Mark Zuckerberg:ವಾಟ್ಸ್‌ಅಪ್‌ನ ಹೊಸ ವೈಶಿಷ್ಟ್ಯಗಳನ್ನು ಪ್ರಕಟಿಸಿದ ಮಾರ್ಕ್‌ ಜುಕರ್‌ಬರ್ಗ್‌

ಮೆಟಾ (Meta) ಒಡೆತನದಲ್ಲಿರುವ ತ್ವರಿತ ಸಂದೇಶ ವೇದಿಕೆ ವಾಟ್ಸ್‌ಅಪ್‌ (WhatsApp) ಹೊಸ ವೈಶಿಷ್ಟ್ಯಗಳನ್ನು ಅಪ್ಡೇಟ್‌ ಮಾಡಿದೆ. ಇದನ್ನು ಸಿಇಓ ಮಾರ್ಕ್‌ ಜುಕರ್‌ಬರ್ಗ್‌ (Mark Zuckerberg) ಅವರೇ ಇಂದು ಪ್ರಕಟಿಸಿದ್ದಾರೆ. ವಾಟ್ಸ್‌ಅಪ್‌ ಪ್ಲಾಟ್‌ಫಾರ್ಮ್‌ನಲ್ಲಿ ದೊಡ್ಡ ಗುಂಪು ಚರ್ಚೆಗಳನ್ನು (Group Discussions) ಬೆಂಬಲಿಸುವ ಪ್ರಯತ್ನದಲ್ಲಿ ವಾಟ್ಸ್‌ಅಪ್‌ ಕಮ್ಯುನಿಟೀಸ್‌ ಎಂಬ ಹೊಸ ವೈಶಿಷ್ಟ್ಯವನ್ನು ಹೊರತಂದಿದೆ ಎಂದು ಅವರು ಹೇಳಿದರು.

‘ಇಂದು ನಾವು ವಾಟ್ಸ್‌ಅಪ್‌ನಲ್ಲಿ ಕಮ್ಯುನಿಟೀಸ್‌ ಅನ್ನು ಪ್ರಾರಂಭಿಸುತ್ತಿದ್ದೇವೆ. ಕಮ್ಯನಿಟೀಸ್‌ ಫೀಚರ್‌, ಸಬ್‌–ಗ್ರೂಪ್‌, ಮಲ್ಟಿಪಲ್‌ ಥ್ರೆಡ್‌, ಪ್ರಕಟಣೆ, ಮುಂತಾದ ಹೊಸ ವೈಶಿಷ್ಟ್ಯಗಳು ವಾಟ್ಸ್‌ಅಪ್‌ ನಲ್ಲಿ ರಚಿಸುವ ಗ್ರೂಪ್‌ಗಳ ಕಾರ್ಯಕ್ಷಮತೆಯನ್ನುಉತ್ತಮಗೊಳಿಸಬಹುದಾಗಿದೆ. ಇದರ ಜೊತೆಗೆ ಪೋಲ್ಸ್‌ ಮತ್ತು 32 ಜನರಿಗೆ ವಿಡಿಯೋ ಕರೆಗಳನ್ನು ಮಾಡಬಹುದಾದ ವೈಶಿಷ್ಟ್ಯಗಳನ್ನು ಹೊರತರುತ್ತಿದ್ದೆವೆ. ಎಲ್ಲವನ್ನೂ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನಿಂದ ಸುರಕ್ಷಿತಗೊಳಿಸಲಾಗಿದೆ, ಆದ್ದರಿಂದ ನಿಮ್ಮ ಸಂದೇಶಗಳು ಖಾಸಗಿಯಾಗಿವೆ’ಎಂದು ಜುಕರ್‌ಬರ್ಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾಟ್ಸ್‌ಅಪ್‌ನ ಹೊಸ ಕಮ್ಯುನಿಟಿ ಫೀಚರ್‌ ನೆರೆಹೊರೆಯ, ಕೆಲಸದ ಸ್ಥಳಗಳ, ನಾನ್‌–ಪ್ರಾಫಿಟ್‌ ಸಂಸ್ಥೆಗಳ, ಕ್ಲಬ್‌ಗಳ, ಮತ್ತು ಶಾಲೆಗಳಂತಹ ಸಮುದಾಯಗಳಲ್ಲಿ ಗುಂಪು ಸಂಭಾಷಣೆಗಳನ್ನು ಆಯೋಜಿಸಲು ಸಹಾಯಮಾಡುತ್ತದೆ. ಇದರಿಂದ ಅನೇಕ ಗುಂಪುಗಳನ್ನು ಸೇರಿಸಬಹುದಾಗಿದೆ.

ಕಮ್ಯುನಿಟಿ ಫಿಚರ್‌ ಅಂದರೇನು ಅದು ಹೇಗೆ ಕೆಲಸಮಾಡುತ್ತದೆ?

ಹೊಸ ಕಮ್ಯುನಿಟಿಯನ್ನು ಪ್ರಾರಂಭಿಸಲು ಅಥವಾ ಅಸ್ತಿತ್ವದಲ್ಲಿರುವ ಗುಂಪುಗಳನ್ನು ಅದಕ್ಕೆ ಸೇರಿಸಲು ಬಳಕೆದಾರರು ತಮ್ಮ Android ನಲ್ಲಿನ ಚಾಟ್‌ಗಳ ಮೇಲ್ಭಾಗದಲ್ಲಿ ಮತ್ತು iOS ನಲ್ಲಿ ಕೆಳಭಾಗದಲ್ಲಿರುವ ಹೊಸ ಸಮುದಾಯಗಳ ಟ್ಯಾಬ್ ಅನ್ನು ಟ್ಯಾಪ್ ಮಾಡುವುದರ ಮೂಲಕ ರಚಿಸಬಹುದಾಗಿದೆ.

