Meta Digital Safety: ಫೇಸ್‌ಬುಕ್ ಮಾತೃಸಂಸ್ಥೆ ಮೆಟಾದಿಂದ ಮಹಿಳೆ- ಮಕ್ಕಳ ಸುರಕ್ಷತೆಗೆ ಹೊಸ ಯೋಜನೆ ಘೋಷಣೆ

ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ, ತನ್ನ ವೇದಿಕೆಗಳ ಮೇಲೆ ಮಹಿಳೆಯರ ಮತ್ತು ಮಕ್ಕಳ ಆನ್‍ಲೈನ್ ಸುರಕ್ಷತೆಯೆಡೆಗೆ ಗುರಿಯಿರಿಸಲಾದ ಹಲವಾರು ಯೋಜನೆ ಗಳನ್ನು ಇಂದು ಘೋಷಿಸಿತು. ಮೆಟಾ ಘೋಷಿಸಿರುವ ಮಹಿಳೆಯರ ಸುರಕ್ಷತಾ ಕೇಂದ್ರ- ಹಿಂದಿ ಮತ್ತು ಇತರ 11 ಭಾರತೀಯ ಭಾಷೆಗಳಲ್ಲಿ ಪರಿಚಯ ಗೊಂಡಿರುವ ಕೇಂದ್ರವು, ಹೆಚ್ಚಿನ ಭಾರತೀಯ ಮಹಿಳಾ ಬಳಕೆದಾರರು ಆನ್‍ಲೈನ್‍ನಲ್ಲಿ ಸುರಕ್ಷಿತವಾಗಿರುವ ಸಂದರ್ಭದಲ್ಲೇ, ತಮ್ಮ ಸಮೂಹ ಮಾಧ್ಯಮ ಅನುಭವದ ಪ್ರಯೋಜನ ಪಡೆದುಕೊಳ್ಳಲು ಅವರಿಗಾಗಿಯೇ ಇರುವ ಸಾಧನಗಳು ಮತ್ತು ಸಂಪನ್ಮೂಲಗಳ ಮಾಹಿತಿಗೆ ಪ್ರವೇಶಾವಕಾಶ ಒದಗಿಸುತ್ತದೆ.ಮೆಟಾ ( Meta Digital Safety ) ಪರಿಚಯಿಸಿರುವ ಈ ಪ್ರಮುಖ ಯೋಜನೆಯು, ವಿಶೇಷವಾಗಿ ಇಂಗ್ಲಿಷ್ ಮಾತನಾಡದ ಲಕ್ಷಾಂತರ ಮಹಿಳೆಯರು ಆನ್‍ಲೈನ್‍ನಲ್ಲಿಇರುವಾಗ ಮಾಹಿತಿಗೆ ಸುಲಭ ಪ್ರವೇವಕಾಶ ಪಡೆದುಕೊಳ್ಳುವುದಕ್ಕೆ ಯಾವುದೇ ಭಾಷಾ ತಡೆಯಿಲ್ಲದೆ ಮಾಹಿತಿಯನ್ನು ಪಡೆದುಕೊಳ್ಳುವುದನ್ನು ಖಾತರಿಪಡಿಸುತ್ತದೆ.

