BCCI bans Indian journalist : ವೃದ್ಧಿಮಾನ್​ ಸಾಹಾಗೆ ಬೆದರಿಕೆಯೊಡ್ಡಿದ್ದ ಪತ್ರಕರ್ತನಿಗೆ 2 ವರ್ಷ ನಿಷೇಧ ಶಿಕ್ಷೆ

BCCI bans Indian journalist : ಟೀಂ ಇಂಡಿಯಾದ ವಿಕೆಟ್​ ಕೀಪರ್​ ವೃದ್ಧಿಮಾನ್​ ಸಾಹಾರಿಗೆ ಬೆದರಿಕೆಯೊಡ್ಡಿದ ಆರೋಪ ಎದುರಿಸುತ್ತಿರುವ ಪತ್ರಕರ್ತ ಬೋರಿಯಾ ಮಜುಂದಾರ್​​ಗೆ ಬಿಸಿಸಿಐ ಎರಡು ವರ್ಷಗಳ ನಿಷೇಧವನ್ನು ಹೇರಿದೆ. ಈ ವಿಚಾರವಾಗಿ ವಿಚಾರಣೆ ನಡೆಸಿದ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ ತ್ರಿಸದಸ್ಯ ಪೀಠದಲ್ಲಿದ್ದ ಬಿಸಿಸಿಐ ಉಪಾಧ್ಯಕ್ಷ ರಾಜೀವ್​ ಶುಕ್ಲಾ, ಖಜಾಂಚಿ ಅರುಣ್​ ಸಿಂಗ್​ ಧುಮಾಲ್​ ಹಾಗೂ ಅಪೆಕ್ಸ್​ ಸದಸ್ಯ ಪ್ರಭತೇಜ್​​ ಸಿಂಗ್​ ಭಾಟಿಯಾ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.


ಬೋರಿಯಾ ಮಜುಂದಾರ್​​ರನ್ನು ಸ್ಟೇಡಿಯಂನ ಒಳಗೆ ಬಿಡದಂತೆ ನಾವು ಭಾರತೀಯ ಕ್ರಿಕೆಟ್​ ಮಂಡಳಿಯ ಎಲ್ಲಾ ರಾಜ್ಯ ಘಟಕಗಳಿಗೆ ತಿಳಿಸುತ್ತೇವೆ. ತವರಿನ ಪಂದ್ಯಗಳಿಗೆ ಅವರಿಗೆ ಮಾಧ್ಯಮದ ಮಾನ್ಯತೆ ನೀಡಲಾಗುವುದಿಲ್ಲ. ಅಲ್ಲದೇ ಇವರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ನಾವು ಬಿಸಿಸಿಐಗೆ ಪತ್ರ ಬರೆಯಲಿದ್ದೇವೆ. ಅಲ್ಲದೇ ಈ ಬೋರಿಯಾ ಮಜುಂದಾರ್​ ಟೀಂ ಇಂಡಿಯಾದ ಯಾವುದೇ ಸದಸ್ಯರ ಸಂದರ್ಶನ ಮಾಡುವಂತಿಲ್ಲ ಎಂದು ಬಿಸಿಸಿಐನ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.


ಫೆಬ್ರವರಿಯಲ್ಲಿ ತಿಂಗಳಲ್ಲಿ ಶ್ರೀಲಂಕಾ ವಿರುದ್ಧದ ತವರಿನ ಸರಣಿಯಲ್ಲಿ ಟೀಂ ಇಂಡಿಯಾ ಟೆಸ್ಟ್​ ತಂಡದಿಂದ ಕೈ ಬಿಟ್ಟ ಬಳಿಕ ವೃದ್ಧಿಮಾನ್ ಸಾಹಾ ವಾಟ್ಸಾಪ್​ನಲ್ಲಿ ಪತ್ರಕರ್ತನಿಂದ ಸಂದೇಶವನ್ನು ಸ್ವೀಕರಿಸಿದ್ದರು. ಸಂದರ್ಶನಕ್ಕೆ ಹಾಜರಾಗುವಂತೆ ಪತ್ರಕರ್ತ ವಿನಂತಿಸಿದ್ದರು. ಆದರೆ ಈ ವಾಟ್ಸಾಪ್​ ಮೆಸೇಜ್​​ಗೆ ಸಾಹಾ ಪ್ರತಿಕ್ರಿಯೆ ನೀಡಿರಲಿಲ್ಲ. ಇದರ ಸ್ಕ್ರೀನ್​ ಶಾಟ್​ನ್ನು ಸಾಹಾ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದರು.


