Jio New Recharge Plan : ಏರ್‌ಟೆಲ್‌ಗೆ ಸಡ್ಡು ಹೊಡೆದ ಜಿಯೋ ಹೊಸ ರಿಚಾರ್ಜ್‌ ಫ್ಲ್ಯಾನ್‌ : 29 ರೂಪಾಯಿಗೆ ಸಿಗುತ್ತೆ 2 ಜಿಬಿ ಡೇಟಾ

Jio New Recharge Plan : ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನೇ ಮಾಡಿರುವ ರಿಲಯನ್ಸ್‌ ಜಿಯೋ ಕಂಪೆನಿ ಇದೀಗ ಗ್ರಾಹಕರಿಗಾಗಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ. ಇದೀಗ ಜಿಯೋ ಅಗ್ಗದ ಎರಡು ಹೊಸ ರಿಚಾರ್ಜ್‌ ಯೋಜನೆಗಳನ್ನು ಪರಿಚಯಿಸಿದೆ. ಭಾರತದಲ್ಲಿಯೇ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಜಿಯೋ ಟೆಲಿಕಾಂ ಸಂಸ್ಥೆ ಕಾಲಕಾಲಕ್ಕೆ ತಮ್ಮ ಬಳಕೆದಾರರ ಅಗತ್ಯಗಳನ್ನು ಅರಿತು ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಆಫರ್ ಗಳನ್ನು ತರುತ್ತಿದ್ದಾರೆ.

ದಿನದಿಂದ ದಿನಕ್ಕೆ ಜಿಯೋ ಗ್ರಾಹಕರ ಸಂಖ್ಯೆಯಲ್ಲಿಯೂ ಏರಿಕೆಯನ್ನು ಕಾಣುತ್ತಿದೆ. ಇದೀಗ ರಿಲಯನ್ಸ್‌ ಜಿಯೋ ಸಂಸ್ಥೆ ಎರಡು ಪ್ರಿಪೇಯ್ಡ್ ಡೇಟಾ ಪ್ಲಾನ್‌ಗಳನ್ನು ಪರಿಚಯಿಸಿದೆ. ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಡೇಟಾ ಅಗತ್ಯವಿರುವಾಗ ಕಡಿಮೆ ವೆಚ್ಚದಲ್ಲಿ ರೀಚಾರ್ಜ್ ಮಾಡಲು ಹೊಸ ಯೋಜನೆಗಳನ್ನು ಪರಿಚಯಿಸಲಾಗಿದೆ. ಹೊಸ ಯೋಜನೆಗಳು ರೂ.19 ಮತ್ತು ರೂ.29 ನಲ್ಲಿ ಲಭ್ಯವಿದೆ.

ತುರ್ತು ಸಂದರ್ಭಗಳಲ್ಲಿ ಗ್ರಾಹಕರು ಈ ಎರಡೂ ಡೇಟಾ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಈಗಾಗಲೇ ಜಿಯೋ ಹಲವು ಬೂಸ್ಟರ್‌ ಫ್ಲ್ಯಾನ್‌ಗಳನ್ನು ಪರಿಚಯಿಸಿದೆ. ಜಿಯೋ ಪರಿಚಯಿಸಿರುವ ಹೊಸ ಯೋಜನೆಗಳು ಇತರ ಟೆಲಿಕಾಂ ಕಂಪೆನಿಗಳಿಗೆ ಸ್ಪರ್ಧೆಯನ್ನು ಒಡ್ಡಿದೆ. ಈ ಹೊಸ ಯೋಜನೆಗಳಿಂದಾಗಿ ಗ್ರಾಹಕರಿಗೆ ಯಾವ ರೀತಿಯ ಲಾಭ ದೊರೆಯಲಿದೆ ಅನ್ನೋ ಮಾಹಿತಿ ಇಲ್ಲಿದೆ.

ಜಿಯೋ 19ರೂ. ಯೋಜನೆ :
ರಿಲಯನ್ಸ್ ಜಿಯೋ ಪರಿಚಯಿಸಿದ ಹೊಸ ಯೋಜನೆಗಳಲ್ಲಿ ಮೊದಲ ಪ್ಲಾನ್ 19ರೂ. ಆಗಿದ್ದು. ಈ ಯೋಜನೆಯಲ್ಲಿ ಬಳಕೆದಾರರು 1.5GB ಡೇಟಾ ಫ್ಯಾಕ್‌ ಪಡೆಯಲಿದ್ದಾರೆ. ಈ ಫ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಯಾವುದೇ ನಿರ್ಧಿಷ್ಟವಾದ ವ್ಯಾಲಿಡಿಟಿ ಇರೋದಿಲ್ಲ.ರೂ.19 ಪ್ಲಾನ್ ಮೂಲಕ ನೀವು ಪಡೆಯುವ ಡೇಟಾಗಾಗಿ ನಿಮ್ಮ ಸಂಪರ್ಕದಲ್ಲಿ ರೀಚಾರ್ಜ್ ಮಾಡಲಾದ ಮೂಲ ಪ್ಯಾಕ್ ಅನ್ನು ನೀವು ಬಳಸಬಹುದು. ಕೇವಲ ಡೇಟಾ ಬಳಕೆಗಾಗಿ ಈ ಯೋಜನೆಯನ್ನು ಬಳಸಬಹುದಾಗಿದೆ. ಆದರೆ ಕಾಲ್‌ ಹಾಗೂ ಮೆಸೇಜ್‌ಗಳನ್ನು ಪಡೆಯಲು ಸಾಧ್ಯವಿಲ್ಲ.

