ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ದ ಭಾರತಕ್ಕೆ 8-0 ಗೆಲುವಿನ ಮುನ್ನಡೆ : ರೋಹಿತ್‌ ಸಿಕ್ಸರ್‌ ಆರ್ಭಟಕ್ಕೆ ಪಾಕ್‌ ತತ್ತರ

ಭಾರತವನ್ನು ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ (India vs Pakistan) ಸೋಲಿಸಲು ಸಾಧ್ಯವಾಗಿಲ್ಲ. ಈ ಮೂಲಕ ಭಾರತದ ಗೆಲುವಿನ ಅಭಿಯಾನ 8-0 ಅಂತರದಲ್ಲಿ ಮುಂದುವರಿದಿದೆ. ವಿಶ್ವಕಪ್‌ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ.

ಅಹಮದಾಬಾದ್‌ : ಭಾರತೀಯ ಬೌಲರ್‌ಗಳ ಸಂಘಟನಾತ್ಮಕ ದಾಳಿ, ರೋಹಿತ್‌ ಶರ್ಮಾ (Rohit Sharma) ಸಿಕ್ಸರ್‌ ಆರ್ಭಟಕ್ಕೆ ಪಾಕಿಸ್ತಾನ ಪಡೆ ನೆಲಕಚ್ಚಿದೆ. ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup 2023) ಕೊನೆಗೂ ಪಾಕಿಸ್ತಾನ ಕನಸು ನನಸಾಗಲೇ ಇಲ್ಲ. ಭಾರತವನ್ನು ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ (India vs Pakistan) ಸೋಲಿಸಲು ಸಾಧ್ಯವಾಗಿಲ್ಲ. ಈ ಮೂಲಕ ಭಾರತದ ಗೆಲುವಿನ ಅಭಿಯಾನ 8-0 ಅಂತರದಲ್ಲಿ ಮುಂದುವರಿದಿದೆ. ವಿಶ್ವಕಪ್‌ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ.

Ind vs Pak World Cup 2023 india Lead 8-0 Agints Pakistan in Odi world Cup India VS Pakistan HEAD TO HEAD
Image credit : ICC

ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ (India vs Pakistan)ವಿರುದ್ದದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ತಾನ ತಂಡಕ್ಕೆ ಆರಂಭಿಕರಾದ ಶಫೀಕ್‌ ಹಾಹೂ ಇಮಾಮ್‌ ಉಲ್‌ ಹಕ್‌ ಉತ್ತಮ ಆರಂಭ ಒದಗಿಸಲು ಮುಂದಾಗಿದ್ದರು. 41 ರನ್‌ ಜೊತೆಯಾಟ ಆಡುತ್ತಿದ್ದ ವೇಳೆಯಲ್ಲಿ ಮೊಹಮದ್‌ ಸಿರಾಜ್‌ ಶಫಿಕ್‌ ಅವರನ್ನು ಬಲಿ ಪಡೆಯುವ ಮೂಲಕ ಪಾಕಿಸ್ತಾನಕ್ಕೆ ಆರಂಭಿಕ ಆಘಾತ ನೀಡಿದ್ದಾರೆ.

ನಂತರ ಬಾಬರ್‌ ಅಜಂ ಜೊತೆ ಸೇರಿ ಇನ್ನಿಂಗ್ಸ್‌ ಕಟ್ಟಲು ಮುಂದಾಗಿದ್ದ ಇಮಾಮ್‌ ಉಲ್‌ ಹಕ್‌ ಅವರನ್ನು ಹಾರ್ದಿಕ್‌ ಪಾಂಡ್ಯ ಔಟ್‌ ಮಾಡಿದ್ದಾರೆ. ನಂತರ ಬಾಬರ್‌ ಅಜಂ ಹಾಗೂ ಮೊಹಮ್ಮದ್‌ ರಿಜ್ವಾನ್‌ ಅರ್ಧಶತಕದ ಜೊತೆಯಾಟ ಆಡಿದ್ದಾರೆ. ಆದರೆ ಅರ್ಧಶತಕ ಗಳಿಸಿ ಆಡುತ್ತದ್ದ ಬಾಬರ್‌ ಅಜಂ ಅವರನ್ನು ಮೊಹಮ್ಮದ್‌ ಸಿರಾಜ್‌ ಬಲಿ ಪಡೆದಿದ್ದಾರೆ.