ನೀವು ನನಗೆ ಕರೆ ಮಾಡಿಲ್ಲ. ಇನ್ನು ಮುಂದೆ ನಿಮ್ಮ ಸಂದರ್ಶನವನ್ನು ನಾನು ಮಾಡುವುದಿಲ್ಲ. ನಾನು ಅವಮಾನಗಳನ್ನು ಕರುಣೆಯ ದೃಷ್ಟಿಯಿಂದ ನೋಡುವುದಿಲ್ಲ. ಇದನ್ನು ನಾನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ. ನೀವು ಈ ರೀತಿ ಮಾಡಬಾರದಿತ್ತು ಎಂದು ಪತ್ರಕರ್ತ ಸಂದೇಶ ಕಳುಹಿಸಿದ್ದರು. ಈ ಸಂದೇಶದ ಸ್ಕ್ರೀನ್​ ಶಾಟ್​ ಶೇರ್​ ಮಾಡಿದ್ದ ಸಾಹಾ ಭಾರತೀಯ ಕ್ರಿಕೆಟ್​ಗೆ ನಾನು ಎಲ್ಲಾ ರೀತಿಯ ಕೊಡುಗೆಗಳನ್ನು ನೀಡಿದ ಬಳಿಕವೂ ಗೌರವಾನ್ವಿತ ಸ್ಥಾನದಲ್ಲಿರುವ ಪತ್ರಕರ್ತರೊಬ್ಬರು ನನ್ನನ್ನು ಎದುರಿಸುವುದು ಈ ರೀತಿಯಲ್ಲೇ..? ಪತ್ರಿಕೋದ್ಯಮ ಎಲ್ಲಿ ಹೋಗಿದೆ..? ಎಂದು ಬೇಸರ ಹೊರ ಹಾಕಿದ್ದರು.


ಈ ಘಟನೆ ಬಳಿಕ ಬಿಸಿಸಿಐ ವೃದ್ಧಿಮಾನ್​ ಸಾಹಾರನ್ನು ಸಂಪರ್ಕಿಸಿ ಪತ್ರಕರ್ತನ ಹೆಸರನ್ನು ಬಾಯ್ಬಿಡುವಂತೆ ಹೇಳಿತ್ತು. ಸಾಹಾ ಮೊಜುಂದಾರ್​ ಹೆಸರು ಬಾಯ್ಬಿಟ್ಟ ಬಳಿಕ ತ್ರಿ ಸದಸ್ಯ ಪೀಠವನ್ನು ರಚಿಸಿ ಈ ಸಂಬಂಧ ಸೂಕ್ತ ವಿಚಾರಣೆ ಕೈಗೊಂಡ ಬಿಸಿಸಿಐ ಇದೀಗ ಪತ್ರಕರ್ತ ಮೊಜುಂದರ್​ಗೆ 2 ವರ್ಷಗಳ ನಿಷೇಧ ಹೇರಿ ಆದೇಶ ಪ್ರಕಟಿಸಿದೆ.

ಇದನ್ನು ಓದಿ : Asha Bhat : ನಾಯಕಿಯಿಂದ ಗಾಯಕಿ ಪಟ್ಟಕ್ಕೆ: ಇದು ರಾಬರ್ಟ್ ಬೆಡಗಿಯ ಹೊಸ ಕಹಾನಿ

ಇದನ್ನೂ ಓದಿ : Vivek Agnihotri : ದಿ ಕಾಶ್ಮೀರಿ ಫೈಲ್ಸ್ ಬಗ್ಗೆ ಅಪಪ್ರಚಾರ : ವೀಕಿಪಿಡಿಯಾ ವಿರುದ್ಧ ವಿವೇಕ್ ಅಗ್ನಿಹೋತ್ರಿ ಗರಂ

BCCI bans Indian journalist Boria Majumdar for two years over Wriddhiman Saha threat episode

Comments are closed.