Banana French Toast : ಪ್ರತಿದಿನ ಒಂದೇ ತರಹದ ಬ್ರೆಕ್‌ಫಾಸ್ಟ್‌ ಮಾಡಿ ಬೇಜಾರಾಗಿದೆಯೇ? ರುಚಿಯಾದ ಬಾಳೆಹಣ್ಣಿನ ಫ್ರೆಂಚ್‌ ಟೋಸ್ಟ್‌ ಒಮ್ಮೆ ಟ್ರೈ ಮಾಡಿ

ಪ್ರತಿದಿನ ಒಂದೇ ರೀತಿಯ ಬೆಳಗಿನ ತಿಂಡಿ ತಿಂದು ಬೇಜಾರಾಗಿದೆಯೇ? ಅದೇ ಸುಲಭವಾಗಿ ಮಾಡಬಲ್ಲ ಚಿಲ್ಲಾ(ತಾಳಿಪಿಟ್ಟು), ಅವಲಕ್ಕಿ, ಉಪ್ಪಿಟ್ಟು ಮತ್ತು ಚಹಾ ಅಥವಾ ಕಾಫಿಯ ಜೊತೆಗಿನ ಸ್ಯಾಂಡ್‌ವಿಚ್‌ಗಳು ಇವುಗಳ ಹೊರತಾಗಿಯೂ ವಿವಿಧ ರುಚಿಗಳನ್ನು ಸವಿಯುವ ಬಯಕೆ ನಮಗೆ ಇರುತ್ತದೆಯಲ್ಲವೇ? ಆಗ ನಾವು ಸುಲಭವಾಗಿ ಮತ್ತು ಬೇಗ ಮಾಡಬಹುದಾದ ತಿಂಡಿಗಳನ್ನು ಹುಡುಕುತ್ತೇವೆ. ಅದಕ್ಕಾಗಿಯೇ ನಾವು ಬೆಳಗ್ಗಿನ ತಿಂಡಿಗಾಗಿ ಸಂಪೂರ್ಣ ಆಹಾರವೆಂದೆನಿಸಿಕೊಳ್ಳುವ ರುಚಿಯಾದ ಬಾಳೆಹಣ್ಣಿನ ಫ್ರೆಂಚ್‌ ಟೋಸ್ಟ್‌(Banana French Toast) ನಿಮಗಾಗಿ ಹುಡುಕಿ ತಂದಿದ್ದೇವೆ. ಇದನ್ನು ಖಂಡಿತ ನಿಮ್ಮ ತಿಂಡಿಗಳ ಲಿಸ್ಟ್‌ಗೆ ಸೇರಿಸಿಕೊಳ್ಳಬಹುದು.

ಬಹಳಷ್ಟು ಜನರಿಗೆ ಫ್ರೆಂಚ್‌ ಟೋಸ್ಟ್‌ ಹಾಲು, ಬ್ರೆಡ್‌, ಮೊಟ್ಟೆ, ಮೆಪಲ್‌ ಸಿರಪ್‌ ಮತ್ತು ಇತರ ಪದಾರ್ಥಗಳನ್ನು ಉಪಯೋಗಿಸಿ ತಯಾರಿಸುತ್ತಾರೆ ಎಂಬುದು ತಿಳಿದಿಲ್ಲ. ಫ್ರೆಂಚ್‌ ರು ಆವಿಶ್ಕರಿಸಿದ ಮೊಟ್ಟೆಯಾಧಾರಿತ ಊಟ ಎಂದು ಹಲವುರು ನಂಬಿದ್ದಾರೆ. ಏಕೆಂದರೆ ಅದರ ಹೆಸರೇ ಹಾಗಿದೆ. ಆಹಾರ ತಜ್ಞರ ಪ್ರಕಾರ ಫ್ರೆಂಚ್‌ ಟೋಸ್ಟ್‌ ಅನ್ನು ತಪ್ಪಾಗಿ ಜನಪ್ರಿಯಗೊಳಿಸಿದ್ದಾರೆ. ದಂತಕಥೆಯ ಪ್ರಕಾರ, ಜೋಸೆಫ್‌ ಫ್ರೆಂಚ್‌ ಎಂಬ ವ್ಯಕ್ತಿ ಇದಕ್ಕೆ ಫ್ರೆಂಚ್ಸ್‌ ಟೋಸ್ಟ್‌ ಎಂದು ಹೆಸರನ್ನಿಡಿಸಿದ್ದ, ಆದರೆ ಅದನ್ನು ಫ್ರೆಂಚ್‌ ಟೋಸ್ಟ್‌ ಎಂದು ಸರ್ವ್‌ ಮಾಡಿದರು.

