10 ಸಾವಿರಕ್ಕೂ ಕಡಿಮೆ ಬೆಲೆಗೆ 5000Mah ಬ್ಯಾಟರಿ, 50MP ಕ್ಯಾಮೆರಾ ಹೊಂದಿರುವ Poco C65

Poco C65 : ಇನ್ನು Poco C65 ನ ಜಾಗತಿಕ ರೂಪಾಂತರವು 6GB RAM/128GB ಸ್ಟೋರೆಜ್‌ $119 ಬೆಲೆಯನ್ನು ಹೊಂದಿದ್ದು, ಭಾರತದಲ್ಲಿ₹10,000 ಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುವ ಸಾಧ್ಯತೆಯಿದೆ.

Poco C65 : ಭಾರತದಲ್ಲಿ ಇದೀಗ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಪೋನ್‌ಗಳು ಮಾರುಕಟ್ಟೆಗೆ ಬಿಡುಗಡೆ ಆಗುತ್ತಿದೆ. ಇದೀಗ ಪೋಕೋ ಕಂಪೆನಿ ಬಡ ಹಾಗೂ ಮಧ್ಯಮ ವರ್ಗದ ಜನರಿಗಾಗಿಯೇ ಪೋಕೋ ಸಿ65 (Poco C65 ) ಮೊಬೈಲ್‌ ಪೋನ್‌ ಪರಿಚಯಿಸಿದೆ. ಬಜೆಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ Poco C65 ಡಿಸೆಂಬರ್ 15 ರಂದು ಭಾರತದಲ್ಲಿ ಪಾದಾರ್ಪಣೆ ಮಾಡಲಿದೆ.

ಸದ್ಯ ಪೋಕೋ (Poco) ಕಂಪೆನಿಯ ಪ್ಲಿಪ್‌ಕಾರ್ಟ್‌ ಮೂಲಕ Poco C65 ಸ್ಮಾರ್ಟ್‌ಪೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. Poco ಡಿಸೆಂಬರ್ 15 ರಂದು ಭಾರತದಲ್ಲಿ ಹೊಸ C65 ಸ್ಮಾರ್ಟ್‌ಫೋನ್ ಬಿಡುಗಡೆ ಆಗಲಿದೆ. ಈಗಾಗಲೇ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಈ ಸ್ಮಾರ್ಟ್‌ಪೋನ್‌ ಬಿಡುಗಡೆ ಆಗಿದ್ದು, ಇದೀಗ ಭಾರತದಲ್ಲಿ ಜಾಗತಿಕ ರೂಪಾಂತರ ಬಿಡುಗಡೆ ಆಗಲಿದೆ.

Poco C65 with 5000Mah battery 50MP camera  Smart Phone for less than 10000 rupess
Image Credit to Original Source

ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ ನೀಡಿರುವ ಮಾಹಿತಿಯ ಪ್ರಕಾರ, Poco C65 ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ನೀಲಿ ಮತ್ತು ಮ್ಯಾಟ್‌ ಬ್ಲ್ಯಾಕ್‌ ಬಣ್ಣಗಳಲ್ಲಿ ಈ ಸ್ಮಾರ್ಟ್‌ಪೋನ್‌ ಲಭ್ಯವಿದ್ದು, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ.

ಇದನ್ನೂ ಓದಿ : ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್ 2023: ಐಫೋನ್ 14, ಪಿಕ್ಸೆಲ್ 7, ಸ್ಯಾಮ್‌ಸಂಗ್ ಮೊಬೈಲ್‌ಗೆ ಭರ್ಜರಿ ಡಿಸ್ಕೌಂಟ್‌

