JioMart taps WhatsApp :ಗುಡ್​​ನ್ಯೂಸ್​: ವಾಟ್ಸಾಪ್​​ನಲ್ಲಿ ಖರೀದಿ ಮಾಡಿ ದಿನಸಿ ಸಾಮಗ್ರಿ..!

ವಾಟ್ಸಾಪ್​ ಬಳಕೆ ಮಾಡದೇ ಇರುವವರ ಸಂಖ್ಯೆಯೇ ಕಡಿಮೆ ಇರುವ ಈಗಿನ ಜಮಾನದಲ್ಲಿ ಜಿಯೋ ಮಾರ್ಟ್​ ಸೇವೆ ಕೂಡ ವಾಟ್ಸಾಪ್​ ( WhatsApp to deliver groceries ) ಮೂಲಕವೇ ಪಡೆಯ ಬಹುದಾಗಿದೆ. ಇಲ್ಲಿ ನೀವು ಹೆಚ್ಚಾಗಿ ಕಷ್ಟ ಪಡಬೇಕೆಂದೇನಿಲ್ಲ. ವಾಟ್ಸಾಪ್​ನಿಂದ ಜಿಯೋಮಾರ್ಟ್​ಗೆ ಮೆಸೇಜ್​ ಮಾಡುವ ಮೂಲಕ ದಿನಸಿ ವಸ್ತುಗಳನ್ನು ( JioMart taps WhatsApp) ಖರೀದಿಸಬಹುದಾಗಿದೆ.

ಬ್ರೆಡ್​, ಬೆಣ್ಣೆ, ತರಕಾರಿ, ಪಾನೀಯ, ಧಾನ್ಯಗಳು ಹೀಗೆ ದಿನ ಬಳಕೆಯ ವಸ್ತು ಯಾವುದೇ ಇರಲಿ. ನೀವು ವಾಟ್ಸಾಪ್​ನ ಸಹಾಯದಿಂದ ಜಿಯೋ ಮಾರ್ಟ್​ನಲ್ಲಿ ಆರ್ಡರ್​ ಮಾಡಬಹು ದಾಗಿದೆ. ಶಾಪಿಂಗ್​ ಬಾಸ್ಕಟ್​ನಲ್ಲಿ ನಿಮಗೆ ಬೇಕಾದ ವಸ್ತುಗಳನ್ನು ಹಾಕಿ ಬಳಿ ಜಿಯೋ ಮಾರ್ಟ್​ನಲ್ಲಿ ಅಥವಾ ನಗದು ರೂಪದಲ್ಲಿ ನೀವು ಹಣ ಪಾವತಿ ಮಾಡಬಹುದಾಗಿದೆ. ಮೆಟಾ ಕಂಪನಿಯು ಕಳೆದ ವರ್ಷ ಏಪ್ರಿಲ್​ನಲ್ಲಿ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್​ ಲಿಮಿಟೆಡ್​ನ ಡಿಜಿಟಲ್​ ಹಾಗೂ ಟೆಲಿಕಾಂ ವಿಭಾಗವಾದ ಜಿಯೋ ಫ್ಲಾಟ್​ಫಾರಂಗಳಲ್ಲಿ ಶೇಕಡಾ 9.99 ಪ್ರತಿಶತದಷ್ಟು ಹೂಡಿಕೆ ಮಾಡಿದೆ.

ರಿಲಯನ್ಸ್​ ತನ್ನ ನೆಟ್​ವರ್ಕ್​ನಲ್ಲಿ 400 ಮಿಲಿಯನ್​ ವಾಟ್ಸಾಪ್​ ಬಳಕೆದಾರರು ಹಾಗೂ ಅರ್ಧ ಮಿಲಿಯನ್​ ಚಿಲ್ಲರೆ ವ್ಯಾಪಾರಿಗಳನ್ನು ಸಂಪರ್ಕಿಸುವ ಗುರಿ ಹೊಂದಿದೆ. ಜಿಯೋ ಹಾಗೂ ಮೆಟಾ ತಂಡಗಳು ಒಟ್ಟಾಗಿ ಕೆಲಸ ಮಾಡೋದ್ರಿಂದ ನಾವು ಅನೇಕ ಲಾಭಗಳನ್ನು ಪಡೆಯಲಿದ್ದೇವೆ. ಇದರಲ್ಲಿ ಮುಖ್ಯವಾಗಿ ವಾಟ್ಸಾಪ್​​ನಲ್ಲಿ ಜಿಯೋ ಇದು ಸಂಪೂರ್ಣ ಪ್ರಿಪೇಯ್ಡ್​ ರಿಚಾರ್ಜ್​ನ್ನು ಸರಳೀಕೃತಗೊಳಿಸುತ್ತದೆ ಎಂದು ಆಕಾಶ್​ ಹೇಳಿದ್ದಾರೆ.

ಜಿಯೋ ಮಾರ್ಟ್​ನ ಮೂಲಕ ಆರ್ಡರ್ ಮಾಡುವುದು ತುಂಬಾನೇ ಸುಲಭ . ನೀವು ವಾಟ್ಸಾಪ್​ ಟ್ಯಾಪ್​ & ಚಾಟ್​ ಆಯ್ಕೆ ಕ್ಲಿಕ್​ ಮಾಡಿ. ಇಲ್ಲಿ ನೀವು ದಿನಸಿ ಪಟ್ಟಿಯನ್ನು ಕಾಣಲಿದ್ದೀರಿ. ವಾಟ್ಸಾಪ್​ನಲ್ಲಿ ಆರ್ಡರ್​ಗಳನ್ನು ಪಟ್ಟಿ ಮಾಡಿ ಬಳಿಕ ಆನ್​ಲೈನ್​ ಪಾವತಿ ಮಾಡಿ. ನೀವು ನಗದು ನೀಡುವ ಮೂಲಕವೂ ಪೇಮೆಂಟ್​ ಮಾಡಬಹುದಾಗಿದೆ.

ಇದನ್ನು ಓದಿ: Fish Lorry Accident : ಉಡುಪಿಯಲ್ಲಿ ವೃದ್ದನ ಜೀವ ಉಳಿಸಲು ತನ್ನ ಪ್ರಾಣವನ್ನೇ ಕಳೆದುಕೊಂಡ ಮೀನಿನ ಲಾರಿಯ ಚಾಲಕ !

ಇದನ್ನೂ ಓದಿ : Asus Chromebook CX1101 : ವರ್ಕ್ ಫ್ರಂ ಹೋಂ ಮಾಡುವವರಿಗೆ ಕೇವಲ 19,999 ರೂ. ಬೆಲೆಯ ಉತ್ತಮ ಲ್ಯಾಪ್‌ಟಾಪ್ ಇಲ್ಲಿದೆ

ಇದನ್ನೂ ಓದಿ : Infinix Smartphone Offers: ಇನ್ಫಿನಿಕ್ಸ್ ನೋಟ್ ಸಿರೀಸ್ ಫೋನ್ ಲಾಂಚ್: ಪಾಕೆಟ್ ಹಾಗೂ ಗೇಮಿಂಗ್ ಫ್ರೆಂಡ್ಲಿ ಫೋನ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

JioMart taps WhatsApp to deliver groceries, vegetables

Comments are closed.