ಮಹಿಳೆಯರ ಸುರಕ್ಷತಾ ಕೇಂದ್ರವು (Women’s Safety Hub) ಮಹಿಳೆಯರು ವೇದಿಕೆಯನ್ನು ಬಳಸುತ್ತಿರುವಾಗ ಅವರಿಗೆ ಅಗತ್ಯವಾದ ಎಲ್ಲಾ ಸುರಕ್ಷತಾ ಸಂಪನ್ಮೂಲಗಳನ್ನೂ ಒದಗಿಸುತ್ತದೆ. ಇದು ಮಹಿಳೆಯರು, ನಾಯಕರು, ಪತ್ರಿಕೆಯವರು, ಮತ್ತು ಅತ್ಯಾಚಾರದಿಂದ ಉಳಿದುಬಂದವರಿಗಾಗಿ ನಿರ್ದಿಷ್ಟ ಸಂಪನ್ಮೂಲಗಳನ್ನೂ ಒದಗಿಸುತ್ತದೆ. ಹೆಚ್ಚುವರಿಯಾಗಿ ಇದು, ವೀಡಿಯೋ-ಆನ್-ಡಿಮ್ಯಾಂಡ್ ಸುರಕ್ಷತಾ ತರಬೇತಿಗಳನ್ನು ಕೂಡ ಒಳಗೊಂಡಿದ್ದು, ಭೇಟಿ ನೀಡುವವರು, ಬಹು ಭಾಷೆಗಳಲ್ಲಿ ನಡೆಸಿಕೊಡುವ ನೇರ ಸುರಕ್ಷತಾ ತರಬೇತಿಗಳಿಗಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಜಗತ್ತಿನಾದ್ಯಂತದ ಹಲವಾರು ಲಾಭಕ್ಕಾಗಿಯಲ್ಲದ ಭಾಗೀದಾರರೊಡನೆ ಸಮಾಲೋಚಿಸಿ ಅಭಿವೃದ್ಧಿಪಡಿಸಲಾಗಿರುವ ಈ ಸುರಕ್ಷತಾಕೇಂದ್ರವು, ಇಂಗ್ಲಿಷ್‍ ಅಲ್ಲದೆ ಹಿಂದಿ, ಮರಾಠಿ, ಪಂಜಾಬಿ, ಗುಜರಾತಿ, ತಮಿಳು, ಉರ್ದು, ಬಂಗಾಳಿ, ಒರಿಯ, ಅಸ್ಸಾಮಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲೂ ಲಭ್ಯವಿರುತ್ತದೆ.

StopNCII.org – ಸಮ್ಮತಿಯಿಲ್ಲದ ಅನ್ಯೋನ್ಯ ಚಿತ್ರಗಳ ಪ್ರಸರಣವನ್ನು(NCII) ತಡೆಗಟ್ಟಲು ಮೆಟಾ ಘೋಷಿಸಿರುವ ಮತ್ತೊಂದು ಮುಖ್ಯಯೋಜನೆ. ಯುಕೆರಿವೆಂಜ್ ಪೋರ್ನ್ ಹೆಲ್ಪ್‍ಲೈನ್‍ನ ಸಹಭಾಗಿತ್ವದೊಂದಿಗೆ StopNCII.org, ಮೆಟಾದ NCII ಪೈಲಟ್ ಮೇಲೆ ನಿರ್ಮಾಣಗೊಂಡಿರುವ ತುರ್ತುಸ್ಥಿತಿ ಕಾರ್ಯಕ್ರಮವಾಗಿದ್ದು, ಸಂಭಾವ್ಯ ಬಲಿಪಶುಗಳು ತಮ್ಮ ಅನ್ಯೋನ್ಯ ಚಿತ್ರಗಳು ಅದರ ವೇದಿಕೆಗಳಲ್ಲಿ ಸೋರಿಕೆಯಾಗದಂತೆ ಅವುಗಳನ್ನು ಸಕ್ರಿಯವಾಗಿ ಹ್ಯಾಶ್ ಮಾಡಬಹುದು.

