ಭಾನುವಾರ, ಏಪ್ರಿಲ್ 27, 2025
HometechnologyOnePlus 12R: 50MP ಕ್ಯಾಮೆರಾ, ಅತ್ಯಧಿಕ ಕಡಿಮೆ ಬೆಲೆ, ಇಂದಿನಿಂದ ಒನ್‌ಪ್ಲಸ್‌ 12R ಭಾರತದಲ್ಲಿ ಮಾರಾಟ...

OnePlus 12R: 50MP ಕ್ಯಾಮೆರಾ, ಅತ್ಯಧಿಕ ಕಡಿಮೆ ಬೆಲೆ, ಇಂದಿನಿಂದ ಒನ್‌ಪ್ಲಸ್‌ 12R ಭಾರತದಲ್ಲಿ ಮಾರಾಟ ಆರಂಭ

- Advertisement -

OnePlus 12R:  ಭಾರತದಲ್ಲಿ ಅತ್ಯಧಿಕ ಮಾರಾಟವಾಗುತ್ತಿರುವ ಸ್ಮಾರ್ಟ್‌ಪೋನ್‌ ಕಂಪೆನಿಗಳ ಪೈಕಿ ಒಂದಾಗಿರುವ ಒನ್‌ಪ್ಲಸ್‌ ಇದೀಗ ಒನ್‌ಪ್ಲಸ್‌ 12R ಆವೃತ್ತಿಯಲ್ಲಿ ಸ್ಮಾರ್ಟ್‌ಪೋನ್‌ ಬಿಡುಗಡೆ ಮಾಡಿದ್ದು, ಇಂದಿನಿಂದ ಭಾರತದಲ್ಲಿ ಮಾರಾಟವಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಒನ್‌ಪ್ಲಸ್‌ 12R ಗ್ರಾಹಕರ ಗಮನ ಸೆಳೆದಿದೆ.

OnePlus 12R 50MP Camera, Lowest Price, OnePlus 12R Goes on Sale in India from Today
Image Credit to Original Source

ಇತ್ತೀಚೆಗೆ ಒನ್‌ಪ್ಲಸ್‌ 12R ಸ್ಮಾರ್ಟ್‌ಪೋನ್‌ ಘೋಷಣೆ ಮಾಡಲಾಗಿದೆ. 6.78-ಇಂಚಿನ AMOLED Pro XDR ಡಿಸ್ಪ್ಲೇ, ಸ್ನಾಪ್ಡ್ರಾಗನ್ 8 Gen 2 ಚಿಪ್ಸೆಟ್, 16GB RAM ಮತ್ತು 50MP ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 8GB RAM ಹೊಂದಿರುವ ಸ್ಮಾರ್ಟ್‌ಫೋನ್ ₹39,999ಕ್ಕೆ ದೊರೆಯಲಿದೆ.

ಜನವರಿ 23 ರಂದು ದೆಹಲಿಯಲ್ಲಿ ನಡೆದ ಸ್ಮೂತ್ ಬಿಯಾಂಡ್ ಬಿಲೀಫ್ ಈವೆಂಟ್‌ನಲ್ಲಿ OnePlus ತನ್ನ ಪ್ರೀಮಿಯಂ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ OnePlus 12R ಅನ್ನು ಘೋಷಣೆ ಮಾಡಿದೆ. ಕಳೆದ ಒಂದು ವಾರದಿಂದಲೇ OnePlus 12 ಮಾರಾಟ ವಾಗುತ್ತಿದ್ದು, ಇದೀಗ OnePlus ಇಂದಿನಿಂದ 12R ಖರೀದಿ ಮಾಡಬಹುದಾಗಿದೆ.

OnePlus 12R 50MP Camera, Lowest Price, OnePlus 12R Goes on Sale in India from Today
Image Credit to Original Source

OnePlus 12R ವಿಶೇಷತೆಗಳೇನು ?

OnePlus 12R LTPO4.0 ಬೆಂಬಲದ ಜೊತೆಗೆ 6.78-ಇಂಚಿನ AMOLED ProXDR ಡಿಸ್ಪ್ಲೇ ಒಳಗೊಂಡಿದೆ. ಅತ್ಯಾಧುನಿಕ ಗ್ರಾಫಿಕ್ಸ್‌ ಬಳಕೆ ಮಾಡಲು ಕೂಡ ಈ ಪೋನ್‌ ಸಹಕಾರಿಯಾಗಿದೆ. ಇದಕ್ಕಾಗಿಯೇ ಅಡ್ರಿನೊ 740 GPU ನೊಂದಿಗೆ ಜೋಡಿಸಲಾದ Qualcomm Snapdragon 8 Gen 2 ಚಿಪ್‌ಸೆಟ್‌ನಿಂದ ಸ್ಮಾರ್ಟ್‌ಫೋನ್ ಚಾಲನೆ ಆಗಲಿದೆ.

ಇದನ್ನೂ ಓದಿ : Motorola Razr 40 ಅಲ್ಟ್ರಾ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಶೇ.42% ರಿಯಾಯಿತಿ ಘೋಷಿಸಿದ ಅಮೇಜಾನ್

OnePlus 12R 16GB ಯ LPDDR5X RAM ಮತ್ತು 256GB UFS 4.0 ಸಂಗ್ರಹಣಾ ಸಾಮರ್ಥ್ಯವನ್ನು ಒಳಗೊಂಡಿದೆ. ಅಲ್ಲದೇ ಪ್ರೀಮಿಯಂ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ 5,500mAh ಬ್ಯಾಟರಿಯಿಂದ ಚಾಲಿತವಾಗಿದ್ದು, ಅತ್ಯಧಿಕ ಸಮಯದ ವರೆಗೆ ಪೋನ್‌ ಬಳಕೆ ಮಾಡಬಹುದಾಗಿದೆ. ಜೊತೆಗೆ 100W SUPERVOOC ಚಾರ್ಜರ್ ಮೂಲಕ ವೇಗವಾಗಿ ಚಾರ್ಜ್ ಮಾಡಲು ಸಹಕಾರಿಯಾಗಿದೆ

