Live Train Status : ಯಾತ್ರಿಕರೇ ಗಮನಿಸಿ! ನಿಮ್ಮ ಟ್ರೈನ್‌ನ ಲೈವ್‌ ಸ್ಟೇಟಸ್‌ ತಿಳಿಯಲು ಗೂಗಲ್‌ ಮ್ಯಾಪ್‌ ಮೊರೆ ಹೋಗಿ

ಅತ್ಯಂತ ಸುಲಭದ ಮತ್ತು ಕಡಿಮೆ ದರದಲ್ಲಿ ದೂರದ ಪ್ರಯಾಣ ಬೆಳೆಸಲು ಉತ್ತಮ ಸಾರಿಗೆ ವ್ಯವಸ್ಥೆಯೆಂದರೆ ಇಂಡಿಯನ್‌ ರೈಲ್ವೆಗಳು(Indian Railways). ಆದರೆ ಕೆಲವೊಮ್ಮೆ ಅದರ ಆಗಮನದ ಸಮಯ(Live Train Status) ತಿಳಿಯುವುದು ಕಷ್ಟಸಾಧ್ಯ. ಉದಾಹರಣೆಗೆ ನಿಮ್ಮ ಪೋಷಕರಿಗೆ ಟ್ರೈನ್‌ ಪ್ರಯಾಣ ಮಾಡುವುದಿದೆ ಎಂದುಕೊಳ್ಳಿ. ಆದರೆ ಆ ಸಮಯಕ್ಕೆ ಸರಿಯಾಗಿ ಬರಬೇಕಾದ ಟ್ರೈನ್‌ ಬರಲಿಲ್ಲ, ಅದು ತಡವಾಗಿ ಬರುವುದೆಂದು ನಿಮಗೆ ರೈಲ್ವೆ ನಿಲ್ದಾಣಕ್ಕೆ ಬಂದಮೇಲೆ ತಿಳಿಯುತ್ತದೆ. ನಿಮ್ಮ ಇತರ ಕೆಲಸಗಳಿಗೆ ಅದು ಅಡ್ಡಿಪಡಿಸಿದಂತಾಯಿತಲ್ಲವೇ? ಇಂತಹ ಸಂದರ್ಭಗಳು ಎದುರಾದರೆ ನಿಮ್ಮ ಸಮಯ ಮತ್ತು ಕೆಲಸ ಹಾಳಾದಂತೆ. ಹೀಗಾಗದಂತೆ ತಡೆಯಲು ಟ್ರೈನ್‌ನ ಲೈವ್‌ ಸ್ಟೇಟಸ್‌ ತಿಳಿದರೆ ಎಷ್ಟು ಒಳ್ಳೆಯದಲ್ಲವೆ?

ಅದಕ್ಕಾಗಿ ಇಕ್ಸಿಗೊ, ರೈಲ್‌ಯಾತ್ರಾ, ವ್ಹೇರ್‌ ಇಸ್‌ ಮೈ ಟ್ರೈನ್‌ ಹೀಗೆ ಬೇಕಾದಷ್ಟು ಆಪ್ಸ್‌(Apps)ಗಳಿವೆ. ಅದರಂತೆಯೇ ಗೂಗಲ್‌ 3 ವರ್ಷಗಳ ಹಿಂದೆಯೇ ಗೂಗಲ್‌ ಮ್ಯಾಪ್‌ ನಲ್ಲಿ ಟ್ರೈನ್‌ ನ ರನ್ನಿಂಗ್‌ ಸ್ಟೇಟಸ್‌ ಅಳವಡಿಸಿದೆ. ಇದು ಅತಿ ಸುಲಭವಾಗಿ ಮತ್ತು ವೇಗವಾಗಿ ತಿಳಿಯುವ ಆಪ್‌ ಆಗಿದೆ. ಈ ವೈಶಿಷ್ಟ್ಯ ಆಂಡ್ರೈಯ್ಡ್‌ ಮತ್ತು ಐಒಎಸ್‌ ಇವೆರಡರಲ್ಲೂ ಲಭ್ಯವಿದೆ.