ಇದನ್ನೂ ಓದಿ : ಭಾರತ – ಪಾಕಿಸ್ತಾನ ವಿರುದ್ದ ಪಂದ್ಯದ ವೇಳೆ ಎಡವಟ್ಟು : ತಪ್ಪಾದ ಜರ್ಸಿ ತೊಟ್ಟು ಮೈದಾನಕ್ಕೆ ಬಂದ ವಿರಾಟ್‌ ಕೊಹ್ಲಿ

ನಂತರ ಕುಲದೀಪ್‌ ಯಾದವ್‌, ಜಸ್ಪ್ರಿತ್‌ ಬೂಮ್ರಾ, ರವೀಂದ್ರ ಜಡೇಜಾ ಪಾಕಿಸ್ತಾನ ಆಟಗಾರರನ್ನು ಕಾಡುವುದಕ್ಕೆ ಶುರು ಮಾಡಿದ್ದಾರೆ. ರಿಜ್ವಾನ್‌ 49 ರನ್‌ ಗಳಿಸಿ ಔಟಾದ್ರೆ, ನಂತರ ಬಂದ ಸೌದ್‌ ಶಕೀಲ್‌ 6, ಇಫ್ತಿಕಾರ್‌ ಅಹಮದ್‌ 4, ಶಬಾದ್‌ ಖಾನ್‌ 2, ಮೊಹಮ್ಮದ್‌ ನವಾಜ್‌ 4, ಹಸನ್‌ ಆಲಿ 12, ಶಾಹೀನ್‌ ಆಫ್ರಿದಿ ಹಾಗೂ ಹ್ಯಾರಿಸ್‌ ರೌಫ್‌ ತಲಾ 2 ರನ್‌ ಗಳಿಸಿ ಔಟಾಗಿದ್ದಾರೆ.

Ind vs Pak World Cup 2023 india Lead 8-0 Agints Pakistan in Odi world Cup India VS Pakistan HEAD TO HEAD
Image Credit to Original Source

ಭಾರತ ತಂಡದ ಪರ ಜಸ್ಪ್ರಿತ್‌ ಬೂಮ್ರಾ, ಮೊಹಮ್ಮದ್‌ ಸಿರಾಜ್‌, ಹಾರ್ದಿಕ್‌ ಪಾಂಡ್ಯ, ಕುಲದೀಪ್‌ ಯಾದವ್‌, ರವೀಂದ್ರ ಜಡೇಜಾ ತಲಾ ಎರಡು ವಿಕೆಟ್‌ ಪಡೆದುಕೊಂಡಿದ್ದಾರೆ. ಅಂತಿಮವಾಗಿ ಪಾಕಿಸ್ತಾನ ತಂಡ 42.5 ಓವರ್‌ಗಳಲ್ಲಿ 191 ರನ್‌ ಗಳಿಗೆ ಆಲೌಟ್‌ ಆಗಿತ್ತು.

ಪಾಕಿಸ್ತಾನ ತಂಡ ನೀಡಿದ ಸುಲಭ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಶುಭಮನ್‌ ಗಿಲ್‌ ಹಾಗೂ ರೋಹಿತ ಶರ್ಮಾ ಉತ್ತಮ ಆರಂಭವೊದಗಿಸಿದ್ದಾರೆ. ಆದರೆ ಡೆಂಗ್ಯೂನಿಂದ ಚೇತರಿಸಿಕೊಂಡು ತಂಡ ಸೇರಿಕೊಂಡಿದ್ದ ಶುಭಮನ್‌ ಗಿಲ್‌ 11 ಎಸೆತಗಳಲ್ಲಿ 16 ರನ್‌ ಗಳಿಸಿ ಆಡುತ್ತಿದ್ದ ವೇಳೆಯಲ್ಲಿ ಶಾಹೀನ್‌ ಆಫ್ರಿದಿ ಅವರ ಎಸೆತದಲ್ಲಿ ಕೆಟ್ಟ ಹೊಡೆತಕ್ಕೆ ಮನ ಮಾಡಿ ಔಟಾದ್ರು. ನಂತರ ಒಂದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ವಿರಾಟ್‌ ಕೊಹ್ಲಿ ಅವರ ಆಟ ಕೇವಲ 16 ರನ್‌ ಗಳಿಗೆ ಕೊನೆಯಾಯ್ತು.

Ind vs Pak World Cup 2023 india Lead 8-0 Agints Pakistan in Odi world Cup India VS Pakistan HEAD TO HEAD
Image Credit : BCCI

ಇದನ್ನೂ ಓದಿ : ಐಪಿಎಲ್‌ 2024 : ಆರ್‌ಸಿಬಿ ತಂಡ ಸೇರ್ತಾರಾ ರಚಿನ್‌ ರವೀಂದ್ರ

ಶ್ರೇಯಸ್‌ ಅಯ್ಯರ್‌ ಜೊತೆ ಸೇರಿ ಸ್ಪೋಟಕ ಆಟವಾಡಿದ ರೋಹಿತ್‌ ಶರ್ಮಾ 63 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 6 ಬೌಂಡರಿ ನೆರವಿನಿಂದ 86 ರನ್‌ ಗಳಿಸಿದ್ದಾರೆ. ಇನ್ನೊಂದೆಡೆಯಲ್ಲಿ ಶ್ರೇಯಸ್‌ ಅಯ್ಯರ್‌ ಕೂಡ ಭರ್ಜರಿ ಅರ್ಧ ಶತಕ ಬಾರಿಸಿದ್ದಾರೆ. ಶ್ರೇಯಸ್‌ ಅಯ್ಯರ್‌ 62 ಎಸೆತಗಳಲ್ಲಿ 53 ರನ್‌ ಬಾರಿಸಿದ್ದಾರೆ. ಇದರಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್‌ ಒಳಗೊಂಡಿದೆ.

