನೂ ಓದಿ : ಗಾಂಧೀಜಿ ಪತ್ನಿ ಕೂಡ ತಲೆ‌ಮೇಲೆ ಸೆರಗು ಹಾಕುತ್ತಿದ್ದರು : ಹಿಬಾಜ್ ಬೆಂಬಲಕ್ಕೆ ನಿಂತ ಕುಮಾರಸ್ವಾಮಿ

(A 66-year-old woman filed for Supreme Court challenging the Hijab High Court verdict)

Comments are closed.