ಪಾಯಿಂಟ್ ಆಫ್ ವ್ಯೂದ ಕಾರ್ಯಕಾರೀ ಸಂಪಾದಕಿ ಬಿಶಾಖಾ ದತ್ತಾ ಮತ್ತು ಸೆಂಟರ್ ಫಾರ್ ಸೋಶಿಯಲ್ ರಿಸರ್ಚ್‍ನ ಮೀಡಿಯಾ ಮತ್ತು ಕಮ್ಯುನಿಕೇಶನ್(ಮಾಧ್ಯಮಹಾಗೂ ಸಂವಹನ) ವಿಭಾಗದ ಮುಖ್ಯಸ್ಥೆ ಜ್ಯೋತಿ ವಡೇಹ್ರ–ಮೆಟಾದ ಜಾಗತಿಕ ಮಹಿಳೆಯರ ಸುರಕ್ಷತಾತಜ್ಞ ಸಲಹೆಗಾರರ ಪೈಕಿ ಆಯ್ಕೆಯಾಗಿರುವ ಪ್ರಪ್ರಥಮ ಭಾರತೀಯ ಸದಸ್ಯರುಗಳಾಗಿದ್ದಾರೆ. ಈ ಗುಂಪು, ವಿಶ್ವದ ವಿವಿಧ ಭಾಗಗಳಿಂದ ಬಂದಿರುವ ಇತರ 12 ಲಾಭಕ್ಕಾಗಿಯಲ್ಲದ ಮುಂದಾಳುಗಳು, ಪ್ರತಿಪಾದಕರು ಮತ್ತು ಶೈಕ್ಷಣಿಕ ತಜ್ಞರನ್ನು ಒಳಗೊಂಡಿದ್ದು, ಮೆಟಾದ ಆ್ಯಪ್‍ನಲ್ಲಿ ಮಹಿಳೆಯರಿಗೆ ಇನ್ನಷ್ಟು ಉತ್ತಮ ಬೆಂಬಲ ಒದಗಿಸಲು, ಹೊಸ ನೀತಿಗಳು, ಉತ್ಪನ್ನಗಳು ಹಾಗೂ ಕಾರ್ಯಕ್ರಮಗಳ ಅಭಿವೃದ್ಧಿಯ ಕುರಿತು ಅದರೊಡನೆ ಸಮಾಲೋಚನೆ ನಡೆಸುತ್ತಾರೆ.

ಸತ್ವಕನ್ಸಲ್ಟಿಂಗ್ ಅವರ ‘Connect, Collaborate and Create: Women and Social Media During the Pandemic’ (ಸಂಪರ್ಕಗೊಂಡಿರಿ, ಸಹಯೋಗವೇರ್ಪಡಿಸಿಕೊಳ್ಳಿ ಮತ್ತು ಸೃಷ್ಟಿಸಿ: ಸಾಂಕ್ರಾಮಿಕದ ಸಮಯದಲ್ಲಿ ಮಹಿಳೆಯರು ಹಾಗೂ ಸಮೂಹ ಮಾಧ್ಯಮ)ಎಂಬ ಶೀರ್ಷಿಕೆಯ ಚರ್ಚಾಲೇಖನವನ್ನು ಕೂಡ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಮೆಟಾ ನಿಯೋಜಿಸಿದ ಪ್ರಬಂಧವು ಭಾರತದಲ್ಲಿ ಸಮೂಹ ಮಾಧ್ಯಮ ಬಳಕೆಯಲ್ಲಿರುವ ತೀವ್ರತರವಾದ ಲಿಂಗ ಅಸಮಾನತೆಯ ಸಮಸ್ಯೆಗೆ ಇರುವ ಪರಿಹಾರಗಳ ಮೇಲೆ ಬೆಳಕು ಚೆಲ್ಲುತ್ತದೆ

ಮೆಟಾ ಪ್ಲಾಟ್‍ಫಾರ್ಮ್ಸ್ ಇನ್‍ಕ್.,ನ ಜಾಗತಿಕ ಸುರಕ್ಷತಾ ನೀತಿ ವಿಭಾಗದ ನಿರ್ದೇಶಕಿ ಕರುಣ ನೈನ್,“ಮೆಟಾದಲ್ಲಿ, ಸುರಕ್ಷಿತವಾದ ಆನ್‍ಲೈನ್ ಅನುಭವವನ್ನು ನಿರ್ಮಾಣ ಮಾಡುವುದು ಆದ್ಯತೆಯಾಗಿದ್ದು, ಮಹಿಳೆಯರನ್ನು ಸುರಕ್ಷಿತವಾಗಿಡುವ ನಮ್ಮ ಬದ್ಧತೆ ಹಾಗೂ ಪ್ರಯತ್ನಗಳು ಉದ್ಯಮದಲ್ಲಿ ಮುಂಚೂಣಿಯಲ್ಲಿವೆ. ಆನ್‍ಲೈನ್ ಸುರಕ್ಷಿತತೆಯನ್ನು ನಿರ್ಮಾಣ ಮಾಡಿ ಅದರಲ್ಲಿ ಹೂಡಿಕೆ ಮಾಡುವುದನ್ನು ನಾವು ಮುಂದುವರಿಸಿದರೂ, ಇಂದು ಘೋಷಿಸಿದ ಈ ಯೋಜನೆಗಳು ನಮ್ಮ ಬದ್ಧತೆಯೆಡೆಗೆ ಮತ್ತೊಂದು ಹೆಜ್ಜೆಯಾಗಿದೆ. ಸದಾ ಬೆಳೆಯುತ್ತಿರುವ ಸುರಕ್ಷತಾ ಕ್ರಮಗಳೊಂದಿಗೆ ಮಹಿಳೆಯರು, ಯಾವುದೇ ಸವಾಲುಗಳಿಲ್ಲದೆ ಕಲಿತು, ತೊಡಗಿಕೊಂಡು ಮತ್ತು ಬೆಳೆಯುವುದಕ್ಕೆ ಅನುವು ಮಾಡಿಕೊಡುವ ಸಾಮಾಜಿಕ ಅನುಭವವನ್ನು ಆನಂದಿಸುವುದು ಸಾಧ್ಯವಾಗುತ್ತದೆ.”ಎಂದರು.

