ಈ ವರ್ಷದ ಅತಿದೊಡ್ಡ ಮೊಬೈಲ್ ಶೋ MWC 2023 ಬಾರ್ಸಿಲೋನಾದಲ್ಲಿ ಇಂದಿನಿಂದ (February 27, 2023) ಪ್ರಾರಂಭವಾಗಿದೆ. ಅದು ಮಾರ್ಚ್ 2 ರವರೆಗೆ ನಡೆಯಲಿದೆ. ಈ ಮೊಬೈಲ್ ಪ್ರದರ್ಶನದಲ್ಲಿ, ವಿವಿಧ ಮೊಬೈಲ್ ಕಂಪನಿಗಳು ತಮ್ಮ ಹೊಸ ಸ್ಮಾರ್ಟ್‌ಫೋನ್‌ಗಳನ್ನು, ಸುಧಾರಿತ ತಂತ್ರಜ್ಞಾನ, ಹೊಸ ಪರಿಕಲ್ಪನೆಯ ಫೋನ್‌ಗಳನ್ನು ಮತ್ತು ಅನೇಕ ಎಲೆಕ್ಟ್ರಾನಿಕ್ ವಸ್ತುಗಳನ್ನು ಪ್ರದರ್ಶಿಸುತ್ತವೆ. ಇದರಲ್ಲಿ ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒನ್‌ಪ್ಲಸ್ (OnePlus) ತನ್ನ OnePlus 11 ಪರಿಕಲ್ಪನೆಯ ಫೋನ್‌ನ ಒಂದನ್ನು ಪರಿಚಯಿಸಿದೆ. ಈ ಫೋನಿನ ವಿಶೇಷತೆ ಏನೆಂದರೆ ಇದರಲ್ಲಿ ಗ್ರಾಹಕರಿಗೆ ಆಕ್ಟಿವ್ ಕ್ರಯೋಫ್ಲಕ್ಸ್ ಕೂಲಿಂಗ್ ಸಿಸ್ಟಂ (Cryoflux Cooling System) ಸಿಗಲಿದ್ದು, ನಿರಂತರ ಬಳಕೆಯ ನಂತರವೂ ಈ ಫೋನ್ ಬಿಸಿಯಾಗುವುದಿಲ್ಲ. ಸಾಮಾನ್ಯವಾಗಿ, ಗಂಟೆಗಟ್ಟಲೆ ನಿರಂತರವಾಗಿ ಕೆಲಸ ಮಾಡುವಾಗ ಅಥವಾ ಆಟಗಳನ್ನು ಆಡುವಾಗ ಅಥವಾ ಭಾರೀ ಅಪ್ಲಿಕೇಶನ್‌ಗಳನ್ನು ಬಳಸಿದಾಗ, ಅದು ಬಿಸಿಯಾಗಲು ಪ್ರಾರಂಭಿಸುತ್ತದೆ ಎಂಬುದು ಸ್ಮಾರ್ಟ್‌ಫೋನ್ ಉಪಯೋಗಿಸುವವರ ಅನುಭವಕ್ಕೆ ಬಂದಿರುತ್ತದೆ. ಆದರೆ ಈ ಮೊಬೈಲ್ ಪ್ರದರ್ಶನದಲ್ಲಿ ಪರಿಚಯಿಸಿದ ಒನ್‌ಪ್ಲಸ್ 11 ಪರಿಕಲ್ಪನೆಯ ಫೋನ್‌ನಲ್ಲಿ (OnePlus 11 Concept) ಹಾಗಾಗುವುದಿಲ್ಲ. ಅದರಲ್ಲಿ ಲಭ್ಯವಿರುವ ಕೂಲಿಂಗ್ ವ್ಯವಸ್ಥೆಯಿಂದಾಗಿ, ಮೊಬೈಲ್ ಫೋನ್‌ನ ತಾಪಮಾನವು 2.8 ಡಿಗ್ರಿ ಸೆಲ್ಸಿಯಸ್‌ವರೆಗೆ ತಂಪಾಗಿರುತ್ತದೆ.
ಒನ್‌ಪ್ಲಸ್11 ಕಾನ್ಸೆಪ್ಟ್ ಫೋನ್ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲಾಗಿಲ್ಲ. ಆದರೆ ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಇದು, ಸ್ನಾಪ್‌ಡ್ರಾಗನ್ 8 ಜನರೇಷನ್ 2 ಚಿಪ್‌ಸೆಟ್‌ನ ಬೆಂಬಲವನ್ನು ಈ ಮೊಬೈಲ್ ಫೋನ್‌ನಲ್ಲಿ ಕಾಣಬಹುದು. ಮೊಬೈಲ್ ಫೋನ್‌ನಲ್ಲಿ, 6.7-ಇಂಚಿನ OLED ಡಿಸ್ಪ್ಲೇ, 120hz ನ ರಿಫ್ರೆಶ್ ದರವನ್ನು ಬೆಂಬಲಿಸುಬಹುದು. ಕಂಪನಿಯು ನಥಿಂಗ್ ಫೋನ್ ಒನ್‌ನಲ್ಲಿ ನೀಡಿರುವಂತೆ ಒನ್‌ಪ್ಲಸ್ 11 ಕಾನ್ಸೆಪ್ಟ್ ಫೋನ್‌ನಲ್ಲಿ ಹಿಂಭಾಗದಲ್ಲಿ LED ಲೈಟ್ ಕಂಡುಬರುತ್ತಿದೆ. ಈ ಫೋನ್‌ನಲ್ಲಿ ನೀಲಿ ಬೆಳಕನ್ನು ನೋಡುಬಹುದಾಗಿದೆ.
ಏನಿದು MWC 2023 :
ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC 2023) ಇದು ಮೊಬೈಲ್ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳ ಪ್ರದರ್ಶನ ಮೇಳವಾಗಿದೆ. ಈ ವರ್ಷ ಅದು ಬಾರ್ಸಿಲೋನಾದಲ್ಲಿ ಫೆಬ್ರವರಿ 27 ರಿಂದ ಪ್ರಾರಭವಾಗಿದೆ. ಈ ಪ್ರದರ್ಶನವು ಮಾರ್ಚ್ 2 ರವರೆಗೆ ನಡೆಯಲಿದೆ. ಇದರಲ್ಲಿ ಪ್ರಮುಖ ಟೆಕ್ ಕಂಪನಿಗಳು ಮುಂಬರುವ ಗ್ಯಾಜೆಟ್‌ಗಳನ್ನು, ಸ್ಮಾರ್ಟ್‌ಪೋನ್‌ಗಳಲ್ಲಾದ ಹೊಸ ಆವಿಷ್ಕಾರಗಳನ್ನು ಪ್ರದರ್ಶಿಸುತ್ತಾರೆ.
ಇದನ್ನೂ ಓದಿ : ಸಿಇಟಿ ಪರೀಕ್ಷಾ ದಿನಾಂಕ ಪ್ರಕಟ : KCET ಅರ್ಜಿ ಸಲ್ಲಿಕೆ ವಿಧಾನ ಇಲ್ಲಿದೆ
(OnePlus 11 Concept gaming phone have pc like liquid cooling technology showcased in MWC 2023)