ಜಿಯೋ ರೂ.29 ಯೋಜನೆ :
ರೂ.29 ಬೆಲೆಯ Jio ಪ್ರಿಪೇಯ್ಡ್ ಪ್ಲಾನ್ ಮೂಲಕ ಬಳಕೆದಾರರು 2.5GB ಡೇಟಾವನ್ನು ಪಡೆಯುತ್ತಾರೆ. ಹಾಲಿ ವ್ಯಾಲಿಡಿಟಿ ಯೋಜನೆಯನ್ನು ಹೊಂದಿರುವ ಬಳಕೆದಾರರು ಈ ಯೋಜನೆಯನ್ನು ಮಾನ್ಯತೆಯ ಅವಧಿ ಮುಕ್ತಾಯವಾಗುವವರೆಗೆ ಬಳಕೆ ಮಾಡಬಹುದಾಗಿದೆ. ನಿತ್ಯವ ಅನಿಯಮಿತ ಡೇಟಾ ಖಾಲಿಯಾದ ಸಂದರ್ಭದಲ್ಲಿ ಈ ಡೇಟಾ ಲಾಭವನ್ನು ಪಡೆಯಬಹುದಾಗಿದೆ. ಈ ಯೋಜನೆಯನ್ನು ರೀಚಾರ್ಜ್ ಮಾಡುವ ಜನರು ಉಳಿದ ಡೇಟಾವನ್ನು ಹೊಂದಿದ್ದರೆ ಮರುದಿನದವರೆಗೆ ಅನಿಯಮಿತ ಡೇಟಾ ಯೋಜನೆಯನ್ನು ಬಳಸಬಹುದು. ಅದರ ನಂತರ ರೂ.29 ಪ್ಲಾನ್‌ನಲ್ಲಿರುವ ಡೇಟಾವನ್ನು ಬಳಸಲು ಪ್ರಾರಂಭಿಸುತ್ತದೆ.

ಜಿಯೋ ಈ ಎರಡು ಡೇಟಾ ಪ್ಯಾಕ್‌ ಮಾತ್ರವಲ್ಲದೇ ಜಿಯೋ ಈಗಾಗಲೇ ನೀಡುವ ಕೆಲವು ಯೋಜನೆಗಳೂ ಇವೆ. ಜಿಯೋ ರೂ 15 ಡೇಟಾ ಪ್ಯಾಕ್ ಬಳಕೆದಾರರಿಗೆ 1GB ಡೇಟಾವನ್ನು ನೀಡುತ್ತದೆ. ನೀವು ರೂ.4 ಹೆಚ್ಚು ಪಾವತಿಸಿದರೆ, ಹೊಸ ರೂ.19 ಪ್ಯಾಕ್ ಮೂಲಕ ನೀವು ಹೆಚ್ಚುವರಿ 500MB ಡೇಟಾವನ್ನು ಪಡೆಯುತ್ತೀರಿ.

ರೂ.25 ಬೂಸ್ಟರ್ ಪ್ಲಾನ್:
ಜಿಯೋ ಬಳಕೆದಾರರು ಈ ಯೋಜನೆಯೊಂದಿಗೆ ದಿನಕ್ಕೆ 2GB ಡೇಟಾವನ್ನು ಪಡೆಯುತ್ತಾರೆ. ಈ ಯೋಜನೆಯ ರೀಚಾರ್ಜರ್‌ಗಳು ರೂ.4 ಹೆಚ್ಚು ಪಾವತಿಸುವ ಮೂಲಕ 500MB ಹೆಚ್ಚುವರಿ ಡೇಟಾವನ್ನು ಸಹ ಪಡೆಯುತ್ತಾರೆ. ಡೇಟಾ ಬೂಸ್ಟರ್‌ಗಳನ್ನು ಜನರು ಸಾಮಾನ್ಯವಾಗಿ ಬಳಸುವುದಿಲ್ಲ. ನಿರ್ದಿಷ್ಟ ದಿನಗಳಲ್ಲಿ ನೀವು ಹೆಚ್ಚಿನ ಡೇಟಾವನ್ನು ಬಳಸಿದರೆ, ಅನಿಯಮಿತ ಯೋಜನೆಯಿಂದ ಒದಗಿಸಲಾದ ದೈನಂದಿನ ಡೇಟಾ ಖಾಲಿಯಾಗುತ್ತದೆ. ಇಂತಹ ತುರ್ತು ಸಂದರ್ಭಗಳಲ್ಲಿ ಈ ಯೋಜನೆ ಪ್ರಯೋಜಕಾರಿಯಾಗಿದೆ.

ಇದನ್ನೂ ಓದಿ : ವಿಶ್ವದ ಅತ್ಯಂತ ಚಿಕ್ಕ ಸ್ಮಾರ್ಟ್‌ಫೋನ್ ಬಿಡುಗಡೆ : ಬೆಲೆ ಎಷ್ಟು ? ಏನಿದರ ವೈಶಿಷ್ಟ್ಯತೆ

ಇದನ್ನೂ ಓದಿ: WhatsApp ban : ಭಾರತದಲ್ಲಿ 65 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್‌ ಮಾಡಿದ ವಾಟ್ಸಪ್‌

Comments are closed.