ಪೋಕೋ C65 ನ ಜಾಗತಿಕ ರೂಪಾಂತರವು 6.74-ಇಂಚಿನ IPS LCD ಪ್ಯಾನೆಲ್ ಹೊಂದಿದ್ದು, 720 x 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಜೊತೆಗೆ 90Hz ರಿಫ್ರೆಶ್ ದರ ಮತ್ತು 600 nits ಗರಿಷ್ಠ ಹೊಳಪನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ಪೋನ್‌ ಮುಂಭಾಗದಲ್ಲಿ ವಾಟರ್‌ ಡ್ರಾಫ್ಟ್‌ ಆಕಾರದ ನಾಚ್‌ ಹೊಂದಿದ್ದ, ಮುಂಭಾಗದಲ್ಲಿ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ ಒಳಗೊಂಡಿದ್ದು, ರಕ್ಷಣೆಯ ಜೊತೆಗೆ ನೋಡಲು ಆಕರ್ಷಕವಾಗಿದೆ.

Poco C65 with 5000Mah battery 50MP camera  Smart Phone for less than 10000 rupess
Image Credit to Original Source

ಇನ್ನು ಪೋಕೋ ಪ್ರೊಸೆಸರ್‌ ಬಗ್ಗೆ ನೋಡೊದಾದರೆ, C65 12nm, Mediatek MT6769Z Helio G85 ಚಿಪ್‌ಸೆಟ್‌ನಲ್ಲಿ ಒಳಗೊಂಡಿದೆ. ಗ್ರಾಫಿಕ್ಸ್ ತೀವ್ರ ಕಾರ್ಯಗಳನ್ನು ನಿರ್ವಹಿಸಲು Mali-G52 GPU ಹೊಂದಿದೆ. Poco C65 ಸ್ಮಾರ್ಟ್‌ಪೋನ್ 50MP‌ ಪ್ರಾಥಮಿಕ ಕ್ಯಾಮೆರಾ ಹಾಗೂ 2MP ಕ್ಯಾಮೆರಾ ಒಳಗೊಂಡಿದೆ.

ಇದನ್ನೂ ಓದಿ : ಆಧಾರ್‌ ಕಾರ್ಡ್‌ ದುರ್ಬಳಕೆ ಆಗ್ತಾ ಇದ್ಯಾ ? ಪತ್ತೆ ಹಚ್ಚುವುದು ಬಹಳ ಸುಲಭ, ಯಾವುದಕ್ಕೂ ಒಮ್ಮೆ ಚೆಕ್‌ ಮಾಡಿ

ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ, ಹೊಸ Poco ಫೋನ್ ಮುಂಭಾಗದಲ್ಲಿ 8MP ಕ್ಯಾಮೆರಾ ಹೊಂದಿದೆ. ಜೊತೆಗೆ Poco C65 5,000 mAh ಬ್ಯಾಟರಿ ಒಳಗೊಂಡಿದ್ದು, 18W PD ಚಾರ್ಜರ್ ಮೂಲಕ ತ್ವರಿತವಾಗಿ ಚಾರ್ಜ್ ಮಾಡಬಹುದು. ಅಲ್ಲದೇ ಸುದೀರ್ಘ ಅವಧಿಯ ವರೆಗೆ ಸ್ಮಾರ್ಟ್‌ಪೋನ್‌ ಬಳಕೆ ಮಾಡಬಹುದು.

Poco C65 ಭಾರತದಲ್ಲಿ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. 6GB RAM/128GB ಸಂಗ್ರಹಣೆ ಮತ್ತು 8GB RAM/256GB ಸಂಗ್ರಹ. ಇನ್ನು Poco C65 ನ ಜಾಗತಿಕ ರೂಪಾಂತರವು 6GB RAM/128GB ಸ್ಟೋರೆಜ್‌ $119 ಬೆಲೆಯನ್ನು ಹೊಂದಿದ್ದು, ಭಾರತದಲ್ಲಿ₹10,000 ಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : 50MP ಕ್ಯಾಮೆರಾ, 5,000mAh ಬ್ಯಾಟರಿ : ಕೇವಲ 6,799 ರೂ.ಗೆ ಸಿಗುತ್ತೆ ರೆಡ್‌ಮೀ 12C ಸ್ಮಾರ್ಟ್‌ಫೋನ್

Poco C65 with 5000Mah battery 50MP camera Smart Phone for less than 10000 rupess

Comments are closed.