Zomato : ನೀವು ನಿಜವಾದ ಆಹಾರ ಪ್ರಿಯರೇ ಆಗಿದ್ದರೆ ಆಯಾ ರಾಜ್ಯಗಳ ವಿಶೇಷ ತಿನಿಸುಗಳನ್ನು ಅದೇ ಪ್ರದೇಶಕ್ಕೆ ತೆರಳಿ ತಿನ್ನುವುದರ ಮಜಾ ಏನು ಎಂಬುದು ತಿಳಿದಿರುತ್ತೆ. ಉದಾಹರಣೆಗೆ ಕರಾವಳಿಯ ಮೀನು ಫ್ರೈ, ಮೈಸೂರಿನ ಮೈಸೂರು ಪಾಕ್, ಹೈದರಾಬಾದ್ನ ಬಿರಿಯಾನಿ ಹೀಗೆ ಒಂದೊಂದು ಸ್ಥಳದ ತಿನಿಸುಗಳು ನಿಮಗೆ ಬೇರೆ ಪ್ರದೇಶಗಳಲ್ಲಿ ತಿಂದರೆ ಅಷ್ಟು ಮಜಾ ಕೊಡೋಕೆ ಸಾಧ್ಯವೇ ಇಲ್ಲ. ಆದರೆ ಆನ್ಲೈನ್ ಫುಡ್ ಡೆಲಿವರಿ ಕಂಪನಿಯಾದ ಜೊಮ್ಯಾಟೋ ಈ ಸಮಸ್ಯೆಗೆ ಪರಿಹಾರವೊಂದನ್ನು ಕಂಡು ಹಿಡಿದಿದೆ.
ಜೊಮ್ಯಾಟೋ ಕಂಪನಿಯು ದೇಶದ ವಿವಿಧ ಭಾಗಗಳಿಗೆ ಆಹಾರವನ್ನು ತಲುಪಿಸುವ ಪ್ರಾಯೋಗಿಕ ಯೋಜನೆಯನ್ನು ಆರಂಭಿಸಿದೆ. ಈ ಬಗ್ಗೆ ಜೊಮ್ಯಾಟೋ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯಲ್ ಅಧಿಕೃತ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ನೀಡಿರುವ ದೀಪಿಂದರ್ ಗೋಯಲ್ ಭಾರತದ ಯಾವುದೇ ಮೂಲೆಯ ಆಹಾರವನ್ನು ಆರ್ಡರ್ ಮಾಡಲು ಗ್ರಾಹಕರಿಗೆ ಜೊಮ್ಯಾಟೋ ಅವಕಾಶ ಮಾಡಿಕೊಡುತ್ತಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.
ಐತಿಹಾಸಿಕ ತಿನಿಸುಗಳಾದ ಕೋಲ್ಕತ್ತಾದ ರಸಗುಲ್ಲಾ, ಹೈದರಾಬಾದ್ ಬಿರಿಯಾನಿ, ಬೆಂಗಳೂರಿನಿಂದ ಮೈಸೂರು ಪಾಕ್, ಲಖನೌ ಕಬಾಬ್, ಹಳೆ ದೆಹಲಿ ಭಾಗದಿಂದ ಬಟರ್ ಚಿಕನ್ ಅಥವಾ ಜೈಪುರದಿಂದ ಈರುಳ್ಳಿ ಕಚೋರಿಗಳನ್ನು ನೀವು ಆರ್ಡರ್ ಮಾಡಿದರೆ ಮಾರನೇ ದಿನವೇ ಈ ಆಹಾರವನ್ನು ನಿಮಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ದೀಪಿಂದರ್ ಗೋಯಲ್ ಹೇಳಿದ್ದಾರೆ.
ಜೊಮ್ಯಾಟೋದ ರೆಸ್ಟಾರೆಂಟ್ ಪಾಲುದಾರರು ಹಾಗೂ ವಿತರಣಾ ಪಾಲುದಾರರ ನೆಟ್ವರ್ಕ್ನನ್ನು ಬಳಕೆ ಮಾಡಿಕೊಂಡು ಗ್ರಾಹಕರ ತಮ್ಮಿಷ್ಟದ ತಿನಿಸುಗಳನ್ನು ನಿರ್ದಿಷ್ಟ ಸ್ಥಳದಿಂದಲೇ ಆರ್ಡರ್ ಮಾಡಿ ತಿನ್ನು ಅವಕಾಶವನ್ನು ಕಲ್ಪಿಸುತ್ತಿದ್ದೇವೆ ಎಂದು ದೀಪಿದಂರ್ ಗೋಯಲ್ ಬರೆದುಕೊಂಡಿದ್ದಾರೆ.
ಇದನ್ನು ಓದಿ : permission to place Ganesha idol :ಗಣೇಶ ವಿಗ್ರಹ ಇರಿಸಲು ಅನುಮತಿ ಕೇಳಲು ಇದೇನು ಪಾಕಿಸ್ತಾನವಾ : ಯತ್ನಾಳ್ ಕಿಡಿ
ಇದನ್ನೂ ಓದಿ :
Now You Can Order Mysore Pak From Bengaluru, Kebabs From Lucknow On Zomato. Here’s How