ಒನ್ ಪ್ಲಸ್ ದೀಪಾವಳಿ 2023 (One Plus Diwali Sale 2023) ಮಾರಾಟವನ್ನು ಪ್ರಕಟಿಸಿದೆ. ಈ ಬಾರಿ ಒನ್ ಪ್ಲಸ್ (OnePlus Nord CE 3 Lite 5G) , ಒನ್ ಪ್ಲಸ್ ನೋರ್ಡ್ 3 5G ( OnePlus Nord 3 5G), ಒನ್ ಪ್ಲಸ್ ನೋರ್ಡ್ ಸಿಇ 3 5G (OnePlus Nord CE 3 5G ) ಮೇಲೆ ಬಾರೀ ರಿಯಾಯಿತಿ ಘೋಷಣೆ ಆಗುವ ಸಾಧ್ಯತೆಯಿದೆ.
ಈ ಬಾರಿ ಒನ್ ಪ್ಲಸ್ 11 5G ( OnePlus 11 5G ), ಒನ್ ಪ್ಲಸ್ ಬಡ್ಸ್ ( OnePlus Buds Pro 2 )ಮತ್ತು ಒನ್ ಪ್ಲಸ್ ಪ್ಯಾಡ್( OnePlus Pad ) ಟ್ಯಾಬ್ಲೆಟ್‌ನಂತಹ ಉತ್ಪನ್ನಗಳು ಈ ಮಾರಾಟದಲ್ಲಿ ಭಾರಿ ರಿಯಾಯಿತಿ ಘೋಷಣೆ ಮಾಡುವ ಸಾಧ್ಯತೆಯಿದೆ. ಚೀನಾ ಮೂಲದ ಒನ್ ಪ್ಲಸ್ ಈಗಾಗಲೇ ಭಾರತದ ಮಾರುಕಟ್ಟೆ ಯಲ್ಲಿ ಹೆಚ್ಚು ಮಾರಾಟವನ್ನು ಗುರುತಿಸಿಕೊಂಡಿದೆ. ವರ್ಷಂಪ್ರತಿ ದೀಪಾವಳಿಗೆ ಒನ್‌ಪ್ಲಸ್ ಕಂಪೆನಿ ವಿಶೇಷ ಘೋಷಣೆಗಳನ್ನು ಮಾಡುತ್ತಿದ್ದು, ಈ ಬಾರಿ ಗ್ರಾಹಕರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಒನ್ ಪ್ಲಸ್ ಕಂಪೆನಿ ವಿಶೇಷ ರಿಯಾಯಿತಿಯನ್ನು ಯಾವ ದಿನದಿಂದ ಘೋಷಿಸಲಿದೆ ಅನ್ನೋದನ್ನು ಇನ್ನೂ ಖಚಿತಪಡಿಸಿಲ್ಲ. ಅದ್ರಲ್ಲೂ ಒನ್ ಪ್ಲಸ್ ಆಪ್ ಮೂಲಕ ಹೆಚ್ಚಿನ ರಿಯಾಯಿತಿಯನ್ನು ಗ್ರಾಹಕರು ಪಡೆಯುವ ಸಾಧ್ಯತೆಯಿದೆ.
OnePlus 11 5G, OnePlus Buds Pro 2 ಮತ್ತು OnePlus Pad ಟ್ಯಾಬ್ಲೆಟ್‌ನಂತಹ ಉತ್ಪನ್ನಗಳ ಮೇಲೆ ಹೆಚ್ಚಿನ ರಿಯಾಯಿತಿ ಪಡೆಯುವ ಸಾಧ್ಯತೆಯಿದೆ. OnePlus ನಾರ್ಡ್ ವಾಚ್ ಮತ್ತು OnePlus TV 65 Q2 Pro ಜೊತೆಗೆ ಮುಂಬರುವ OnePlus Pad Go ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : 50MP ಕ್ಯಾಮೆರಾ, 256 GB Ram, ಅತ್ಯಾಧುನಿಕ ತಂತ್ರಜ್ಞಾನ: ಶೀಘ್ರದಲ್ಲೇ ಬಿಡುಗಡೆ ಆಗಲಿದೆ Google Pixel 8
ಅಕ್ಟೋಬರ್ 7 ಒನ್ ಪ್ಲಸ್ ದೀಪಾವಳಿ ಮಾರಾಟವನ್ನು ಘೋಷಣೆ ಮಾಡುವ ಸಾಧ್ಯತೆಯಿದೆ. ಒನ್ ಪ್ಲಸ್ ಆಪ್ ಜೊತೆಗೆ ಅದೇ ದಿನ Amazon Great Indian Freedom Sale 2023 ಮತ್ತು Flipkart Big Billion Days Sale 2023 ಕೂಡ ಆರಂಭವಾಗಲಿದ್ದು, ಒನ್‌ಪ್ಲಸ್ ಭಾರೀ ದೊಡ್ಡ ಘೋಷಣೆ ಮಾಡುವ ಸಾಧ್ಯತೆಯಿದೆ.
