New Zeeland vs England test : ಫಾಲೋ ಆನ್‌ಗೆ ತುತ್ತಾದರೂ ಇಂಗ್ಲೆಂಡ್ ಸೊಕ್ಕಡಗಿಸಿ ಗೆದ್ದು ಬೀಗಿದ ನ್ಯೂಜಿಲೆಂಡ್

ವೆಲ್ಲಿಂಗ್ಟನ್ : ಆತಿಥೇಯ ನ್ಯೂಜಿಲೆಂಡ್ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ (New Zeeland vs England test) ಫಾಲೋ ಆನ್‌ಗೆ ತುತ್ತಾದರೂ ಕೊನೆಯಲ್ಲಿ 1 ರನ್ನಿನ ರೋಚಕ ಗೆಲುವು ಸಾಧಿಸಿ, 2 ಪಂದ್ಯಗಳ ಸರಣಿಯನ್ನು 1-1ರ ಅಂತರದಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ. ವೆಲ್ಲಿಂಗ್ಟನ್‌ನಲ್ಲಿರುವ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ 258 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಪ್ರವಾಸಿ ಇಂಗ್ಲೆಂಡ್, 256 ರನ್‌ಗಳಿಗೆ ಆಲೌಟಾಗಿ ಒಂದು ರನ್ನಿಂದ ಸೋಲೊಪ್ಪಿಕೊಂಡಿತು.

6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಗೆಲುವಿನ ಹಾದಿಯಲ್ಲಿದ್ದ ಇಂಗ್ಲೆಂಡ್, 55 ರನ್‌ಗಳ ಅಂತರದಲ್ಲಿ ಕೊನೆಯ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಕಿವೀಸ್ ಪರ ಎಡಗೈ ವೇಗಿ ನೀಲ್ ವ್ಯಾಗ್ನರ್ 62 ರನ್ನಿಗೆ 4 ವಿಕೆಟ್ ಪಡೆದರೆ, ನಾಯಕ ಟಿಮ್ ಸೌಥೀ 45 ರನ್ನಿಗೆ 3 ವಿಕೆಟ್ ಹಾಗೂ ಮ್ಯಾಟ್ ಹೆನ್ರಿ 75 ರನ್ನಿಗೆ 2 ವಿಕೆಟ್ ಉರುಳಿಸಿದರು. ಇಂಗ್ಲೆಂಡ್ ಗೆಲುವಿಗೆ 2 ರನ್ ಬೇಕಿದ್ದಾಗ ಜೇಮ್ಸ್ ಆಂಡರ್ಸನ್ ವಿಕೆಟ್ ಪಡೆದ ನೀಲ್ ವ್ಯಾಗ್ನರ್ ಕಿವೀಸ್ ಪಡೆಗೆ 1 ರನ್ ಅಂತರದ ರೋಚಕ ಗೆಲುವು ತಂದುಕೊಟ್ಟರು.

ಇದಕ್ಕೂ ಮೊದಲು ಪ್ರಥಮ ಇನ್ನಿಂಗ್ಸ್‌ನಲ್ಲಿ 226 ರನ್‌ಗಳ ಭಾರೀ ಹಿನ್ನಡೆಗೊಳಗಾಗಿ ಫಾಲೋ ಆನ್ ಪಡೆದಿದ್ದ ನ್ಯೂಜಿಲೆಂಡ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೀಷ್ ಬೌಲರ್‌ಗಳಿಗೆ ಸಡ್ಡು ಹೊಡೆದು ನಿಂತಿತು. ಟೆಸ್ಟ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಬಾರಿಸಿದ ಅಮೋಘ ಶತಕ (132) ಹಾಗೂ ಟಾಮ್ ಲೇಥಮ್ (83), ಡ್ಯಾರಿಲ್ ಮಿಚೆಲ್ (54) ಹಾಗೂ ವಿಕೆಟ್ ಕೀಪರ್ ಟಾಮ್ ಬ್ಲಂಡೆಲ್ (90) ಬಾರಿಸಿದ ಅರ್ಧಶತಕಗಳ ನೆರವಿನಿಂದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 483 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿ ಇಂಗ್ಲೆಂಡ್‌ಗೆ ಸವಾಲೊಡ್ಡಿತು. ಆದರೆ ಕಿವೀಸ್ ಒಡ್ಡಿದ 258 ರನ್‌ಗಳ ಸವಾಲನ್ನು ಬೆನ್ನಟ್ಟಲು ವಿಫಲವಾದ ಇಂಗ್ಲೆಂಡ್ ಕೈಯಲ್ಲಿದ್ದ ಪಂದ್ಯವನ್ನು ಕೈಚೆಲ್ಲಿತು. ಅತ್ತ ಕಡೆ ನ್ಯೂಜಿಲೆಂಡ್ 1 ರನ್ನಿನ ರೋಚಕ ಗೆಲುವು ಸಾಧಿಸಿ ಇಂಗ್ಲೀಷರ ಸೊಕ್ಕು ಮುರಿಯುವಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ : Meg Lanning : ಧೋನಿಯೂ ಅಲ್ಲ, ಪಾಂಟಿಂಗೂ ಅಲ್ಲ; ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ನಾಯಕಿ ಈ ಮಹಿಳೆ

ಇದನ್ನೂ ಓದಿ : ಪತ್ನಿ ಸಮೇತ ಮಹಾಕಾಳೇಶ್ವರನ ದರ್ಶನ ಪಡೆದ ರಾಹುಲ್, ಕನ್ನಡಿಗನಿಗೆ ಸಿಗಲಿದ್ಯಾ ಶಿವಾನುಗ್ರಹ?

ಇದನ್ನೂ ಓದಿ : Mayank Agarwal to lead Rest of India : ಇರಾನಿ ಕಪ್ ಪಂದ್ಯಕ್ಕೆ ರೆಸ್ಟ್ ಆಫ್ ಇಂಡಿಯಾ ತಂಡ ಪ್ರಕಟ, ಕನ್ನಡಿಗ ಮಯಾಂಕ್ ಅಗರ್ವಾಲ್ ನಾಯಕ

ಶತಕವೀರ ಕೇನ್ ವಿಲಿಯಮ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಇಂಗ್ಲೆಂಡ್ ಪರ ಪ್ರಥಮಇನ್ನಿಂಗ್ಸ್‌ನಲ್ಲಿ 176 ಎಸೆತಗಳಲ್ಲಿ ಸಿಡಿಲಬ್ಬರದ 186 ರನ್ ಸಹಿತ ಸರಣಿಯಲ್ಲಿ ಒಟ್ಟು 329 ರನ್ ಕಲೆ ಹಾಕಿದ ಇಂಗ್ಲೆಂಡ್‌ನ ಯುವ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

New Zeeland vs England test: Despite the follow-on, England defeated New Zealand to win.

Comments are closed.