Amazon jobs: 10 ಸಾವಿರ ಉದ್ಯೋಗ ಕಡಿತ: ಉದ್ಯೋಗಿಗಳಿಗೆ ಶಾಕ್‌ ಕೊಟ್ಟ ಅಮೆಜಾನ್‌

ನವದೆಹಲಿ: (Amazon jobs) ಸಾಮಾಜಿಕ ಮಾಧ್ಯಮ ದೈತ್ಯ ಕಂಪನಿಗಳಲ್ಲಿ ಒಂದಾದ ಟ್ವೀಟರ್‌ ಉದ್ಯೋಗಿಗಳನ್ನು ಕಡಿತ ಮಾಡಿದ ಬೆನ್ನಲ್ಲೇ ಇದೀಗ ಇ-ಕಾಮರ್ಸ್‌ ದೈತ್ಯ ಕಂಪನಿ ಅಮೆಜಾನ್‌ ಕೂಡ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮುಂದಾಗಿದೆ ಎಂಬ ವರದಿಗಳು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿವೆ.

ಸುಮಾರು ಹತ್ತು ಸಾವಿರ ಉದ್ಯೋಗಸ್ಥರನ್ನು ವಜಾಗೊಳಿಸಲು ಅಮೆಜಾನ್‌(Amazon jobs) ಮುಂದಾಗಿದೆ ಎನ್ನಲಾಗುತ್ತಿದೆ. ಕಳೆದ ಕೆಲವು ಸಮಯಗಳಿಂದ ನಿರೀಕ್ಷಿತ ಲಾಭ ಬಂದಿಲ್ಲದೇ ಇರುವುದರಿಂದ ಉಳಿತಾಯ ಕ್ರಮದ ಅಡಿಯಲ್ಲಿ ಉದ್ಯೋಗ ಕಡಿತಕ್ಕೆ ಕಂಪನಿ ಚಿಂತನೆ ನಡೆಸುತ್ತಿದ್ದು, ಕೆಲವು ಉದ್ಯೋಗಿಗಳು ಶೀಘ್ರದಲ್ಲಿ ತಮ್ಮ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ಇದನ್ನೂ ಓದಿ : Mastodon App : ಓಪನ್‌ ಸೋರ್ಸ್‌ ಮೈಕ್ರೋಬ್ಲಾಗಿಂಗ್‌ ಸೈಟ್‌ ಮಾಸ್ಟೋಡಾನ್‌ ಬಗ್ಗೆ ನಿಮಗೆ ಗೊತ್ತಾ; ಇದರಲ್ಲಿ ಖಾತೆ ರಚಿಸುವುದಾದರೂ ಹೇಗೆ…

ಇದನ್ನೂ ಓದಿ : PhonePe, GPay, Paytm ಇನ್ಮುಂದೆ ನಿಮ್ಮ ಭಾಷೆಯಲ್ಲಿ ಲಭ್ಯ : ಸೆಟ್ಟಿಂಗ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : Fake Twitter Account : ಟ್ವೀಟರ್ ನಲ್ಲಿ ಹೆಚ್ಚಾಯ್ತು ನಕಲಿ ಖಾತೆ :ಟ್ವೀಟರ್ ಬ್ಲೂ ಟಿಕ್‌ ಚಂದಾದಾರಿಕೆ ಸ್ಥಗಿತ

ಒಂದು ವೇಳೆ ಅಮೆಜಾನ್ ನಲ್ಲಿ ಉದ್ಯೋಗಿಗಳನ್ನು ಕಡಿತಗೊಳಿಸಿದ್ದಲ್ಲಿ ಅಮೇಜಾನ್‌ ಇತಿಹಾಸದಲ್ಲೇ ಇದು ಅತೀ ದೊಡ್ಡ ರೀತಿಯ ಉದ್ಯೋಗಿಗಳ ಕಡಿತವಾಗಲಿದೆ. ವಿಶ್ವದಾದ್ಯಂತ ಸುಮಾರು 1.6 ಮಿಲಿಯನ್‌ ಅದ್ಯೋಗಿಗಳು ಅಮೇಜಾನ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮೆಜಾನ್‌ನ ಚಿಲ್ಲರೆ ವಿಭಾಗ ಮತ್ತು ಮಾನವ ಸಂಪನ್ಮೂಲಗಳ ಜೊತೆಗೆ ಅಲೆಕ್ಸಾ ಧ್ವನಿ ಸಹಾಯಕಕ್ಕೆ ಜವಬ್ದಾರರಾಗಿರುವ ಸಾಧನಗಳ ತಂಡವು ಉದ್ಯೋಗ ಕಡಿತಕ್ಕೆ ಒಳಗಾಗಲಿದೆ. ಮತ್ತು ಒಂದು ತಿಂಗಳ ಅವಧಿಯ ಪರಿಶೀಲನೆಯ ಬಳಿಕ ಕಂಪನಿಯಲ್ಲಿನ ಲಾಭದಾಯಕವಲ್ಲದ ಘಟಕಗಳಲ್ಲಿನ ಉದ್ಯೋಗಿಗಳಿಗೆ ಇತರ ಅವಕಾಶಗಳನ್ನು ಹುಡುಕಿಕೊಳ್ಳುವಂತೆ ಅಮೆಜಾನ್‌ ಎಚ್ಚರಿಸಿದೆ ಎಂದು ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ.

(Amazon jobs) After Twitter, one of the social media giants cut down the employees, now the e-commerce giant Amazon is also planning to reduce the number of its employees, reports have been reported in the international media.

Comments are closed.