ಕೆಲವರು ಫ್ರೆಂಚ್‌ ಟೋಸ್ಟ್‌ ಲ್ಯಾಟಿನ್‌ ಅಡುಗೆ ಪುಸ್ತಕದಲ್ಲಿ ಮೊದಲನೇ ಶತಮಾನದಲ್ಲಿಯೇ ಹೆಸರಿಸಿದ್ದರು ಎಂದು ನಂಬಿದ್ದಾರೆ. ಅದೇನೇ ಇರಲಿ ಇವತ್ತಿನ ದಿನಗಳಲ್ಲಿ ಫ್ರೆಂಚ್‌ ಟೋಸ್ಟ್‌ ವಿವಿಧ ಬಗೆಗಳಲ್ಲಿ ಅಂದರೆ ಸಿಹಿ ಮತ್ತು ಖಾರ ಎರಡೂ ತರಹದಲ್ಲಿ ಸೇವಿಸುತ್ತೇವೆ. ಫ್ರೆಂಚ್‌ ಟೋಸ್ಟ್‌ ಅನ್ನು ಇನ್ನೂ ಸುಲಭವಾಗಿ ಮತ್ತು ರುಚಿಯಾಗಿ ಬಾಳೆಹಣ್ಣಿನ ಟಾಪಿಂಗ್‌ ಜೊತೆ ನಾವು ನಿಮಗಾಗಿ ರೆಸಿಪಿಯನ್ನು ಹೇಳುತ್ತಿದ್ದೇವೆ. ಇದನ್ನು ಕೇವಲ 25 ನಿಮಿಷಗಳ ಒಳಗೆ ಮಾಡಬಹುದಾಗಿದೆ.

ಇದನ್ನೂ ಓದಿ: Drumstick Pickle : ನುಗ್ಗೆಕಾಯಿ ಉಪ್ಪಿನಕಾಯಿ ಎಂದಾದರೂ ಸವಿದಿದ್ದೀರಾ? ಇಲ್ಲವಾದರೆ ಈ ನುಗ್ಗೆಕಾಯಿ ಸೀಸನ್‌ನಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ

ಬಾಳೆಹಣ್ಣಿನ ಫ್ರೆಂಚ್‌ ಟೋಸ್ಟ್‌ (Banana French Toast) ಮಾಡುವುದು ಹೇಗೆ?

ಬೇಕಾಗುವ ಪದಾರ್ಥಗಳು
ಮೊಟ್ಟೆ
ಕ್ರೀಮ್
ಸಕ್ಕರೆ
ಬ್ರೆಡ್‌
ಬೆಣ್ಣೆ
ದಾಲ್ಚಿನ್ನಿ ಪೌಡರ್‌ ಸ್ವಲ್ಪ
ಆರೆಂಜ್‌ ಜ್ಯೂಸ್‌ ಸ್ವಲ್ಪ
ಮಸಾಲಾ ಪೌಡರ್‌ ಸ್ವಲ್ಪ

ಬಾಳೆಹಣ್ಣಿನ ಫ್ರೆಂಚ್‌ ಟೋಸ್ಟ್‌ (Banana French Toast) ಮಾಡುವ ವಿಧಾನ :

ಮೊದಲು ಒಂದು ಮಿಕ್ಸಿಂಗ್‌ ಪಾತ್ರೆಗೆ ಮೊಟ್ಟೆ ಹಾಕಿ ವಿಸ್ಕ್‌ ಮಾಡಿ. ಅದಕ್ಕೆ ಕ್ರೀಮ್‌, ಸಕ್ಕರೆ, ದಾಲ್ಚಿನ್ನಿ ಪೌಡರ್‌, ಮಾಸಾಲಾ ಪೌಡರ್‌ ಮತ್ತು ಆರೆಂಜ್‌ ಜ್ಯೂಸ್‌ ಹಾಕಿ ಮಿಕ್ಸ್‌ ಮಾಡಿ. ಈಗ ಬ್ರೆಡ್‌ ಪೀಸ್‌ ತೆಗೆದುಕೊಳ್ಳಿ ಮಾಡಿಟ್ಟುಕೊಂಡ ಮಿಶ್ರಣದಲ್ಲಿ ಡಿಪ್‌ ಮಾಡಿ. ಪ್ಯಾನ್‌ ಬಿಸಿಮಾಡಿ ಅದರೆ ಮೇಲೆ ಬೆಣ್ಣೆ ಸವರಿ. ನಂತರ ಡಿಪ್‌ ಮಾಡಿಟ್ಟ ಬ್ರೆಡ್‌ ಪೀಸ್‌ ತೆಗೆದುಕೊಳ್ಳಿ ಪ್ಯಾನ್‌ ಮೇಲೆ ಇಡಿ. ಅದನ್ನು ಚೆನ್ನಾಗಿ ಬೇಯಲು ಬಿಡಿ. ಬೇಯಿಸಿದ ನಂತರ ಪ್ಲೇಟ್‌ಗೆ ಹಾಕಿಕೊಳ್ಳಿ. ಬಾಳೆಹಣ್ಣನ್ನು ಕಟ್‌ ಮಾಡಿ ಟೋಸ್ಟ್‌ ಮೇಲೆ ಹಾಕಿ. ಅದಕ್ಕೆ ಐಸಿಂಗ್‌ ಶುಗರ್‌ ಹಾಕಿ. ನಂತರ ಬಿಸಿ ಬಿಸಿ ಕಾಫಿಯ ಜೊತೆ ಸವಿಯಿರಿ.

ನೀವು ರುಚಿಯಾದ ಬಾಳೆಹಣ್ಣಿನ ಫ್ರೆಂಚ್‌ ಟೋಸ್ಟ್‌ ಮಾಡಿ.

ಇದನ್ನೂ ಓದಿ: Pani Puri Health Benefits : ಎಲ್ಲರ ಟಾಪ್ ಫೇವರಿಟ್ ಪಾನಿ ಪೂರಿ ಉಪಯೋಗಗಳನ್ನ ತಿಳಿದ್ರೆ, ನೀವೂ ಅಚ್ಚರಿಪಡ್ತೀರ!

(Banana French Toast try this for the morning meal)

Comments are closed.