ಸಚಿವ ಸಂಪುಟಕ್ಕೆ ಸರ್ಜರಿ : ನೂತನ ಸಚಿವರ ಪಟ್ಟಿ ಜೊತೆ ದೆಹಲಿಗೆ ಹೊರಟ ಸಿಎಂ ಬೊಮ್ಮಾಯಿ

ಬೆಂಗಳೂರು : ನೊರೆಂಟು ಕಾರಣಗಳಿಗೆ ತಣ್ಣಗಾಗಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತು ಮತ್ತೆ ಚುರುಕುಗೊಂಡಿದ್ದು, ಸೋಮವಾರ ದೆಹಲಿಗೆ ತೆರಳಬೇಕಿದ್ದ ಸಿಎಂ ಇಂದೇ ದೆಹಲಿಗೆ ದೌಡಾಯಿಸಿದ್ದಾರೆ. ಹೀಗಾಗಿ ರಾಜ್ಯದ ಸಚಿವ ಸ್ಥಾನಾಕಾಂಕ್ಷಿಗಳ ಮುಖದಲ್ಲಿ ಮತ್ತೆ ಗೆಲುವು ಮೂಡಿದೆ. ರಾಜ್ಯ ಬಜೆಟ್ ಹಾಗೂ ಸಂಪುಟ ವಿಸ್ತರಣೆ ಎರಡೂ ವಿಚಾರವನ್ನು ಇಟ್ಟುಕೊಂಡು (Karnataka Cabinet Expansion) ಸಿಎಂ ಬೊಮ್ಮಾಯಿ ದೆಹಲಿಗೆ ಭೇಟಿ ನೀಡುತ್ತಿದ್ದಾರೆ.

ಕಳೆದ ಆರು ತಿಂಗಳಿನಿಂದ ಸಚಿವ ಸಂಪುಟ ವಿಸ್ತರಣೆ ವಿಚಾರ ಆಗಾಗ ಮುನ್ನಲೆಗೆ ಬರುತ್ತಲೇ ಇದೆ. ಆದರೆ ಕೊರೋನಾ ಸೇರಿದಂತೆ ಹಲವು ಕಾರಣದಿಂದ ವಿಸ್ತರಣೆ ಸಾಧ್ಯವಾಗಿರಲಿಲ್ಲ. ಈ‌ ಮಧ್ಯೆ ಚುನಾವಣೆ ಗೆ ಇನ್ನೇನು ಕೇವಲ ಒಂದು ವರ್ಷ ಬಾಕಿ ಇರೋದರಿಂದ ಈ ಹೊತ್ತಿನಲ್ಲಾದ್ರೂ ಆಕಾಂಕ್ಷಿಗಳಿಗೆ ಸಚಿವ ಸ್ಥಾನ ನೀಡಿ ಸಂತೈಸುವ ಕಾರ್ಯ ನಡೆಯಬೇಕೆಂಬ ಆಗ್ರಹ ಪಕ್ಷದ ಮಟ್ಟದಲ್ಲಿ ವ್ಯಕ್ತವಾಗಿದೆ.

ಹೀಗಾಗಿ ಸಚಿವ ಸಂಪುಟ ವಿಸ್ತರಣೆ ಪ್ರಸ್ತಾಪ ಹಿಡಿದು ಸಿಎಂ ದೆಹಲಿಗೆ ಪಯಣ ಬೆಳೆಸಿದ್ದಾರೆ. ಸದ್ಯ ರಾಜ್ಯ ಸಚಿವ ಸಂಪುಟದಲ್ಲಿ ನಾಲ್ಕು ಸಚಿವ ಸ್ಥಾನ ಖಾಲಿ ಇದೆ. ಆದರೆ ೧೨ ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನದ ರೇಸ್ ನಲ್ಲಿದ್ದಾರೆ. ಹಿರಿಯ ಶಾಸಕರಾದ ಬಸನ್ ಗೌಡ್ ಪಾಟೀಲ್ ಉತ್ನಾಳ್, ಎಂ.ಪಿ.ರೇಣುಕಾಚಾರ್ಯ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಎಸ್.ಎ.ರಾಮದಾಸ್, ರಾಜುಗೌಡ್ ನಾಯಕ, ಶಿವನ್ ಗೌಡ ನಾಯಕ, ಶಿವರಾಜ್ ಪಾಟೀಲ್, ಪೂರ್ಣಿಮಾ ಶ್ರೀನಿವಾಸ್ ಹಾಗೂ ಉಪಸಭಾಪತಿ ಆನಂದ ಮಾಮನಿ ಸಚಿವ ಸ್ಥಾನದ ಆಕಾಂಕ್ಷಿಕತರ ಪಟ್ಟಿಯಲ್ಲಿದ್ದಾರೆ.

