Nawazuddin Siddiqui : ಮಂಗಳಮುಖಿಯಾಗಿ ಬದಲಾದ ನಟ ನವಾಜುದ್ದೀನ್ ಸಿದ್ದಿಕಿ

ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸಿನಿಪ್ರೇಕ್ಷಕರನ್ನು ರಂಜಿಸಿದ ಬಾಲಿವುಡ್‌ ನಟ (Nawazuddin Siddiqui) ನವಾಜುದ್ದೀನ್‌ ಸಿದ್ದಿಕಿ, ಇದೀಗ ಮಂಗಳಮುಖಿಯಾಗಿ ಬದಲಾಗಿದ್ದಾರೆ. ಸಿನಿಮಾ ನಟ – ನಟಿಯರು ತಮ್ಮ ನಟನೆಗಾಗಿ ಹೇಗೆ ಬೇಕಾದರೂ ದೇಹವನ್ನು ಬದಲಾಯಿಸಿಕೊಳ್ಳುತ್ತಾರೆ. ವಿವಿಧ ಲುಕ್‌ಗಳಲ್ಲಿ ಅಭಿಮಾನಿಗಳನ್ನು ರಂಜಿಸುವುದಕ್ಕಾಗಿ ದಪ್ಪ, ತೆಳ್ಳನೆ, ಎಳೆಯರಂತೆ ಕಾಣುವುದು ಸಾಮಾನ್ಯವಾಗಿದೆ. ಆದರೆ ಇದೀಗ ಬಾಲಿವುಡ್‌ ನಟನೊಬ್ಬ ಮಂಗಳಮುಖಿಯಾಗಿ ಬದಲಾಗಿದ್ದಾರೆ.

ಈಗಾಗಲೇ ಸಿನಿಮಾರಂಗದಲ್ಲಿ ಮಂಗಳಮುಖಿಯರ ಬಗ್ಗೆ ಅನೇಕ ಸಿನಿಮಾಗಳು ಮೂಡಿ ಬಂದಿವೆ. ಸಂಚಾರಿ ವಿಜಯ್‌, ಸಾಯಿಕುಮಾರ್‌, ವಿಜಯ ಸೇತುಪತಿ ಸೇರಿದಂತೆ ಇನ್ನೂ ಅನೇಕರು ಮಂಗಳಮುಖಿ ಪಾತ್ರದಲ್ಲಿ ಸಿನಿಪ್ರೇಕ್ಷಕರ ಮನಗೆದ್ದಿದ್ದಾರೆ. ಈಗ ಮತ್ತೊಬ್ಬ ನಟ ಮಂಗಳಮುಖಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅದು ಬೇರೆ ಯಾರು ಅಲ್ಲ ಬಾಲಿವುಡ್‌ ಖ್ಯಾತ ನಟ ನವಾಜುದ್ದೀನ್‌ ಸಿದ್ದಿಕಿ. ವೆಬ್‌ ಸೀರಿಸ್‌ ಹಾಗೂ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ನವಾಜುದ್ದೀನ್‌ ಸಿದ್ದಿಕಿ ಇದೀಗ ವಿಭಿನ್ನ ಪಾತ್ರದಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

ನವಾಜುದ್ದೀನ್‌ ಸಿದ್ದಿಕಿ ತಮ್ಮ ಹೊಸ ಲುಕ್‌ನ ಪೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೊಸ ಲುಕ್‌ನಲ್ಲಿ ಸ್ಟಾರ್‌ ನಟನನ್ನು ನೋಡಿದ ಅಭಿಮಾನಿಗಳು ಆಶ್ವರ್ಯಚಕಿತರಾಗಿದ್ದಾರೆ. ನವಾಜುದ್ದೀನ್‌ ಮಂಗಳಮುಖಿ ಲುಕ್‌ನಲ್ಲಿ ಗುರುತು ಹಿಡಿಯಲು ಸಾಧ್ಯವಾಗದಷ್ಟು ಬದಲಾಗಿದ್ದಾರೆ. ಈಗಾಗಲೇ ನಟ ತನ್ನ ಮೊದಲ ಲುಕ್‌ನ ಪೋಟೋ ಹಂಚಿಕೊಂಡಿದ್ದು, ನಂತರ ಮತ್ತಷ್ಟು ಪೋಟೋಗಳನ್ನು ಹಂಚಿಕೊಳ್ಳುವುದರ ಮೂಲಕ ನಿಜವಾದ ಮಂಗಳಮುಖಿಯರ ಜೊತೆ ನಟಿಸಿದ್ದ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರ ಈ ಮಂಗಳಮುಖಿ ಲುಕ್‌ ಸಖತ್‌ ವೈರಲ್‌ ಆಗಿದೆ.