ಅಂತಿಮವಾಗಿ ಕನ್ನಡಿಗ ಕೆಎಲ್‌ ರಾಹುಲ್‌ 19 ಹಾಗೂ ಶ್ರೇಯಸ್‌ ಅಯ್ಯರ್‌ ಅರ್ಧ ಶತಕದ ನೆರವಿನಿಂದ ಭಾರತ ತಂಡ 30.3 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 192 ರನ್‌ ಗಳಿಸುವ ಮೂಲಕ ಗೆಲುವಿನ ನಗೆ ಬೀರಿದೆ. ಪಾಕಿಸ್ತಾನ ಪರ ಶಾಹೀನ್‌ ಆಫ್ರಿದಿ 2 ಹಾಗೂ ಹಸನ್‌ ಆಲಿ 1 ವಿಕೆಟ್‌ ಪಡೆದುಕೊಂಡಿದ್ದಾರೆ.

ವಿಶ್ವಕಪ್‌ನಲ್ಲಿ ಭಾರತದ ವಿರುದ್ದ ಕೊನೆಗೂ  ಗೆಲ್ಲಲೇ ಇಲ್ಲ ಪಾಕಿಸ್ತಾನ

1992ರ ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ದ ಭರ್ಜರಿ 43 ರನ್‌ ಗೆಲುವು ದಾಖಲಿಸಿತ್ತು. ನಂತರ 1996 ರಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಾಕಿಸ್ತಾನ ಭಾರತ ವಿರುದ್ದ 39 ರನ್‌ ಗಳ ಅಂತರದಲ್ಲಿ ಸೋಲನು ಅನುಭವಿಸಿದೆ.

ಇದನ್ನೂ ಓದಿ : ರೋಹಿತ್‌ ಶರ್ಮಾ ಭರ್ಜರಿ ಶತಕ : ಒಂದೇ ಪಂದ್ಯದಲ್ಲಿ 2 ವಿಶ್ವದಾಖಲೆ ಬರೆದ ಟೀಂ ಇಂಡಿಯಾ ನಾಯಕ

ಇನ್ನು 1999 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಭಾರತ 47 ರನ್‌ ಗಳ ಗೆಲುವು ದಾಖಲಿಸಿದೆ. 2003 ರ ವಿಶ್ವಕಪ್‌ ನಲ್ಲಿಯೂ ಪಾಕಿಸ್ತಾನ ಭಾರತ ವಿರುದ್ದ ಗೆಲುವುನ್ನು ಕಾಣಲು ಸಾಧ್ಯವಾಗಿಲ್ಲ. ಅಷ್ಟೇ ಯಾಕೆ 2011 ರ ವಿಶ್ವಕಪ್‌ನಲ್ಲಿಯೂ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿಯೂ ಭಾರತ ಪಾಕಿಸ್ತಾನ ತಂಡದ ವಿರುದ್ದ 29 ರನ್ ಗಳ ಭರ್ಜರಿ ಗೆಲವು ದಾಖಲಿಸಿದೆ. 2015 ರಲ್ಲಿ ಭಾರತ ಪಾಕಿಸ್ತಾನ ವಿರುದ್ದ ಭರ್ಜರಿ 76 ರನ್‌ಗಳ ಗೆಲುವು ದಾಖಲಿಸಿದ್ದರೆ, 2019 ರ ವಿಶ್ವಕಪ್‌ ನಲ್ಲಿ ಭಾರತ ತಂಡ ಲೂವಿಸ್‌ ಡಕ್‌ವರ್ತ್‌ ನಿಯಮದ ಪ್ರಕಾರ 89 ರನ್‌ ಗಳ ಗೆಲುವು ದಾಖಲಿಸಿದೆ.

ಇದೀಗ ಅಹಮದಾಬಾದ್‌ನಲ್ಲಿ ನಡೆದ 2023 ರ ವಿಶ್ವಕಪ್‌ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ದ ಭಾರತ ತಂಡ ಭರ್ಜರಿ 7 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಈ ಮೂಲಕ ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ದ ತನ್ನ ಗೆಲುವಿನ ಅಂತರವನ್ನು 8-0 ಗೆ ಮುಂದುವರಿಸಿದೆ.

Ind vs Pak World Cup 2023 india Lead 8-0 Agints Pakistan in Odi world Cup India VS Pakistan HEAD TO HEAD

Comments are closed.