Twitter Crisis : ಶೇಕಡಾ 50 ರಷ್ಟು ಸಿಬ್ಬಂದಿಗಳ ಕಿತ್ತೊಗೆಯಲು ಎಲನ್‌ ಮಸ್ಕ್‌ ಪ್ಲಾನ್‌

ಎಲನ್‌ ಮಸ್ಕ್‌ ಟ್ವಿಟ್ವರ್‌ನ (Twitter Crisis)ಒಡೆಯನಾಗಿದ್ದು, ಅಧಿಕಾರವನ್ನು ವಹಿಸಿಕೊಂಡ ಬೆನ್ನಲ್ಲೇ ಸಂಸ್ಥೆಯ ಸಿಇಒ ಮತ್ತು ಮುಖ್ಯ ಕಾನೂನು ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಆದರೆ ಈಗ ಸಂಸ್ಥೆಯ ಸುಮಾರು ಅರ್ಧದಷ್ಟು ಉದ್ಯೋಗಿಗಳನ್ನು ಕಿತ್ತೊಗೆಯಲು ಪ್ಲ್ಯಾನ್‌ ಮಾಡಿರುತ್ತಾರೆಂದು ವರದಿಯಾಗಿರುತ್ತದೆ.

ಟ್ವಿಟರ್‌ ಕಂಪೆನಿಯ ವೆಚ್ಚ ಕಡಿಮೆ ಮಾಡಲು ಸಂಸ್ಥೆಯಲ್ಲಿರುವ 7,500 ಸಿಬ್ಬಂದಿಗಳಲ್ಲಿ ಸುಮಾರು 3,700 ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಾರೆ. ಅಷ್ಟೇ ಅಲ್ಲದೇ ಈ ಕುರಿತು ಎಲನ್‌ ಮಸ್ಕ್‌ ಸಿಬ್ಬಂದಿಗಳಿಗೆ ಶುಕ್ರವಾರದಂದು ಮಾಹಿತಿ ನೀಡಲಿದ್ದಾರೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

ಎಲನ್‌ ಮಸ್ಕ್‌ ಕಂಪೆನಿಯಲ್ಲಿರುವ ಉದ್ಯೋಗಿಗಳನ್ನು ವಜಾಗೊಳಿಸುವುದಲ್ಲದೇ ಟ್ವಿಟರ್‌ನಲ್ಲಿ ಈಗ ವರ್ಕ್‌ ಫ್ರರ್ಮ್‌ ಎನಿವೇರ್‌ ಎನ್ನುವ ನೀತಿಯಲ್ಲಿ ಕೂಡ ಹಲವು ಬದಲಾವಣೆಯನ್ನು ಮಾಡಲಿದ್ದಾರೆ ಎಂದು ಬ್ಲೂಮ್‌ಬರ್ಗ್‌ ವರದಿಯನ್ನು ಮಾಡಿದ್ದಾರೆ. ಮೈಕ್ರೋ ಬ್ಲಾಗಿಂಗ್‌ ಜಾಲತಾಣದ ಈ ನೀತಿಯನ್ನು ತೆಗೆದು ಹಾಕಿ ಉದ್ಯೋಗಿಗಳಿಗೆ ಕಛೇರಿಗಳಲ್ಲಿ ಬಂದು ಕೆಲಸ ಮಾಡುವಂತೆ ತಿಳಿಸಲಾಗುವುದು ಎಂದು ವರದಿ ಆಗಿರುತ್ತದೆ. ಇದರಲ್ಲಿ ಕೆಲವೊಂದು ವಿನಾಯಿತಿಯನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ. ಇದಕ್ಕೂ ಮೊದಲು ಷೇರು ಅನುದಾನ ನೀಡುವುದನ್ನು ತಪ್ಪಿಸಲು ನವೆಂಬರ್‌ 1ರ ಒಳಗೆ ಹಲವು ಟ್ವಿಟರ್‌ ಕಂಪನಿಯ ಸಿಬ್ಬಂದಿಯನ್ನು ತೆಗೆದು ಹಾಕಲಾಗುತ್ತದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿಯನ್ನು ಎಲನ್‌ ಮಸ್ಕ್‌ ಮಾಡಿದ ಟ್ವೀಟ್‌ ಮೂಲಕ ತಳ್ಳಿ ಹಾಕಲಾಗಿದೆ. ಆದರೆ ಟ್ವಿಟರ್‌ನ್ನು ಖಾಸಗಿಯಾಗಿ ಮಾಡಲು, ಅದರ ಸಿಬ್ಬಂದಿಗಳನ್ನು ಕಡಿಮೆ ಮಾಡಲು, ಕಂಟೆಂಟ್‌ ಮಾಡರೇಷನ್‌ ನಿಯಮಗಳನ್ನು ಹಿಂಪಡೆಯಲು ಹಾಗೂ ಹೊಸ ಆದಾಯದ ಮೂಲಗಳನ್ನು ಹುಡುಕುವುದಾಗಿ ಎಲಾನ್‌ ಮಸ್ಕ್‌ ಟ್ವಿಟರ್‌ ಕಂಪೆನಿಯ ಹೂಡಿಕೆದಾರರಿಗೆ ತಿಳಿಸಿರುತ್ತಾರೆ.