ಅವರು ” ಹಡ್ಡಿ” ಸಿನಿಮಾದಲ್ಲಿ ನಿಜವಾದ ಮಂಗಳಮುಖಿಯರ ಜೊತೆ ನಟಿಸಿದ್ದಾರೆ. ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ” ಹಡ್ಡಿ ಸಿನಿಮಾದಲ್ಲಿ ನಿಜ ಜೀವನದ ಟ್ರಾನ್ಸ್‌ ಜಂಡರ್‌ ಮಹಿಳೆಯರೊಂದಿಗೆ ಕೆಲಸ ಮಾಡಿರುವುದು ನಂಬಲಾಗದ ಅನುಭವವಾಗಿದೆ. ಅವರ ಜೊತೆ ಕೆಲಸ ಮಾಡಿದ್ದು ಶಕ್ತಿಯುತವಾಗಿತ್ತು” ಎಂದು ಬರೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ನವಾಜುದ್ದೀನ್‌ ಸಿದ್ದಿಕಿ ಸುಮಾರು 80ಕ್ಕೂ ಅಧಿಕ ಮಂಗಳಮುಖಿಯರ ಜೊತೆ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ : Hello god Dr. Bro: ಡಾ.ಬ್ರೋ ಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಕನ್ನಡಿಗರ ಆಗ್ರಹ; ಏನಂತಾರೆ ನಮಸ್ಕಾರ ದೇವರು..?

ಇದನ್ನೂ ಓದಿ : Kantara OTT Release Date: ಕಾಂತಾರ OTT ರಿಲೀಸ್‌ ಡೇಟ್‌ ಮುಂದೂಡಿಕೆ; ಕಾರಣ ಇಲ್ಲಿದೆ

ಇದನ್ನೂ ಓದಿ : Tamannaah: ಮಿಲ್ಕಿ ಬ್ಯೂಟಿ ಮದುವೆ ವದಂತಿಗೆ ಬ್ರೇಕ್ ; ಹುಡುಗನ ಫೋಟೋ ರಿವೀಲ್ ಮಾಡಿದ ನಟಿ ತಮನ್ನಾ

“ಹಡ್ಡಿ” ಸಿನಿಮಾದ ಪಾತ್ರದ ಬಗ್ಗೆ ಮಾತನಾಡಿದ ನವಾಜುದ್ದೀನ್‌, ” ನನ್ನ ಮಗಳು ನನ್ನನ್ನು ಈ ವೇಷದಲ್ಲಿ ನೋಡಿದಾಗ ತುಂಬಾ ನೊಂದಿದ್ದಳು. ಆದರೆ ಈಗ ಇದೊಂದು ಪಾತ್ರಕ್ಕಾಗಿ ಎಂದು ಗೊತ್ತಾಗಿದ್ದು, ಚೆನ್ನಾಗಿದೆ ಎಂದು ಹೇಳಿದ್ದಾಳೆ. ನಾನು ಇದನ್ನು ಹೇಳಬೇಕು ಪ್ರತಿದಿನ ಈ ಪಾತ್ರ ಮಾಡುವಾಗ ನಟಿಯರ ಬಗ್ಗೆ ನನಗೆ ಗೌರವ ಹೆಚ್ಚಾಗುತ್ತಿತ್ತು. ಮೇಕಪ್‌, ಡ್ರೆಸ್‌, ಉಗುರು ಪ್ರತಿಯೊಂದು ಸರಿಯಾಗಿ ನೋಡಿಕೊಳ್ಳಬೇಕು. ನಟಿಯರಗಿಂತ ಹೆಚ್ಚು ಸಮಯ ನಾನು ತೆಗೆದುಕೊಂಡಿದ್ದು, ತಾಳ್ಮೆಯಿಂದ ಇರುತ್ತಿದೆ ಎಂದು ಹೇಳಿದ್ದರು. ತನ್ನ ಮಗಳು ಈ ಪಾತ್ರದಲ್ಲಿ ನಟಿಸಿರುವುದಕ್ಕೆ ಬೇಸರಗೊಂಡಿದ್ದಾಳೆ ಎಂದು ಹೇಳಿದ್ದಾರೆ. ಅಲ್ಲದೇ ನಟಿಯರು ಯಾಕೆ ಡ್ರೆಸ್ಸಿಂಗ್‌ ರೂಮ್‌ನಿಂದ ತಡವಾಗಿ ಬರುತ್ತಾರೆ ಎಂದು ನನಗೆ ಈಗ ಗೊತ್ತಾಯಿತು ಎಂದು ತಮಾಷೆ ಮಾಡಿದರು.

Nawazuddin Siddiqui is an actor who turned into a mangalmukhi

Comments are closed.