ಈ ಬಾರಿಯ ದೀಪಾವಳಿಯ ವಿಶೇಷ ಮಾರಾಟದಲ್ಲಿ ಪ್ರಮುಖವಾಗಿ OnePlus 11 5G, OnePlus Buds Pro 2 ಮತ್ತು OnePlus Pad ಟ್ಯಾಬ್ಲೆಟ್‌ಗಳಂತಹ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಪಡೆಯುವ ಸಾಧ್ಯತೆಯಿದೆ.

ಮೊಬೈಲ್ ಪೋನ್ ಮಾತ್ರವಲ್ಲದೇ OnePlus ನಾರ್ಡ್ ವಾಚ್ ಮತ್ತು OnePlus TV 65 Q2 Pro ಜೊತೆಗೆ OnePlus Pad Go ಕೂಡ ಅತ್ಯಂತ ಕಡಿಮೆ ಬೆಲೆ ಗ್ರಾಹಕರಿಗೆ ಲಭ್ಯವಾಗಲಿದೆ. ಸ್ಮಾರ್ಟ್‌ಫೋನ್ 49,999ರೂ.ಗೆ ದೊರೆಯುವ ಸಾಧ್ಯತೆಯಿದೆ.
ಇದನ್ನೂ ಓದಿ : ಕೇವಲ ರೂ.2999ಕ್ಕೆ ಐಪೋನ್ ಖರೀದಿಸಿ : ಐಪೋನ್ 15 ಲಾಂಚ್ ಬೆನ್ನಲ್ಲೇ ಐಪೋನ್ 11ರ ಮೇಲೆ ಬಾರೀ ಡಿಸ್ಕೌಂಟ್
ಇನ್ನು OnePlus Nord CE 3 Lite 5G ಬೆಲೆ ರೂ. 17,499, OnePlus Nord 3 5G ರೂ.ನಿಂದ. ರೂ. 28,999, ಮತ್ತು OnePlus Nord CE 3 5G ರೂ.ನಿಂದ ಪ್ರಾರಂಭವಾಗುತ್ತದೆ. OnePlus Buds Pro 2 TWS ಇಯರ್‌ಫೋನ್‌ಗಳು 7,999ರೂ. ಆರಂಭಿಕ ಬೆಲೆ ಬೆಲೆಯಲ್ಲಿ ಲಭ್ಯವಿದ್ದು, OnePlus Nord Buds 2 TWS ಇಯರ್‌ಬಡ್‌ಗಳು ರೂ.ಗೆ ಮಾರಾಟಕ್ಕೆ ಲಭ್ಯವಿರುತ್ತದೆ.
ಇನ್ನು ಕೇವಲ 1,349ರೂ.ಗಳಿಗೆ OnePlus OnePlus ಬುಲೆಟ್ ವೈರ್‌ಲೆಸ್ Z2, 599ರೂ.ಗಳಿಗೆ OnePlus ನಾರ್ಡ್ ವೈರ್ಡ್ ಇಯರ್‌ಫೋನ್ ಲಭ್ಯವಿದೆ. ಈ ಬಾರಿ ರಿಯಾಯಿತಿಯ ಜೊತೆಗೆ ಸುಲಭ ಇಎಂಐ ಸೌಲಭ್ಯ ಕೂಡ ಲಭ್ಯವಾಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ :15 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ಖರೀದಿಸಿ ಈ 5G ಸ್ಮಾರ್ಟ್ ಪೋನ್
ಇನ್ನು ಒನ್ ಪ್ಲಸ್ ಪ್ಯಾಡ್‌ಗಳು ಕೂಡ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯವಿದೆ. ಒನ್ ಪ್ಲಸ್ ಪ್ಯಾಡ್ ಗೋ ಅಕ್ಟೋಬರ್ ೬ರಂದು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದ್ದು, ದೀಪಾವಳಿ ಸೇಲ್‌ನಲ್ಲಿ ಡಿಸ್ಕೌಂಟ್ ಘೋಷಣೆ ಮಾಡುವ ಸಾಧ್ಯತೆಯಿದೆ.
ಇನ್ನು ಒನ್ ಪ್ಲಸ್ ಸ್ಮಾರ್ಟ್ ವಾಚ್‌ಗಾಗಿ, OnePlus ನಾರ್ಡ್ ವಾಚ್ ಅನ್ನು ರೂ.4,999. ಗೆ ಖರೀದಿಸಬಹುದು. OnePlus TV 65 Q2 Pro ಖರೀದಿದಾರರು ಹೆಚ್ಚುವರಿ 5,000 ರೂ. ರಿಯಾಯಿತಿ ದರದಲ್ಲಿ ಲಭ್ಯವಿರಲಿದೆ.
oneplus Diwali 2023 big discount sale Announced Check Smart Phone price