ನೋಕಿಯಾ G11 ಪ್ಲಸ್ ಸ್ಮಾರ್ಟ್‌ಫೋನ್ (Nokia G11 Plus) ಅನ್ನು ಭಾರತ(India) ದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಕಂಪನಿಯ G ಸರಣಿಯ (G Series) ಲೇಟೆಸ್ಟ್ ಸ್ಮಾರ್ಟ್‌ಫೋನ್ (Smartphone) ಆಗಿದೆ. ಕಂಪನಿಯು ಭಾರತಕ್ಕಿಂತ ಮೊದಲು ಈ ಫೋನ್ ಅನ್ನು ಇದೇ ಜೂನ್ ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಸ್ಮಾರ್ಟ್‌ಫೋನ್ 90 Hz ಡಿಸ್ಪ್ಲೇ, Unisoc T606 ಪ್ರೊಸೆಸ್ಸರ್, 4GB RAM ಮತ್ತು 64GB ಸ್ಟೋರೇಜ್ ಹೊಂದಿದೆ. ಇದರ ಜೊತೆಗೆ 50MP ಕ್ಯಾಮೆರಾ ಇದರ ವಿಶೇಷತೆಯಾಗಿದೆ.
ಬೆಲೆ ಮತ್ತು ಲಭ್ಯತೆ :
4GB RAM ಮತ್ತು 64GB ಸ್ಟೋರೇಜ್ ಸ್ಪೇಸ್ ಹೊಂದಿರುವ ನೋಕಿಯಾ G11 ಪ್ಲಸ್ ಒಂದೇ ಸ್ಟೋರೇಜ್ ಕಾನ್ಫಿಗರೇಶನ್ ಹೊಂದಿದೆ. ಚಾರ್ಕೋಲ್ ಗ್ರೇ ಮತ್ತು ಲೇಕ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನ್‌ನ ಬೆಲೆಯು 12,499 ರೂಪಾಯಿಗಳಾಗಿದ್ದು ಇದನ್ನು ಅಧಿಕೃತ ನೋಕಿಯಾದ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಸಬಹುದಾಗಿದೆ.
ಇದನ್ನೂ ಓದಿ : Jio and Airtel 5G Network : ನಿಮ್ಮ ಸ್ಮಾರ್ಟ್‌ಫೋನ್ 5G ಸಪೋರ್ಟ್ ಮಾಡ್ತಾ ಇದೆಯಾ ಅಥವಾ ಇಲ್ಲವಾ; ಹೀಗೆ ಚೆಕ್ ಮಾಡಿ…
ವೈಶಿಷ್ಟ್ಯತೆಗಳು :
ನೋಕಿಯಾ G11ಪ್ಲಸ್ ಸ್ಮಾರ್ಟ್‌ಫೋನ್ 6.5 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿರುವ ಈ ಫೋನ್‌ನ ರಿಫ್ರೆಶ್ ದರವು 90 Hzಆಗಿದೆ. ಇದು ಆಕ್ಟ್–ಕೋರ್ Unisoc T606 ಪ್ರೊಸೆಸ್ಸರ್‌ನಿಂದ ಚಾಲಿತವಾಗುತ್ತದೆ. ಇನ್ನು ಸ್ಟೋರಿಜಿನ ವಿಷಯದಲ್ಲಿ ಈ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಸ್ಟೋರೇಜ್ ಪಡೆದುಕೊಂಡಿದೆ. ಸ್ಟೋರೇಜ್ ಕ್ಷಮತೆಯನ್ನು ಮೈಕ್ರೋ ಎಸ್‌ಡಿ ಕಾರ್ಡ್ ಉಪಯೋಗಿಸಿ 512 GB ವರೆಗೆ ವಿಸ್ತರಿಸಬಹುದಾಗಿದೆ.
ಇನ್ನು ಫೋಟೋಗ್ರಾಫಿಯ ಸಲುವಾಗಿ ಈ ಸ್ಮಾರ್ಟ್‌ಫೋನ್, ಹಿಂಬದಿಯಲ್ಲಿ ಎರಡು ಕ್ಯಾಮೆರಾ ಸೆಟ್‌ಅಪ್‌ಗಳನ್ನು ಹೊಂದಿದೆ. ಪ್ರಾಥಮಿಕ ಕ್ಯಾಮೆರಾವು 50 MP ಗಳಾಗಿದ್ದರೆ, ಎರಡನೇ ಕ್ಯಾಮೆರಾವು 2MP ಸಾಮರ್ಥ್ಯ ಹೊಂದಿದೆ. ಸೆಲ್ಫಿ ಮತ್ತು ವಿಡಿಯೊಗಾಗಿ ಮುಂಬದಲಿಯಲ್ಲಿ 8 MP ಕ್ಯಾಮೆರಾ ವನ್ನು ಅಳವಡಿಸಲಾಗಿದೆ.
ಫೋನ್‌ನ ಬ್ಯಾಟರಿಯ ವಿಷಯದಲ್ಲಿ, ಇದನ್ನೂ ಒಮ್ಮೆ ಚಾರ್ಜ್ ಮಾಡಿದರೆ 3 ದಿನಗಳವರೆಗೆ ಉಪಯೋಗಿಸಬಹುದಾಗಿದೆ. 10W ಫಾಸ್ಟ್ ಚಾರ್ಜಿಂಗ್ ಅನ್ನು ಈ ಸ್ಮಾರ್ಟ್‌ಫೋನ್ ಬೆಂಬಲಿಸುತ್ತದೆ. ಉಳಿದಂತೆ ಇದು 4 ಜಿ , Wi-Fi, ಬ್ಲೂಟೂತ್, ಜಿಪಿಎಸ್, ಯುಎಸ್‌ಬಿ ಟೈಪ್ Cಪೋರ್ಟ್ ಮತ್ತು 3.5mm ಹೆಡ್‌ಫೋನ್ ಜಾಕ್ ಹೊಂದಿದೆ. ಈ ಸ್ಮಾರ್ಟ್‌ಫೋನ್ 192 ಗ್ರಾಂ ತೂಕ ಹೊಂದಿದ್ದು, IP52 ರೇಟಿಂಗ್‌ನ ಜೊತೆಗೆ ವಾಟರ್ ರಸಿಸ್ಟೆನ್ಸ್ ವಿಶೇಷತೆಯನ್ನು ಹೊಂದಿದೆ.
ಇದನ್ನೂ ಓದಿ : BARC Recruitment 2022 : ಬಾಬಾ ಅಟೋಮಿಕ್ ರೆಸರ್ಚ್‌ನಲ್ಲಿ ವಾಕ್–ಇನ್ ಇಂಟರ್ವ್ಯೂ : ಟೆಕ್ನಿಷಿಯನ್ ಮತ್ತು ವೈದ್ಯರಿಗೆ ಸುವರ್ಣಾವಕಾಶ
Nokia G11 Plus launched in India. 50 MP camera, HD display, and many more specifications