permission to place Ganesha idol :ಗಣೇಶ ವಿಗ್ರಹ ಇರಿಸಲು ಅನುಮತಿ ಕೇಳಲು ಇದೇನು ಪಾಕಿಸ್ತಾನವಾ : ಯತ್ನಾಳ್​​ ಕಿಡಿ

ಬೆಳಗಾವಿ : permission to place Ganesha idol :ಸಾರ್ವಜನಿಕ ಗಣೇಶ ವಿಗ್ರಹ ಪ್ರತಿಷ್ಟಾಪನೆಗೆ ಸ್ಥಳೀಯಾಡಳಿತದ ಅನುಮತಿ ಪಡೆಯಬೇಕು ಎಂದು ಸರ್ಕಾರ ತಿಳಿಸಿದೆ. ಇದರ ಜೊತೆ ಡಿ.ಜೆ ಬಳಕೆಗೆ ನಿರ್ಬಂಧ ವಿಧಿಸಿ ಆದೇಶಿಸಲಾಗಿದೆ.‌ ಆದ್ರೆ ಸರ್ಕಾರದ ಈ ನಿರ್ಧಾರಕ್ಕೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಮಾತನಾಡಿರುವ ಯತ್ನಾಳ್ ಹಿಂದೂಸ್ಥಾನದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಪರ್ಮಿಷನ್ ತೆಗೆದುಕೊಳ್ಳಬೇಕಾ…? ಇದು ಹಿಂದುಸ್ತಾನ ದೇಶ ಪಾಕಿಸ್ತಾನ ಅಲ್ಲವೆಂದು ಗುಡುಗಿದ್ದಾರೆ‌.

ಗಣಪತಿ ಉತ್ಸವದಲ್ಲಿ ಡಿಜೆ ಬಳಕೆ ಮಾಡುತ್ತೇವೆ. ನೀವು ಏನು ಮಾಡುತ್ತೀರಿ ಮಾಡಿ ಎಂದು ಇದೇ ಸಂದರ್ಭ ಸರ್ಕಾರಕ್ಕೆ ಯತ್ನಾಳ್ ಸವಾಲನ್ನು ಹಾಕಿದ್ದಾರೆ. ಮೊದಲು ಅಜಾನ್ ಕೂಗುವ ಸ್ಪೀಕರ್ ಬಂದ್ ಮಾಡಿ ಎಂದು ಹೇಳಿರುವ ಯತ್ನಾಳ್ ಆ ಬಳಿಕ ನಾವು ಡಿಜೆ ಬಳಕೆ ಬಂದ್ ಮಾಡುತ್ತೇವೆ ಎಂದು ಹೇಳಿ ಪರೋಕ್ಷವಾಗಿ ಮಸೀದಿ ಮೇಲಿನ ಮೈಕಗಳ ವಿರುದ್ಧ ಯತ್ನಾಳ್ ಗುಡುಗಿದ್ದಾರೆ. ಈ ದೇಶದಲ್ಲಿ ಮಾತನಾಡಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಡಿಜೆ ಬಳಕೆ, ಗಣಪತಿ ಉತ್ಸವಕ್ಕೆ ಗೃಹ ಮಂತ್ರಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದೆ‌ ಎಂದು ಇದೇ ಸಂದರ್ಭ ಹೇಳಿದರು.

ಇನ್ನು ಚುನಾವಣಾ ಟಿಕೇಟ್ ಬಗ್ಗೆಯೂ ಮಾತನಾಡಿರುವ ಯತ್ನಾಳ್ ಬಿಜೆಪಿ ಪಕ್ಷದಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನೀಡಬೇಕು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ ಎಂದರು. ಕರ್ನಾಟಕದಲ್ಲಿ ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕುವಂತೆ ಪತ್ರ ಬರೆಯಲಾಗಿದೆ ಎಂದು ಹೇಳಿದರು. ವಿಜಯಪುರದಲ್ಲಿ ಎರಡು ಫ್ಯಾಮಿಲಿಗಳಿವೆ. ಆಯಾ ಕ್ಷೇತ್ರಗಳಲ್ಲಿ ಜಾಕೆಟ್ ಹಾಕಿಕೊಂಡು ನಿಲ್ಲುತ್ತಾರೆ ಎಂದು ಪರೋಕ್ಷವಾಗಿ ನಿರಾಣಿ ಸಹೋದರ ವಿರುದ್ಧ ಯತ್ನಾಳ್ ಕುಟುಂಬ ರಾಜಕಾರಣದ ಆರೋಪ ವ್ಯಕ್ತಪಡಿಸಿದರು.

ಪ್ರತಿ ಬಾರಿಯೂ ಒಂದಿಲ್ಲೊಂದು ವಿಚಾರದ ಕುರಿತು ಶಾಸಕ ಯತ್ನಾಳ್ ಬಹಿರಂಗ ಹೇಳಿಕೆಗಳನ್ನು‌ ನೀಡಿ ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಬಿ.ಜೆ.ಪಿ‌ ನಾಯಕರು ಹೈಕಮಾಂಡ್ ಗೆ ದೂರು‌ ನೀಡಿರುವ ಪ್ರಸಂಗವೂ ನಡೆದಿದೆ. ಆದ್ರೆ ಇಷ್ಟಾದರೂ ಸಹ ಶಾಸಕ‌ ಬಸನಗೌಡ ಯತ್ನಾಳ್ ತಮಗೆ ಸರಿ‌ ಅನಿಸದ ಸರ್ಕಾರದ ನಿರ್ಧಾರಗಳನ್ನು ವಿರೋಧ ಮಾಡಿಕೊಂಡೆ ಬಂದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಯತ್ನಾಳ್ ವಿಚಾರದಲ್ಲಿ ಬಿ.ಜೆ.ಪಿ‌ ಹೈಕಮಾಂಡ್ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.

ಇದನ್ನು ಓದಿ : Laxman Savadi car accident: ಮಾಜಿ‌ ಡಿ.ಸಿ.ಎಂ ಲಕ್ಷ್ಮಣ ಸವದಿ‌ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ಸವದಿ

ಇದನ್ನೂ ಓದಿ : Pramod Muthalik​​ :ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ತಡೆಯೊಡ್ಡಿದ್ದರೆ ಗಣೇಶನ ಶಾಪ ತಟ್ಟುತ್ತೆ : ಪ್ರಮೋದ್​ ಮುತಾಲಿಕ್​​

Is this Pakistan asking for permission to place Ganesha idol: Yatnal question

Comments are closed.