ಹಲವು ತಿಂಗಳ ಹಗ್ಗ ಜಗ್ಗಾಟದ ನಂತರ ಎಲನ್‌ ಮಸ್ಕ್‌ ಟ್ವಿಟರ್‌ ಒಪ್ಪಂದವನ್ನು ಕೊನೆಗೊಳಿಸಿದ್ದಾರೆ. ಇದೇ ವೇಳೆಯಲ್ಲಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಕ್ಕು ಮುಕ್ತವಾಗಿದೆ ಎಂದು ಟ್ವೀಟ್‌ನ್ನು ಮಾಡಿದ್ದಾರೆ. ಎಲಾನ್‌ ಮಸ್ಕ್‌ 44 ಮಿಲಿಯನ್‌ ಡಾಲರ್‌ಗೆ ಸಂಸ್ಥೆಯನ್ನು ಖರೀದಿ ಮಾಡುವುದಾಗಿ ಹೇಳಿದ್ದು, ನಂತರ ಈ ಒಪ್ಪಂದದಿಂದ ಹೊರಬರುವುದಾಗಿ ಘೋಷಣೆ ಮಾಡುತ್ತಾರೆ. ಸ್ಪ್ಯಾಮ್‌ ಖಾತೆಗಳ ಬಗ್ಗೆ ವಿವರ ನೀಡದೇ ಇರುವುದರಿಂದ ಒಪ್ಪಂದದಲ್ಲಿ ಕಡಿತಗೊಳಿಸುವುದಾಗಿ ಹೇಳಿಕೊಂಡಿದ್ದರು.

ನಂತರ ದಿನಗಳಲ್ಲಿ ಟ್ವಿಟರ್‌ ಕಂಪನಿ ಕಾನೂನು ಮೊಕದ್ದಮೆ ಹೂಡಿದ ಬಳಿಕ ಕಂಪನಿಯನ್ನು ಖರೀದಿ ಮಾಡುವುದಾಗಿ ಹಾಗೂ ಒಪ್ಪಂದವನ್ನು ಮುಂದುವರಿಸುವುದಾಗಿ ಮಸ್ಕ್‌ ಹೇಳುತ್ತಾರೆ. ಮಸ್ಕ್‌ಗೆ ಡೆಲಾವೇರ್‌ ಚಾನ್ಸೆರಿ ಕೋರ್ಟ್‌ನ ಜಡ್ಜ್‌ ಕೂಡ ಅಕ್ಟೋಬರ್‌ ಒಳಗೆ ಟ್ವಿಟರ್‌ ಒಪ್ಪಂದವನ್ನು ಅಂತ್ಯಗೊಳಿಸಬೇಕು, ಇಲ್ಲವಾದರೇ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಸೂಚನೆಯನ್ನು ನೀಡಲಾಗುತ್ತದೆ. ಅದರಂತೆ ಮಸ್ಕ್‌ ಅಂತಿಮವಾಗಿ ಟ್ವಿಟರ್‌ನ ಒಡೆಯನಾಗುವ ಮೂಲಕ ಸಂಸ್ಥೆಯಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡುತ್ತಾರೆ.

ಇದನ್ನೂ ಓದಿ : Elon Musk: ಎಲೋನ್‌ ಮಸ್ಕ್‌ ಟ್ವಿಟರ್‌ ನ ಹೊಸ ಮಾಲಿಕ; ಸಿಇಓ ಪರಾಗ್‌ ಅಗರ್ವಾಲ್‌ ವಜಾ

ಇದನ್ನೂ ಓದಿ : Make Or Brake : ದಿನಕ್ಕೆ 12 ಗಂಟೆ, ವಾರಕ್ಕೆ 7 ದಿನ ಕೆಲಸ : ಎಲನ್‌ ಮಸ್ಕ್‌ ಆದೇಶಕ್ಕೆ ಟ್ವೀಟರ್ ಉದ್ಯೋಗಿಗಳು ಸುಸ್ತೋ ಸುಸ್ತು

ಅಕ್ಟೋಬರ್ 27 ರಂದು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲನ್‌ ಮಸ್ಕ್‌ ಟ್ವಿಟರ್‌ನ್ನು 44 ಮಿಲಿಯನ್‌ ಡಾಲರ್‌ಗೆ ಸಂಸ್ಥೆಯನ್ನು ಖರೀದಿ ಮಾಡುತ್ತಾರೆ. ಎಲನ್‌ ಮಸ್ಕ್‌ ಕಂಪೆನಿಯನ್ನು ಖರೀದಿಸಿದ ಕೆಲವು ದಿನಗಳಲ್ಲಿ ಸಿಇಒ ಪರಾಗ್ ಅಗರವಾಲ್, ಹಣಕಾಸು ಮುಖ್ಯಸ್ಥ ನೆಡ್ ಸೆಗಲ್ ಮತ್ತು ಕಾನೂನು ಕಾರ್ಯನಿರ್ವಾಹಕರಾದ ವಿಜಯ ಗಡ್ಡೆ ಮತ್ತು ಸೀನ್ ಎಡ್ಜೆಟ್ ಸೇರಿದಂತೆ ಸಾಮಾಜಿಕ ಮಾಧ್ಯಮ ಕಂಪನಿಯ ನಾಲ್ಕು ಉನ್ನತ ಕಾರ್ಯನಿರ್ವಾಹಕರನ್ನು ವಜಾಗೊಳಿಸಿದರು.

Twitter Crisis Elon Musk plans to lay off 50 percent of staff

Comments are closed.