Kichcha Sudeeps Special Postal Envelope :ಕಿಚ್ಚ ಸುದೀಪ್ ಹೆಸರಿನಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಹೊರತರುತ್ತಿದೆ ಭಾರತೀಯ ಅಂಚೆ ಇಲಾಖೆ

Kichcha Sudeeps Special Postal Envelope : ನಟ ಕಿಚ್ಚ ಸುದೀಪ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇತ್ತೀಚೆಗಷ್ಟೇ ಪಂಚ ಭಾಷೆಗಳಲ್ಲಿ ರಿಲೀಸ್ ಆದ ವಿಕ್ರಾಂತ್ ರೋಣ ಸಿನಿಮಾದ ಮೂಲಕ ಸುದೀಪ್ ಇನ್ನಷ್ಟು ಪಾಪ್ಯುಲರ್ ಆಗಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲದೆ ಸಾಮಾಜಿಕವಾಗಿಯೂ ತಮ್ಮನ್ನು ತಾವೂ ತೊಡಗಿಸಿಕೊಂಡು ಕಿಚ್ಚ ಸುದೀಪ್ ಜನರಿಗೆ ಹತ್ತಿರವಾಗಿದ್ದಾರೆ. ಇದೀಗ ಸುದೀಪ್ ಅವರ ಈ ಎಲ್ಲಾ ಕೆಲಸ ಸಾಧನೆಗಳನ್ನು ಗಮನಿಸಿರುವ ಭಾರತೀಯ ಅಂಚೆ ಇಲಾಖೆ ವಿಶೇಷ ಅಂಚೆ ಲಕೋಟೆಯೊಂದನ್ನು ಹೊರ ತರುತ್ತಿದೆ.

ಭಾರತೀಯ ಅಂಚೆ ಇಲಾಖೆ ಈ ರೀತಿಯ ವಿಶೇಷ ಅಂಚೆ ಲಕೋಟೆಯನ್ನು ದೇಶದ ಮಹತ್ತರ ಘಟನೆಗಳನ್ನು, ಪ್ರಶಸ್ತಿಗಳನ್ನು ಅಥವಾ ವ್ಯಕ್ತಿಗಳ‌ ಸಾಧನೆಗಳನ್ನು ನೂರಾರು ವರುಷ ದಾಖಲೆಯಾಗಿ ಉಳಿಸಿಕೊಳ್ಳಬೇಕೆಂಬ ಕಾರಣಕ್ಕೆ ಬಿಡುಗಡೆಗೊಳಿಸುತ್ತದೆ. ಅದರಂತೆ ಇದೀಗ ಕಿಚ್ಚ ಸುದೀಪ್ ಅವರ ಸಾಧನೆಯನ್ನು ನೂರಾರು ವರ್ಷ ಉಳಿಸಬೇಕೆಂಬ ಕಾರಣಕ್ಕೆ ಈ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸುತ್ತಿದೆ.

ಬೇರೆ ಬೇರೆ ಭಾಷೆಗಳಲ್ಲಿ ನಟಿಸಿರುವ ಕಿಚ್ಚ ಸುದೀಪ್ ತಮ್ಮ ನಟನೆಯ ಮೂಲಕವೇ ತಮ್ಮದೇ ಆದ ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿದ್ದಾರೆ. ಚಿತ್ರರಂಗದಲ್ಲಿ 25 ವರ್ಷವನ್ನು ಪೂರೈಸಿರುವ ಸುದೀಪ್ ಕನ್ನಡದ ಬಿಗ್ ಬಾಸ್ ನ ಎಂಟು ಸೀಸನ್ ಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿರುವ ಹೆಗ್ಗಳಿಕೆಯು ಇವರಿಗಿದೆ. ಹೀಗಾಗಿ ಸುದೀಪ್ ಅವರ ಸಾಧನೆಯನ್ನು ಭಾರತೀಯ ಅಂಚೆ ಇಲಾಖೆ ದಾಖಲೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಇಂದು ಅಂಚೆ ಇಲಾಖೆಯ ಅಧೀಕ್ಷಕರಾದ ಮಾದೇಶ್ ಕಿಚ್ಚ ಸುದೀಪ್ ಅವರ ಮನೆಗೆ ಆಗಮಿಸಿದರು. ಸುದೀಪ್ ಅವರಿಂದ ಈ ಬಗ್ಗೆ ಎನ್.ಒ.ಸಿ ಯನ್ನು ಪಡೆದರು. ಇದರ ಜೊತೆ ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು.

ಅಂಚೆ ಇಲಾಖೆ ಕಿಚ್ಚ ಸುದೀಪ್ ಅವರ ಹೆಸರಿನಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸುತ್ತೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಸುದೀಪ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಇದರ ಜೊತೆಗೆ ಕಿಚ್ಚ ಸುದೀಪ್ ಅವರ ಸಾಧನೆಗಳನ್ನು ಗುರುತಿಸಿರುವ ಭಾರತೀಯ ಅಂಚೆ ಇಲಾಖೆಯನ್ನು ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶ್ಲಾಘಿಸುತ್ತಿದ್ದಾರೆ. ಈ ವಿಶೇಷ ಅಂಚೆ ಲಕೋಟೆಯ ಬಿಡುಗಡೆ ಸಮಾರಂಭ ಶೀಘ್ರದಲ್ಲಿಯೇ ನೆರವೇರಲಿದ್ದು ಅಭಿಮಾನಿಗಳು ಕಾತುರರಾಗಿದ್ದಾರೆ.

ಇದನ್ನು ಓದಿ : permission to place Ganesha idol :ಗಣೇಶ ವಿಗ್ರಹ ಇರಿಸಲು ಅನುಮತಿ ಕೇಳಲು ಇದೇನು ಪಾಕಿಸ್ತಾನವಾ : ಯತ್ನಾಳ್​​ ಕಿಡಿ

ಇದನ್ನೂ ಓದಿ : Zomato : ಹೈದರಾಬಾದ್​ನಿಂದ ಬಿರಿಯಾನಿ, ಮೈಸೂರಿನಿಂದ ಮೈಸೂರುಪಾಕ್​ ತಿನ್ನಬೇಕೆಂದು ಆಸೆಯಾಗ್ತಿದ್ಯಾ :ಜೊಮ್ಯಾಟೋದಲ್ಲಿದೆ ಪರಿಹಾರ

Indian Postal Department Is Rolling Out Kichcha Sudeeps Special Postal Envelope

Comments are closed.