ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಒನ್‌ಪ್ಲಸ್ ಈ ತಿಂಗಳ ಆರಂಭದಲ್ಲಿ 2 ಫ್ಲಾಗ್‌ಶಿಪ್ ಫೋನ್ ಒನ್‌ಪ್ಲಸ್ 11 5ಜಿ (OnePlus 11 5G) ಮತ್ತು ಒನ್‌ಪ್ಲಸ್ 11R 5ಜಿ (OnePlus 11 R 5G) ಗಳನ್ನು ಅನಾವರಣಗೊಳಿಸಿತ್ತು. ಬಹಳಷ್ಟು ಕಾಯುವಿಕೆಯ ನಂತರ ಒನ್‌ಪ್ಲಸ್ R 5 ಜಿ ಸ್ಮಾರ್ಟ್‌ಫೋನ್‌ನ ಮಾರಾಟ ಇಂದು ಪ್ರಾರಂಭವಾಗಿದೆ. ಕಂಪನಿಯು ಈ ಮೊಬೈಲ್ ಅನ್ನು ಎರಡು ಆವೃತ್ತಿಗಳಲ್ಲಿ ಪರಿಚಯಿಸಿದೆ. ಇದರಲ್ಲಿ ಸ್ನಾಪ್‌ಡ್ರಾಗನ್ 8 ಜೆನ್ ಪ್ರೊಸೆಸ್ಸರ್ ಅನ್ನು ಪಡೆದುಕೊಂಡಿದೆ.
ಬೆಲೆ ಎಷ್ಟು?
ಎರಡು ಆವೃತ್ತಿಗಳಲ್ಲಿ ಬಿಡುಗಡೆಯಾದ ಒನ್‌ಪ್ಲಸ್ 11 R 5ಜಿ ಮೊಬೈಲ್ 8 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಹೊಂದಿರುವ ಫೋನ್‌ನ ಬೆಲೆ 39,999 ರೂ. ಗಳಾಗಿದೆ. ಇದೇ ರೀತಿ ಈ ಫೋನ್‌ನ ಟಾಪ್ ಎಂಡ್ ಮಾದರಿಯಾದ 16 ಜಿಬಿ RAM ಮತ್ತು 256 ಜಿಬಿ ಸ್ಟೊರೇಜ್ ಇರುವ ಫೋನ್‌ನ ಬೆಲೆ 44,999 ರೂ,ಗಳಾಗಿದೆ. ಇದನ್ನು ಗೈಲೆಕ್ಟಿಕ್ ಸಿಲ್ವರ್ ಮತ್ತು ಸೋನಿಕ್ ಬ್ಲಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.
ಆಫರ್ ಏನು?
ಇಂದಿನಿಂದ ಮಾರಾಟ ಪ್ರಾರಂಭಿಸಿದ ಒನ್‌ಪ್ಲಸ್ 11R (OnePlus 11R) ಅನ್ನು ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ಮತ್ತು ಒನ್‌ಪ್ಲಸ್ ಚಾನಲ್ ಮೂಲಕ ಖರೀದಿಸಬಹುದಾಗಿದೆ. ಕಂಪನಿಯು ಐಸಿಐಸಿಐ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ನಲ್ಲಿ ಈ ಫೋನ್‌ನ ಖರೀದಿಯಲ್ಲಿ 1,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ನೀಡಲಾಗುತ್ತಿದೆ. ಅದಲ್ಲದೆ, ಎಕ್ಸ್‌ಚೇಂಜ್ ಆಫರ್‌ನ ಲಾಭವನ್ನು ಪಡೆಯುವ ಮೂಲಕ ನೀವು ಮೊಬೈಲ್ ಫೋನ್‌ನ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಹಳೆಯ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ, ಅದರಲ್ಲಿ ಸುಲಭವಾಗಿ 5 ರಿಂದ 8,000 ರೂಪಾಯಿಗಳನ್ನು ಉಳಿಸಬಹುದಾಗಿದೆ. 8,000 ರೂಪಾಯಿ ವಿನಿಮಯ ಮತ್ತು 1,000 ರೂಪಾಯಿ ತ್ವರಿತ ರಿಯಾಯಿತಿಯನ್ನು ಪಡೆಯುವ ಮೂಲಕ, ನೀವು ಹೊಸ ಒನ್‌ಪ್ಲಸ್ 11R 5G ಅನ್ನು 30,000 ರೂಪಾಯಿಗಳಿಗೆ ಖರೀದಿಸಬಹುದಾಗಿದೆ.
ಒನ್‌ಪ್ಲಸ್ 11R 5G ಯ ವಿಶೇಷತೆಗಳೇನು?
ಇದು 6.7 ಇಂಚಿನ ದೊಡ್ಡದಾದ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದರ ರಿಫ್ರೆಶ್ ದರವು 120hz ಆಗಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ, 100 ವ್ಯಾಟ್ ವೇಗದ SUPERVOOC ಚಾರ್ಜಿಂಗ್‌ನೊಂದಿಗೆ 5000 mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಕ್ಯಾಮೆರಾದ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಮುಂಭಾಗದಲ್ಲಿ ಸೆಲ್ಫೀಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಒನ್‌ಪ್ಲಸ್ 11R 5G ಸ್ನಾಪ್‌ಡ್ರಾಗನ್ 8 ಜೆನ್ ಪ್ರೊಸೆಸ್ಸರ್‌ನಿಂದ ವೇಗವನ್ನು ಪಡೆದುಕೊಳ್ಳಲಿದೆ. ಇದು ಒಕ್ಸಿಜನ್ OS ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸಲಿದೆ.
(OnePlus 11 R 5G smartphone sale started. Know the price, offer, and specifications)