ಇದರ ನಿರ್ವಹಣೆಯನ್ನು ಕಮ್ಯುನಿಟಿಯ ನಿರ್ವಾಹಕರು ಮಾತ್ರ ಮಾಡಬಹುದಾಗಿದೆ. ಕಮ್ಯುನಿಟಿಯಲ್ಲಿರುವ ಪ್ರತಿಯೊಬ್ಬರಿಗೂ ಪ್ರಮುಖ ನವೀಕರಣಗಳನ್ನು ಪ್ರಸಾರ ಮಾಡಬಹುದಾಗಿದೆ.

ಕಮ್ಯುನಿಟಿಯ ನಿರ್ವಾಹಕರು ಕಮ್ಯುನಿಟಿಯಿಂದ ಗುಂಪುಗಳನ್ನು ಅನ್‌ಲಿಂಕ್ ಮಾಡಬಹುದು ಮತ್ತು ಸಮುದಾಯದಿಂದ ಪ್ರತ್ಯೇಕ ಸದಸ್ಯರನ್ನು ತೆಗೆದುಹಾಕಬಹುದು. ಒಂದು ವೇಳೆ ಗುಂಪಿನ ಎಲ್ಲಾ ಸದಸ್ಯರಿಗೆ ಸೂಕ್ತವಲ್ಲದ ಅಥವಾ ನಿಂದನೀಯ ಚಾಟ್‌ಗಳನ್ನು ಮಾಡಿದರೆ ಆಗ ಅದನ್ನು ಅಳಿಸಲು ಸಾಧ್ಯವಾಗುತ್ತದೆ.

ಕಮ್ಯುನಿಟಿಗಳ ಪರಿಚಯದೊಂದಿಗೆ, ಒಂದಕ್ಕಿಂತ ಹೆಚ್ಚು ಬಾರಿ ಫಾರ್ವರ್ಡ್ ಮಾಡಲಾದ ಸಂದೇಶಗಳನ್ನು ಒಂದು ಸಮಯದಲ್ಲಿ ಒಂದು ಗುಂಪಿಗೆ ಮಾತ್ರ ಕಳುಹಿಸಲು ಸಾಧ್ಯವಾಗುತ್ತದೆ.

WeBetaInfo ವರದಿಯ ಪ್ರಕಾರ, ಇದು ಜಾಗತಿಕ ರೋಲ್‌ಔಟ್‌ನ ಅಧಿಕೃತ ಪ್ರಕಟಣೆಯಾಗಿದ್ದರೂ ಸಹ, ಈ ವೈಶಿಷ್ಟ್ಯಗಳು ತಕ್ಷಣವೇ ನಿಮ್ಮ ಖಾತೆಯನ್ನು ತಲುಪುವುದಿಲ್ಲ. ಆದ್ದರಿಂದ ನೀವು ವಾಟ್ಸ್‌ಅಪ್‌ (WhatsApp) ಅನ್ನು ತೆರೆದರೆ ಆಶ್ಚರ್ಯಪಡೆಯುವ ಅಗತ್ಯವಿಲ್ಲ.

ವಾಟ್ಸ್‌ಅಪ್ ಇತ್ತೀಚಿನ ವೈಶಿಷ್ಟ್ಯಗಳು:
ವಾಟ್ಸ್‌ಅಪ್ (WhatsApp) ಗುಂಪು ಪೋಲ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಕಾರ್ಯಚಟುವಟಿಕೆಯು ಬಳಕೆದಾರರಿಗೆ ಮತ ಚಲಾಯಿಸುವ ಸಾಮರ್ಥ್ಯದೊಂದಿಗೆ ತ್ವರಿತವಾಗಿ ಗುಂಪಿನೊಳಗೆ ಸಮೀಕ್ಷೆಗಳನ್ನು ರಚಿಸಲು ಅವಕಾಶ ನೀಡುತ್ತದೆ.

ಈ ಪ್ಲಾಟ್‌ಫಾರ್ಮ್‌ನಲ್ಲಿ ಗ್ರೂಪ್ ವೀಡಿಯೊ ಕರೆಗಳಲ್ಲಿ 32 ಜನರು ಭಾಗವಹಿಸಬಹುದಾಗಿದೆ ಎಂದು ವಾಟ್ಸ್‌ಅಪ್‌ ಘೋಷಿಸಿದೆ. ವಾಟ್ಸ್‌ಅಪ್‌ ಪ್ರಸ್ತುತ ಆಂಡ್ರಾಯ್ಡ್‌ ಮತ್ತು iOS ಎರಡರಲ್ಲೂ ಗುಂಪು ಧ್ವನಿ ಕರೆಗೆ 32 ಜನರು ಸೇರಿಸಲು ಅನುಮತಿಸುತ್ತದೆ ಮತ್ತು ಅದೇ ಮಿತಿಯು ಈಗ ಗುಂಪು ವೀಡಿಯೊ ಕರೆಗಳಿಗೆ ಅನ್ವಯಿಸುತ್ತದೆ.

ಇದನ್ನೂ ಓದಿ : WhatsApp : ಭಾರತದಲ್ಲಿ 26 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿದ ವಾಟ್ಸ್‌ಅಪ್‌

ಇದನ್ನೂ ಓದಿ : Twitter Crisis : ಶೇಕಡಾ 50 ರಷ್ಟು ಸಿಬ್ಬಂದಿಗಳ ಕಿತ್ತೊಗೆಯಲು ಎಲನ್‌ ಮಸ್ಕ್‌ ಪ್ಲಾನ್‌

(Mark Zuckerberg today announces these major features of WhatsApp)

Comments are closed.