Nokia C12 : ಲೋ ಬಜೆಟ್‌ ಫೋನ್‌ ಲಾಂಚ್‌ ಮಾಡಿದ ನೋಕಿಯಾ; ಬೆಲೆ ಎಷ್ಟು ಗೊತ್ತಾ…

ಕಡಿಮೆ ಬಜೆಟ್‌ನಲ್ಲಿ ಫೋನ್‌ ಖರೀದಿಸಬೇಕೆಂದಿದ್ದರೆ, ನೋಕಿಯಾ ಅದಕ್ಕೆ ಈಗ ಅವಕಾಶ ಒದಗಿಸುತ್ತಿದೆ. ನೋಕಿಯಾ ಅಗ್ಗದ ಆಂಡ್ರಾಯ್ಡ್‌ ಫೋನ್‌ ನೋಕಿಯಾ C12 (Nokia C12) ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೇ ಮಾರ್ಚ್‌ 17ರಿಂದ ಮೊಬೈಲ್ ಫೋನ್‌ಗಳ ಮಾರಾಟ ಪ್ರಾರಂಭವಾಗಲಿದೆ. ಅದನ್ನು ಅಮೆಜಾನ್‌ ಮೂಲಕ ಖರೀದಿಸಬಹುದಾಗಿದೆ. ಅದನ್ನು ಡಾರ್ಕ್ ಸಿಯಾನ್, ಚಾರ್ಕೋಲ್ ಮತ್ತು ಲೈಟ್ ಮಿಂಟ್‌ ಎಂಬ ಮೂರು ಬಣ್ಣಗಳಲ್ಲಿ ಖರೀದಿಸಬಹುದಾಗಿದೆ. ಈ ಫೋನ್‌ನ ವೈಶಿಷ್ಟ್ಯ, ಬೆಲೆಗಳ ಬಗ್ಗೆ ಇಲ್ಲಿದೆ ಓದಿ.

ಬೆಲೆ ಮತ್ತು ಲಭ್ಯತೆ :
ನೋಕಿಯಾ C12 ಸ್ಮಾರ್ಟ್‌ಫೋನ್‌ ಅನ್ನು 5,999 ರೂ.ಗಳಲ್ಲಿ ಖರೀದಿಸಬಹುದಾಗಿದೆ. ಮಾರ್ಚ್‌ 17ರಿಂದ ಅಮೆಜಾನ್‌ನಲ್ಲಿ ಮಾರಾಟ ಪ್ರಾರಂಭವಾಗಲಿದೆ.

ವೈಶಿಷ್ಟ್ಯಗಳು :
ನೋಕಿಯಾ C12 ಸ್ಮಾರ್ಟ್‌ಫೋನ್‌ 6.3-ಇಂಚಿನ HD ಪ್ಲಸ್ ಡಿಸ್ಪ್ಲೇ ಹೊಂದಿದೆ. ಅದು 60hz ನ ರಿಫ್ರೆಶ್ ದರವನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ಫೋನ್‌ ಆಕ್ಟಾಕೋರ್‌ Unisoc 9863A1 ಪ್ರೊಸೆಸರ್ ನಿಂದ ವೇಗ ಪಡೆದುಕೊಳ್ಳಲಿದೆ. ಇದು ಆಂಡ್ರಾಯ್ಡ್‌ ಗೋ ಎಡಿಷನ್‌ನಲ್ಲಿ ಕಾರ್ಯ ನಿರ್ವಹಿಸಿಲಿದೆ. ಈ ಫೋನ್‌ 2GB RAM ಮತ್ತು 64GB ಆಂತರಿಕ ಸಂಗ್ರಹಣೆ ಬೆಂಬಲಿಸಲಿದೆ. ಈ ಫೋನ್‌ನ RAM ನ ಸಾಮರ್ಥ್ಯವನ್ನು 4ಜಿಬಿಯ ವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ. ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಸೆಲ್ಫಿಗಳಿಗಾಗಿ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದ ಕ್ಯಾಮರಾ ಭಾವಚಿತ್ರ ಮತ್ತು ರಾತ್ರಿ ಮೋಡ್ ಅನ್ನು ಬೆಂಬಲಿಸುತ್ತದೆ.

ನೋಕಿಯಾ C12ಸ್ಮಾರ್ಟ್‌ಫೋನ್‌ 3000 mAh ಬ್ಯಾಟರಿಯೊಂದಿಗೆ ಬರುತ್ತದೆ, ಇದು 5W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಫೋನ್ ಒಂದೇ ಚಾರ್ಜ್‌ನಲ್ಲಿ ಇಡೀ ದಿನ ಬಾಳಿಕೆ ಬರಬಹುದು ಎಂದು ಕಂಪನಿ ಹೇಳಿಕೊಂಡಿದೆ. ಈ ಫೋನ್ ಧೂಳು ಮತ್ತು ನೀರಿನಿಂದ ಹಾಳಾಗುವುದಿಲ್ಲ ಏಕೆಂದರೆ ಇದು ip52 ರೇಟಿಂಗ್ ಅನ್ನು ಸಹ ಪಡೆದುಕೊಂಡಿದೆ. ಒಟ್ಟಾರೆಯಾಗಿ, ಬಜೆಟ್ ವಿಭಾಗವನ್ನು ಗುರಿಯಾಗಿಟ್ಟುಕೊಂಡು, ನೋಕಿಯಾ C12 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ : Samsung Galaxy SmartTag : ಶೀಘ್ರದಲ್ಲೇ ನೆಕ್ಸ್ಟ್‌ ಜನರೇಷನ್‌ ಸ್ಮಾರ್ಟ್‌ಟ್ಯಾಗ್‌ ಬಿಡುಗಡೆ ಮಾಡಲಿರುವ ಸ್ಯಾಮ್‌ಸಂಗ್

ಇದನ್ನೂ ಓದಿ : Moto G73 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಅನಾವರಣ; 1TB ವರೆಗೆ ಸ್ಟೊರೇಜ್‌ ವಿಸ್ತರಣೆ

(Nokia launched its budget-friendly C12 smartphone in India)

Comments are closed.