ಮೆಟಾದ ಜಾಗತಿಕ ಮಹಿಳೆಯರ ಸುರಕ್ಷತಾತಜ್ಞ ಸಲಹೆಗಾರರಾಗಿ ತಮ್ಮ ನೇಮಕಾತಿಯ ಬಗ್ಗೆ ಮಾತನಾಡುತ್ತಾ, ಸೆಂಟರ್ ಫಾರ್ ಸೋಶಿಯಲ್ ರಿಸರ್ಚ್‍ನ ಮೀಡಿಯಾ ಮತ್ತು ಕಮ್ಯುನಿಕೇಶನ್(ಮಾಧ್ಯಮ ಹಾಗೂ ಸಂವಹನ) ವಿಭಾಗದ ಮುಖ್ಯಸ್ಥೆ ಜ್ಯೋತಿ ವಡೇಹ್ರ,“ಭಾರತವು ಜಾಗತಿಕ ಡಿಜಿಟಲ್ ಬೆಳವಣಿಗೆಯ ಮುಂಚೂಣಿಯಲ್ಲೇ ಇದ್ದು, ಡಿಜಿಟಲ್ ಆಗಿ ಹೆಚ್ಚು ಒಳಗೊಳ್ಳುವ ಮತ್ತು ಸುರಕ್ಷಿತವಾದ ಪರಿಸರವನ್ನು ಮುನ್ನಡೆಸುವಲ್ಲಿ ಮೆಟಾ ಕೇಂದ್ರ ಭಾಗದಲ್ಲಿದೆ. ಭಾರತೀಯ ದೃಷ್ಟಿಯಿಂದ ಮಹಿಳೆಯರ ಸುರಕ್ಷಿತತೆಯ ಸುತ್ತ ಇರುವ ಯೋಜನೆಗಳನ್ನು ಮುನ್ನಡೆಸುವುದಕ್ಕೆ ಅವಕಾಶವನ್ನು ಪಡೆದುಕೊಂಡಿರುವುದು ಹೆಮ್ಮೆಯ ಹಾಗೂ ದೊಡ್ಡ ಜವಾಬ್ದಾರಿಯ ವಿಷಯವಾಗಿದ್ದು, ಮೆಟಾದ ಮಹಿಳಾ ಸುರಕ್ಷತಾ ಸಲಹಾಗಾರರ ಗುಂಪಿನ ಭಾಗವಾಗಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ.”ಎಂದು ಹೇಳಿದರು.

ಇದನ್ನೂ ಓದಿ: Facebook : ಇನ್ಮುಂದೆ ಇರಲ್ಲ ಫೇಸ್‌ಬುಕ್‌ : ಮಹತ್ವದ ನಿರ್ಧಾರ ಪ್ರಕಟಿಸಿದ ಜೂಕರ್‌ಬರ್ಗ್‌

(Meta announced new digital safety initiatives secure women and children in social media)

Comments are closed.