Mastodon App : ಓಪನ್‌ ಸೋರ್ಸ್‌ ಮೈಕ್ರೋಬ್ಲಾಗಿಂಗ್‌ ಸೈಟ್‌ ಮಾಸ್ಟೋಡಾನ್‌ ಬಗ್ಗೆ ನಿಮಗೆ ಗೊತ್ತಾ; ಇದರಲ್ಲಿ ಖಾತೆ ರಚಿಸುವುದಾದರೂ ಹೇಗೆ…

ಸೋಷಿಯಲ್‌ ಮೀಡಿಯಾ ವೇದಿಕೆ (Social Media Platform) ಗೆ ಹೋಲುವ ಮಾಸ್ಟೋಡಾನ್‌ (Mastodon) ಓಪನ್‌ ಸೋರ್ಸ್‌ ಮೈಕ್ರೋಬ್ಲಾಗಿಂಗ್‌ ಸೈಟ್‌ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ಜನರು ಸಕ್ರೀಯರಾಗಿದ್ದಾರೆ. ಎಲೋನ್‌ ಮಸ್ಕ್‌ ಟ್ವೀಟರ್‌ (Twitter) ಖರೀದಿಸಿದ ನಂತರ ಅದರಲ್ಲಿ ತರಲಾದ ಬದಲಾವಣೆಗಳಿಂದ ಬಹಳಷ್ಟು ಜನರು ಪರ್ಯಾಯ ವೇದಿಕೆ ಹುಡುಕುತ್ತಿದ್ದಾರೆ. ಎಲ್ಲಾಇತರ ಸಾಮಾಜಿಕ ವೇದಿಕೆಗಳಿಗಿಂತ ಮಾಸ್ಟೋಡಾನ್‌ (Mastodon App) ವ್ಯಾಪಕ ಗಮನ ಸೆಳೆದಿದೆ.

ಮಾಸ್ಟೋಡಾನ್ ಇದು ಒಂದು ಓಪನ್ ಸೋರ್ಸ್ ಮೈಕ್ರೋಬ್ಲಾಗಿಂಗ್ ಸೈಟ್ ಆಗಿದೆ. ಇದೂ ಸಹ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿರುವ ವಿಡಿಯೋ, ವೈಯ್ಸ್‌, ಮತ್ತು ಟೆಕ್ಸ್ಟ್‌ ಚಾಟ್‌ ಗಳನ್ನು ಬೆಂಬಲಿಸುವ ಡಿಸ್ಕಾರ್ಡ್ ಅಪ್ಲಿಕೇಶನ್‌ಗೆ ಹೋಲುತ್ತದೆ. ಇದು ಜನರು ತಮ್ಮ ಆಲೋಚನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶವನ್ನು ನೀಡುತ್ತದೆ. ಇದೂ ಸಹ ಖಾತೆ ರಚಿಸಲು, ಸೇರಲು, ಟೊಟ್‌ ಮಾಡಲು(ಟ್ವೀಟ್‌ ಬದಲಿಗೆ) , ಫಾಲೋ ಮಾಡಲು, ಫೆವರೆಟ್‌ (ಲೈಕ್‌ ಬದಲಿಗೆ), ಬೂಸ್ಟ್‌ (ರೀಟ್ವೀಟ್‌) ಮಾಡುವಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗಿಂತ ಸರಳ ಮತ್ತು ಸುರಕ್ಷಿತವಾಗಿದೆ ಎಂದು ಹೇಳಲಾಗುತ್ತದೆ.

ಹಾಗಾದರೆ, ಮಾಸ್ಟೋಡಾನ್‌ ನಲ್ಲಿ ಹೊಸ ಖಾತೆ ತೆರೆಯುವುದು ಹೇಗೆ? ಪ್ರೊಫೈಲ್‌ ರಚಿಸುವುದು ಹೇಗೆ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಇದನ್ನೂ ಓದಿ : Instagram ಪರಿಚಯಿಸಿದ ಹೊಸ ವೈಶಿಷ್ಟ್ಯಗಳು ನಿಮಗೆ ಗೊತ್ತಾ; ಈಗ ರೀಲ್ಸ್‌ ಮಾಡುವುದು ಇನ್ನೂ ಸುಲಭ