OnePlus 12R 50MP Camera, Lowest Price, OnePlus 12R Goes on Sale in India from Today
Image Credit to Original Source

ಹೊಸ ಸ್ಮಾರ್ಟ್‌ಪೋನ್‌ OIS ಮತ್ತು EIS ಗೆ ಬೆಂಬಲದ ಜೊತೆಗೆ 50MP ಸೋನಿ IMX890 ಕ್ಯಾಮೆರಾ ಒಳಗೊಂಡಿದೆ. ಜೊತೆಗೆ 8MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಲೆನ್ಸ್. ಜೊತೆಗೆ ಸೆಲ್ಪಿ ಹಾಗೂ ವಿಡಿಯೋ ಕರೆಗಳಿಗೆ ಅನುಕೂಲ ಆಗುವ ಸಲುವಾಗಿ ಸ್ಮಾರ್ಟ್‌ಪೋನ್‌ ಮುಂಭಾಗದಲ್ಲಿ 16MP ಕ್ಯಾಮೆರಾ ಅಳವಡಿಸಲಾಗಿದೆ.

ಇದನ್ನೂ ಓದಿ : 10 ಸಾವಿರಕ್ಕೂ ಕಡಿಮೆ ಬೆಲೆಗೆ 5000Mah ಬ್ಯಾಟರಿ, 50MP ಕ್ಯಾಮೆರಾ ಹೊಂದಿರುವ Poco C65

OnePlus 12R ನಲ್ಲಿನ ಕ್ಯಾಮೆರಾ ಅಪ್ಲಿಕೇಶನ್ ಇಂಟರ್ವಲ್ ಶೂಟಿಂಗ್, ನೈಟ್‌ಸ್ಕೇಪ್, ಹೈ-ರೆಸ್ ಮೋಡ್, ಪ್ರೊ ಮೋಡ್, ಮೂವೀ ಮೋಡ್, ಅಲ್ಟ್ರಾ ಸ್ಟೆಡಿ ಮೋಡ್, ಡ್ಯುಯಲ್-ವ್ಯೂ ವಿಡಿಯೋ, ಪೋರ್ಟ್ರೇಟ್ ಮೋಡ್, ವಿಡಿಯೋ ಪೋರ್ಟ್ರೇಟ್, ಪನೋ, ಮ್ಯಾಕ್ರೋ, ಸ್ಲೋ ಸೇರಿದಂತೆ ಹಲವಾರು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. -ಮೊ, ಟೈಮ್ ಲ್ಯಾಪ್ಸ್, ಲಾಂಗ್ ಎಕ್ಸ್‌ಪೋಸರ್, ಟೆಕ್ಸ್ಟ್-ಸ್ಕ್ಯಾನರ್ ಅಳವಡಿಸಲಾಗಿದೆ.OnePlus 12R NFC, Wi-Fi 7, ಬ್ಲೂಟೂತ್ 5.3, GPS ಮತ್ತು ಡ್ಯುಯಲ್ ನ್ಯಾನೊ-ಸಿಮ್ ಕೂಡ ಬಳಕೆ ಮಾಡಬಹುದಾಗಿದೆ.

OnePlus 12R 50MP Camera, Lowest Price, OnePlus 12R Goes on Sale in India from Today
Image Credit to Original Source

OnePlus 12R ಬೆಲೆ ಜೊತೆಗೆ ಬಿಗ್‌ ಆಫರ್‌

OnePlus 12R ಬೆಲೆ 8GB RAM/128GB ಸ್ಟೋರೇಜ್ ರೂಪಾಂತರಕ್ಕೆ ₹39,999 ಮತ್ತು 16GB RAM/256GB ಸ್ಟೋರೇಜ್ ರೂಪಾಂತರಕ್ಕೆ ₹45,999 ರೂಪಾಯಿ ಇದೆ. ಅಲ್ಲದೇ ಕೂಲ್ ಬ್ಲೂ ಮತ್ತು ಐರನ್ ಗ್ರೇ ಸೇರಿದಂತೆ ಎರಡು ಬಣ್ಣಗಳಲ್ಲಿ ಸ್ಮಾರ್ಟ್‌ ಪೋನ್‌ ಲಭ್ಯವಿದೆ.

ಇದನ್ನೂ ಓದಿ : 50MP ಕ್ಯಾಮೆರಾ, 5,000mAh ಬ್ಯಾಟರಿ : ಕೇವಲ 6,799 ರೂ.ಗೆ ಸಿಗುತ್ತೆ ರೆಡ್‌ಮೀ 12C ಸ್ಮಾರ್ಟ್‌ಫೋನ್

ಒನ್‌ಪ್ಲಸ್‌ 12R ಸ್ಮಾರ್ಟ್‌ಪೋನ್‌ ಖರೀಸಲು ಅಮೇಜಾನ್‌ ಅವಕಾಶ ಕಲ್ಪಿಸಿದೆ. ಜೊತೆಗೆ ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌, ಒನ್‌ ಕಾರ್ಡ್‌ ಮೂಲಕವೂ ಸ್ಮಾರ್ಟ್‌ ಪೋನ್‌ ಖರೀದಿ ಮಾಡಿದ್ರೆ ಹೆಚ್ಚುವರಿಯಾಗಿ ₹1,000 ರಿಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

OnePlus 12R: 50MP Camera, Lowest Price, OnePlus 12R Goes on Sale in India from Today

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular