Motorola Razr 40 Amazon Great Republic Day Sale 2024 : ಮೊಟೋರೊಲಾ ಕಂಪೆನಿ ವಿವಿಧ ಸ್ಮಾರ್ಟ್‌ಪೋನ್‌ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದೆ. ಅದ್ರಲ್ಲೂ Motorola Razr 40 Ultra ಸ್ಮಾರ್ಟ್‌ಫೋನ್‌ಗೆ Amazon ಶೇಕಡಾ 42% ರಷ್ಟು ರಿಯಾಯಿತಿ ಘೋಷಿಸಿದೆ. ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಈ ಸ್ಮಾರ್ಟ್‌ಪೋನ್‌ನನ್ನು ಅರ್ಧದಷ್ಟು ಬೆಲೆಗೆ ಖರೀದಿ ಮಾಡಬಹುದಾಗಿದೆ.

ಫೋಲ್ಡಬಲ್ ಮೊಬೈಲ್ ವಿಭಾಗದಲ್ಲಿ ಕ್ಲಾಸಿಕ್ ಮೊಬೈಲ್ ಎಂದು ಪರಿಗಣಿಸಲಾಗಿರುವ Motorola Razr 40 Ultra ಗ್ರಾಹಕರ ಮನಗೆದ್ದಿದೆ. ಇದೀಗ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತಿದೆ. ಮೊಟೊರೋಲಾ ರಾಝರ್ ಸ್ಮಾರ್ಟ್‌ಪೋನ್ ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಉತ್ತಮ ಸಮಯ.

Motorola Razr 40 Ultra ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ 1,19,999 ರೂ.ಗೆ ನಿಗದಿ ಪಡಿಸಲಾಗಿದೆ. ಆದರೆ ಶೇ.42ರಷ್ಟು ರಿಯಾಯಿತಿ ಲಭ್ಯವಿದ್ದು, ಇದೀಗ ಕೇವಲ 69,999 ರೂ.ಗೆ Motorola Razr 40 Ultra ಮಾರಾಟವಾಗುತ್ತಿದೆ. ಕೇವಲ ಅಮೇಜಾನ್ ಆಫರ್ ಮಾತ್ರವಲ್ಲದೇ ವಿವಿಧ ಬ್ಯಾಂಕುಗಳು ಕೂಡ ಹೆಚ್ಚುವರಿ ಕೊಡುಗೆಗಳನ್ನು ಘೋಷಣೆ ಮಾಡಿವೆ. ಇದರಿಂದಾಗಿ ಇನ್ನೂ ಕಡಿಮೆ ಬೆಲೆಗೆ ಸ್ಮಾರ್ಟ್‌ಪೋನ್ ಖರೀದಿ ಮಾಡಬಹುದಾಗಿದೆ.
ಮೊಟೊರೊಲಾ Razr 40 Ultra ಸ್ಮಾರ್ಟ್‌ಫೋನ್ 6.9 ಇಂಚಿನ ಪೂರ್ಣ HD ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 1080 x 2640 ಪಿಕ್ಸೆಲ್ ಗಳ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಡಿಸ್ಪ್ಲೇ ಈಗ 85.1% ರ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಅಲ್ಲದೆ ಡಿಸ್ಪ್ಲೇ 413 ಪಿಪಿಐ ಸಾಂದ್ರತೆಯನ್ನು ಹೊಂದಿದ್ದು 1100 ನಿಟ್‌ಗಳ ಗರಿಷ್ಟ ಬ್ರೈಟ್‌ನೆಸ್ ಮಟ್ಟವನ್ನು ಹೊಂದಿದೆ. ಇದು ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಸಹ ಹೊಂದಿದೆ.
ಮೊಟೊರೊಲಾ Razr 40 Ultra ಸ್ಮಾರ್ಟ್‌ಫೋನ್ Qualcomm Snapdragon 8+ Gen 1 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು ಆಂಡ್ರಾಯ್ಡ್ 13 ಆಧಾರಿತ MyUX ಅನ್ನು ರನ್ ಮಾಡುತ್ತದೆ. ಇದು 8GB RAM ಮತ್ತು 256GB ಆಂತರಿಕ ಸಂಗ್ರಹಣೆಯ ಆಯ್ಕೆಯನ್ನು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಮೆಮೊರಿ ಕಾರ್ಡ್ ಬೆಂಬಲವನ್ನು ಒದಗಿಸಲಾಗಿಲ್ಲ.

ಮೊಟೊರೊಲಾ ರೇಜರ್ 40 ಅಲ್ಟ್ರಾ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಪಡೆದುಕೊಂಡಿದೆ. ಇದು OIS ನೊಂದಿಗೆ 12-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 13-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸಂವೇದಕವನ್ನು ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.
ಮೊಟೊರೊಲಾ Razr 40 Ultra ಸ್ಮಾರ್ಟ್‌ಫೋನ್ 3,800mAh ಬ್ಯಾಟರಿಯಿಂದ ಚಾಲಿತವಾಗಿದೆ. ಇದು 30W ವೈರ್ಡ್ ಮತ್ತು 5W ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಇತರ ಸಂಪರ್ಕ ಆಯ್ಕೆಗಳಲ್ಲಿ ವೈ-ಫೈ 6, ಬ್ಲೂಟೂತ್ ಆವೃತ್ತಿ 5.3, ಎನ್‌ಎಫ್‌ಸಿ ಡೇಟಾ ವರ್ಗಾವಣೆಗಾಗಿ ಟೈಪ್-ಸಿ ಯುಎಸ್‌ಬಿ 2.0 ಪೋರ್ಟ್ ಸೇರಿವೆ. ಇದನ್ನು ವಿವಾ ಮೆಜೆಂಟಾ ಬಣ್ಣ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ.
Motorola Razr 40 Amazon Great Republic Day Sale 2024 Big offer