ಅಲ್ಲದೇ ಕೆಲವು ದಿನಗಳಿಂದ ರಾಜ್ಯದಲ್ಲಿ ಸಪಕ್ಷಿಯರ ನಡುವೆಯೇ ಕಲಹ ಶುರುವಾಗಿದೆ. ಸಚಿವ ಸಂಪುಟದ ಹಲವು ಸಚಿವರು ಶಾಸಕರ ಪೋನ್ ರಿಸೀವ್ ಮಾಡೋದಿಲ್ಲ. ನಮ್ಮ ಸಮಸ್ಯೆಗೆ ಸ್ಪಂದಿಸೋದಿಲ್ಲ ಎಂದು ರೇಣುಕಾಚಾರ್ಯ, ಸೋಮ ಶೇಖರ್ ರೆಡ್ಡಿ ಸೇರಿದಂತೆ ಹಲವರು ಹಾಲಿ ಸಚಿವರ ವಿರುದ್ಧ ಆರೋಪ ಮಾಡಿದ್ದಾರೆ. ಹೀಗಾಗಿ ಹಾಲಿ ಸಚಿವರಲ್ಲಿ ಕೆಲವರನ್ನು ಕೈಬಿಟ್ಟು ಚುನಾವಣೆ ದೃಷ್ಟಿಯಿಂದ ಹಲವು ಹೊಸ ಮುಖ ಗಳಿಗೆ ಸಂಪುಟದಲ್ಲಿ ಸ್ಥಾನ ನೀಡುವ ಲೆಕ್ಕಾಚಾರದಲ್ಲಿದ್ದಾರಂತೆ ಸಿಎಂ ಬೊಮ್ಮಾಯಿ.

ಶಶಿಕಲಾ ಜೊಲ್ಲೆ, ಹಿರಿಯ ಸಚಿವ ಕೆ.ಎಸ್‌ಈಶ್ವರಪ್ಪ್,ಮುರುಗೇಶ್ ನಿರಾಣಿ, ಪ್ರಭುಚೌಹ್ಹಾಣ್, ವಿ.ಸೋಮಣ್ಣ ಹಾಗೂ ಕೆ.ಸಿ.ನಾರಾಯಣ್ ಗೌಡನಿಗೆ ಸಂಪುಟದಿಂದ ಗೇಟ್ ಪಾಸ್ ಸಿಗಲಿದೆ ಎಂದು ನೀರಿಕ್ಷಿಸಲಾಗುತ್ತಿದೆ. ಇನ್ನೊಂದೆಡೆ ಪಂಚ ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಅನಗತ್ಯ ಸಮಸ್ಯೆ,ಬಂಡಾಯದಿಂದ ಸೇಫ್ ಆಗಲು ಹೈಕಮಾಂಡ್ ಈ ವಿಸ್ತರಣೆಯನ್ನೇ ಮುಂದೂಡುವ ಸಾಧ್ಯತೆ ಕೂಡ ಇದೆ.

ಇದನ್ನೂ ಓದಿ : ಹರತಾಳು VS ಬೇಳೂರು : ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಮುಂದಾದ ಹಾಲಿ, ಮಾಜಿ ಶಾಸಕರು

ಇದನ್ನೂ ಓದಿ : ಹಿಜಬ್​ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ತಡೆದ ಪ್ರಾಂಶುಪಾಲ

( Karnataka Cabinet Expansion Chief Minister Basavaraj Bommai leaving Delhi with a list of new ministers)

Comments are closed.