  • ಆಂಡ್ರಾಯ್ಡ್‌ ಮತ್ತು ಐಓಎಸ್‌ ಬಳಕೆದಾರರು ಬಹಳ ಸುಲಭವಾಗಿ ಮಾಸ್ಟೋಡಾನ್‌ನಲ್ಲಿ ಖಾತೆ ರಚಿಸಬಹುದಾಗಿದೆ.
  • ಮೊದಲು ಗೂಗಲ್‌ ಪ್ಲೇ ಸ್ಟೋರ್‌(ಆಂಡ್ರಾಯ್ಡ್‌) ಅಥವಾ ಆಪ್‌ ಸ್ಟೋರ್‌ (ಐಓಎಸ್‌) ನಿಂದ ಮಾಸ್ಟೋಡಾನ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಿ.
  • ಅಪ್ಲಿಕೇಶನ್‌ ತೆರೆಯಿರಿ. ಅದರಲ್ಲಿ ಹೊಸ ಖಾತೆ ರಚಿಸಲು ಗೆಟ್‌ ಸ್ಟಾರ್ಟೆಡ್‌ ಮೇಲೆ ಕ್ಲಿಕ್ಕಿಸಿ.
  • ಆಗ ಮಾಸ್ಟೋಡಾನ್‌ ಅಪ್ಲಿಕೇಶನ್‌ ವೇದಿಕೆಯು ಲಭ್ಯವಿರುವ ಕೆಲವು ಸರ್ವರ್‌ಗಳನ್ನು ಪರದೆಯ ಮೇಲೆ ತೋರಿಸುತ್ತದೆ. ಅದರಲ್ಲಿ ನೀವು ಯಾವ ಸರ್ವರ್‌ಗಳೊಂದಿಗೆ ಪ್ರಾರಂಭಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಬಹುದಾಗಿದೆ. ಸರ್ವರ್‌ಗಳು ಸಾಮಾನ್ಯ ಸುದ್ದಿಗಳು ಮತ್ತು ಇತರ ವಿಷಯಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಜನರ ಆಸಕ್ತಿಗಳನ್ನು ಆಧರಿಸಿವೆ.
  • ಸರ್ವರ್‌ಗಳನ್ನು ಆಯ್ಕೆ ಮಾಡಿದ ನಂತರ, ನೆಕ್ಸ್ಟ್‌ ಮೇಲೆ ಕ್ಲಿಕ್ ಮಾಡಿ.
  • ವೇದಿಕೆಯ ಕೆಲವು ಮೂಲ ನಿಯಮಗಳನ್ನು ನಿಮಗೆ ತೋರಿಸುತ್ತದೆ. ಅದನ್ನು ಎಚ್ಚರಿಕೆಯಿಂದ ಓದಿ ಮತ್ತು ನಂತರ ನೆಕ್ಸ್ಟ್‌ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಡಿಸ್‌ಪ್ಲೇ ಆಗಬೇಕಾದ ಹೆಸರು, ಮಾಸ್ಟೋಡಾನ್‌ಗಾಗಿ ಬಳಕೆದಾರರ ಹೆಸರು, ಇಮೇಲ್ ಮತ್ತು ಪ್ರೊಫೈಲ್ ಪಾಸ್‌ವರ್ಡ್‌ನಂತಹ ನಿಮ್ಮ ಪ್ರೊಫೈಲ್ ವಿವರಗಳನ್ನು ನಮೂದಿಸಿ.
  • ನಂತರ ನೆಕ್ಸ್ಟ್‌ ಮೇಲೆ ಕ್ಲಿಕ್ ಮಾಡಿ.
  • ಮಾಸ್ಟೋಡಾನ್‌ನಲ್ಲಿ ಉಲ್ಲೇಖಿಸಿದ/ನೀಡಿದ ಇಮೇಲ್ ಐಡಿಗೆ ಪರಿಶೀಲನೆ ಲಿಂಕ್ ಅನ್ನು ನಿಮಗೆ ಕಳುಹಿಸುತ್ತದೆ. ನಿಮ್ಮ ಇಮೇಲ್ ಪರಿಶೀಲಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
  • ಲಿಂಕ್ ಕಳುಹಿಸಲು ಮಾಸ್ಟೋಡಾನ್‌ ಪ್ಲಾಟ್‌ಫಾರ್ಮ್ ಕೆಲವು ಸಮಯ ತೆಗೆದುಕೊಳ್ಳಬಹುದು. ನಿಮ್ಮ ಸ್ಪ್ಯಾಮ್ ಫೋಲ್ಡರ್ ಅನ್ನು ಸಹ ಪರಿಶೀಲಿಸಿ. ಕೆಲವೊಮ್ಮೆ ಪರಿಶೀಲನೆ ಇಮೇಲ್ ನಲ್ಲಿ ಕೊನೆಗೊಳ್ಳುತ್ತದೆ.
  • ನಿಮ್ಮ ಇಮೇಲ್ ಪರಿಶೀಲಿಸಿದ ನಂತರ ಮಾಸ್ಟೋಡಾನ್‌ನ ಹೋಮ್‌ ಪೇಜ್‌ ತೆರೆದುಕೊಳ್ಳುತ್ತದೆ. ನೀವು ಆಯ್ಕೆ ಮಾಡಿದ ಸರ್ವರ್‌ಗಳಲ್ಲಿನ ಜನರಿಂದ ಪೋಸ್ಟ್‌ಗಳನ್ನು ನೀವು ಈಗ ಓದಬಹುದಾಗಿದೆ.

ಇದನ್ನೂ ಓದಿ : Fake Twitter Account : ಟ್ವೀಟರ್ ನಲ್ಲಿ ಹೆಚ್ಚಾಯ್ತು ನಕಲಿ ಖಾತೆ :ಟ್ವೀಟರ್ ಬ್ಲೂ ಟಿಕ್‌ ಚಂದಾದಾರಿಕೆ ಸ್ಥಗಿತ

(Mastodon App how to download and create mastodon account on iPhone and android phone)

Comments are closed.