Motorola Edge 40 Pro : ಕೇವಲ 23 ನಿಮಿಷಗಳಲ್ಲಿ 100% ಚಾರ್ಜ್‌ ಮಾಡಬಹುದಾದ ಮೊಟೊರೊಲಾ ಎಡ್ಜ್‌ 40 ಪ್ರೋ ಅನಾವರಣ

ವಿಶ್ವದ ಮೊದಲ ಫೋನ್ ತಯಾರಕ ಮೊಟೊರಾಲಾ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಬಹಳ ಸಮಯದಿಂದ ಚರ್ಚಿಸಲಾಗುತ್ತಿದ್ದ ಮೊಟೊರೊಲಾ ಎಡ್ಜ್ 40 ಪ್ರೊ (Motorola Edge 40 Pro) ಸ್ಮಾರ್ಟ್‌ಫೋನ್‌ನ ಕಾಯುವಿಕೆ ಅಂತ್ಯವಾಗಿದೆ. ಆದರೆ ಫೋನ್ ಅನ್ನು ಸದ್ಯ ಯುರೋಪ್‌ನಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಫೋನ್ ಅನ್ನು ಬಿಡುಗಡೆ ಮಾಡುವ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಈ ಫೋನ್‌ನ ಪ್ರಮುಖ ವೈಶಿಷ್ಟ್ಯವೆಂದರೆ 125W ವೇಗದ ಚಾರ್ಜಿಂಗ್. ಇದರಿಂದಾಗಿ ಫೋನ್ ಅನ್ನು ಸುಮಾರು 23 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಮೊಟೊರೊಲಾ ಎಡ್ಜ್ 40 ಪ್ರೊ ಇದು ಹಿಂದೆ ಬಿಡುಗಡೆಯಾದ ಎಡ್ಜ್ 30 ಪ್ರೊನ ನವೀಕರಿಸಿದ ಆವೃತ್ತಿಯಾಗಿದೆ. ಫೋನ್‌ನ ಬೆಲೆ ಮತ್ತು ವೈಶಿಷ್ಟ್ಯಗಳ ವಿವಿರ ಇಲ್ಲಿದೆ ಓದಿ.

ಮೊಟೊರೊಲಾ ಎಡ್ಜ್‌ 40 ಪ್ರೊ ವೈಶಿಷ್ಟ್ಯತೆಗಳು :
ಮೊಟೊರೊಲಾ ಎಡ್ಜ್‌ 40 ಪ್ರೊ ಸ್ಮಾರ್ಟ್‌ಫೋನ್‌ 6.67-ಇಂಚಿನ FHD + AMOLED ಕರ್ವ್ ಡಿಸ್ಪ್ಲೇ ಹೊಂದಿದೆ. ಡಿಸ್ಪ್ಲೇಯು HDR10+ ಅನ್ನು ಬೆಂಬಲಿಸುತ್ತದೆ. 165Hz ರಿಫ್ರೆಶ್ ದರ ಹೊಂದಿದೆ. ಫೋನ್ ಪರದೆಯ ರಕ್ಷಣೆಗಾಗಿ ಬಲಿಷ್ಠ ಗೊರಿಲ್ಲಾ ಗ್ಲಾಸ್ ಅನ್ನು ಸಹ ಹೊಂದಿದೆ. IP68 ರೇಟಿಂಗ್‌ನೊಂದಿಗೆ ಫೋನ್ ನೀರು ಮತ್ತು ಧೂಳು ನಿರೋಧಕವಾಗಿದೆ. ಸ್ಮಾರ್ಟ್‌ಫೋನ್‌ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್‌ 8 ಜೆನ್‌ 2 ಪ್ರೊಸೆಸ್ಸರ್‌ನಿಂದ ಚಲಿಸುತ್ತದೆ ಮತ್ತು ಆಂಡ್ರಾಯ್ಡ್‌ 13 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಇದು OIS ಬೆಂಬಲದೊಂದಿಗೆ 50MP ಮುಖ್ಯ ಲೆನ್ಸ್, 50MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 12MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. ಫೋನ್ ಪ್ರಮುಖ ವೈಶಿಷ್ಟ್ಯವೆಂದರೆ 60MP ಮುಂಭಾಗದ ಕ್ಯಾಮೆರಾ. ಫೋನ್‌ನಲ್ಲಿ 8ಕೆ ವಿಡಿಯೋ ರೆಕಾರ್ಡಿಂಗ್ ಮಾಡಬಹುದು. ಸಂಪರ್ಕಕ್ಕಾಗಿ, ಫೋನ್ ವೈ-ಫೈ, ಜಿಪಿಎಸ್, ಬ್ಲೂಟೂತ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೌಲಭ್ಯವನ್ನು ಹೊಂದಿದೆ. ಇದರ ಬ್ಯಾಟರಿ ಸಾಮರ್ಥ್ಯವು 4,600 mAh ಆಗಿದೆ. ಈ ಫೋನ್‌ 125W ವೇಗದ ಚಾರ್ಜಿಂಗ್‌ ಬೆಂಬಲಿಸುತ್ತದೆ. ಹಾಗಾಗಿ ಇದನ್ನು ಕೇವಲ 23 ನಿಮಿಷಗಳಲ್ಲಿ 100% ಚಾರ್ಜ್‌ ಮಾಡಬಹುದು ಎಂದು ಕಂಪನಿ ಹೇಳಿದೆ.

ಮೊಟೊರೊಲಾ ಎಡ್ಜ್‌ ಪ್ರೊನ ಬೆಲೆ:
ಮೊಟೊರೊಲಾ ಎಡ್ಜ್‌ ಪ್ರೊ ಸ್ಮಾರ್ಟ್‌ಫೋನ್ 12GB + 256GB ಸಿಂಗಲ್ ಸ್ಟೋರೇಜ್‌ನಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ 899 ಯುರೋ. ಅಂದರೆ ಸುಮಾರು 80,550 ರೂ. ಆಗಿದೆ. ಇದರಲ್ಲಿ ನೀಲಿ ಮತ್ತು ಕಪ್ಪು ಬಣ್ಣಗಳು ಲಭ್ಯವಿದೆ.

ಇದನ್ನೂ ಓದಿ : ಬ್ರಿಟಾನಿಯಾ ಇಂಡಸ್ಟ್ರೀಸ್ : ಬಾರೀ ಲಾಭಾಂಶ ಘೋಷಣೆ

ಇದನ್ನೂ ಓದಿ : ಕಿಯಾ ಇಂಡಿಯಾ : ಏಪ್ರಿಲ್ 15 ರಂದು ಭಾರತದಲ್ಲಿ EV6 ಗಾಗಿ ಮರು ಬುಕಿಂಗ್ ಓಪನ್‌ : ಇಲ್ಲಿದೆ ಸಂಪೂರ್ಣ ವಿವರ

(Motorola Edge 40 Pro launched. 64mp front camera, 125W fast charging, and many features.)

Comments are closed.