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆಲ್ಲರಿಗೂ ಗೂಗಲ್‌ ಮ್ಯಾಪ್‌ ಹೇಗೆ ಉಪಯೋಗಿಸುವುದು ಅನ್ನುವುದು ತಿಳಿದಿದೆ. ಆದರೆ ಕೆಲವರಿಗೆ ಮಾತ್ರ ಟ್ರೈನ್‌ ನ ರನ್ನಿಂಗ್‌ ಸ್ಟೇಟಸ್‌ ವೈಶಿಷ್ಟ್ಯ ಉಪಯೋಗಿಸುವುದು ತಿಳಿದಿದೆ. ನಿಮಗೆ ಎಂದಾದರೂ ಟ್ರೈನ್‌ ನ ರನ್ನಿಂಗ್‌ ಸ್ಟೇಟಸ್‌ ನ ಅವಶ್ಯಕತೆ ಇದೆ ಎಂದನಿಸಿದರೆ ಆಗ ನೀವು ಸುಲಭದ ಮಾರ್ಗದರ್ಶಿಯಾದ ಗೂಗಲ್‌ ಮ್ಯಾಪ್‌ನ ಮೊರೆ ಹೋಗಬಹುದು. ಇದು ಸಂಪೂರ್ಣ ಉಚಿತವಾಗಿದ್ದು ನಿಖರತೆಯಿಂದ ಕೂಡಿದೆ. ಆದರೆ ನೆನಪಿಡಿ ಈ ವೈಶಿಷ್ಟ್ಯದ ಪ್ರಯೋಜನಪಡೆಯಲು ಗೂಗಲ್‌ ಮ್ಯಾಪ್‌ ಅಪ್ಡೇಟ್‌ ಆಗಿರಬೇಕು ಮತ್ತು ನಿಮ್ಮ ಗೂಗಲ್‌ ಅಕೌಂಟ್‌ ಚಾಲನೆಯಲ್ಲಿರಬೇಕು.

ಇದನ್ನೂ ಓದಿ : WhatsApp ನಲ್ಲಿ ಬರುವ ಸುಳ್ಳು ಸುದ್ದಿಗಳು ಯಾವುದು ಎಂದು ನೀವು ತಿಳಿಯಬೇಕೆ? ಈ ಟ್ರಿಕ್ಸ್‌ ಉಪಯೋಗಿಸಿ ನೋಡಿ!

ಹಾಗಾದರೆ ಟ್ರೈನ್‌ ರನ್ನಿಂಗ್‌ ಸ್ಟೇಟಸ್‌ ಚೆಕ್‌ ಮಾಡುವುದು ಹೇಗೆ?

  1. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಮ್ಯಾಪ್‌ ತೆರೆಯಿರಿ.
  2. ನೀವು ತಲುಪಬೇಕಾದ ಸ್ಥಳ(ರೈಲ್ವೆ ನಿಲ್ದಾಣ)ದ ಹೆಸರನ್ನು ಸರ್ಚ್‌ ಬಾರ್‌ನಲ್ಲಿ ನಮೂದಿಸಿ.
  3. ನಂತರ ಟ್ರೈನ್‌ ಐಕಾನ್‌ ಮೇಲೆ ಟ್ಯಾಪ್‌ ಮಾಡಿ.
  4. ರೂಟ್‌ ಆಪ್ಷನ್‌ ಮೇಲೆ ಟ್ಯಾಪ್‌ ಮಾಡಿ. ಅದೂ ಟ್ರೈನ್ ಐಕಾನ್‌ ಆಗಿರುವುದು.
  5. ನಿಮ್ಮ ಟ್ರೈನ್‌ ನ ಹೆಸರನ್ನು ಟ್ಯಾಪ್‌ ಮಾಡುವುದರ ಮೂಲಕ ಆಯ್ದುಕೊಳ್ಳಿ. ಈಗ ನೀವು ಟ್ರೈನ್‌ ನ ಲೈವ್‌ ರನ್ನಿಂಗ್‌ ಸ್ಟೇಟಸ್‌ ನೋಡಬಹುದು.

ಇದನ್ನೂ ಓದಿ: Spam calls : ಅಪರಿಚಿತ ಕರೆಗಳಿಂದ ತೊಂದರೆ ಅನುಭವಿಸುತ್ತಿದ್ದೀರಾ? ಈ ರೀತಿ ಮಾಡಿದರೆ ಅಪರಿಚಿತ ಕರೆಗಳಿಂದ ದೂರವಿರಬಹುದು

(Live Train Status How to check train status in Realtime using google map)

Comments are closed.