bigg boss kannada 9 : ಬಿಗ್​ ಬಾಸ್​ ಫ್ಯಾನ್ಸ್​ಗೆ ಇಲ್ಲಿದೆ ಗುಡ್​ ನ್ಯೂಸ್​ : ನಿರ್ಮಾಣ ಹಂತದಲ್ಲಿದೆ ‘ದೊಡ್ಮನೆ’

bigg boss kannada 9 : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ ಬಾಸ್​ ರಿಯಾಲಿಟಿ ಶೋಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಕೊರೊನಾ ಹಾಗೂ ಲಾಕ್​ಡೌನ್​ ಕಾರಣಗಳಿಂದಾಗಿ ಬಿಗ್​ ಬಾಸ್​ ಸೀಸನ್​ 8 ಕೊಂಚ ಅಡೆತಡೆಗಳ ಮೂಲಕವೇ ಅಂತ್ಯ ಕಂಡಿತ್ತು. ಇದಾದ ಬಳಿಕ ಬಿಗ್​ ಬಾಸ್​ ಮಿನಿ ಸೀಸನ್​ ಕೂಡ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದಾದ ಬಳಿಕ ಬಿಗ್​ ಬಾಸ್​ ಯಾವಾಗ ಸ್ಟಾರ್ಟ್​ ಆಗುತ್ತಪ್ಪಾ ಅಂತಾ ಅಭಿಮಾನಿಗಳು ಕಾತುರದಿಂದ ಕಾದಿದ್ದರು. ಇದೀಗ ಬಿಗ್​ ಬಾಸ್​ ಸೀಸನ್​ 9 ಕಾರ್ಯಕ್ರಮಕ್ಕೆ ಕಲರ್ಸ್ ಕನ್ನಡ ಸಜ್ಜಾಗುತ್ತಿದ್ದು ಪ್ರಿ ಪ್ರಾಡಕ್ಷನ್​ ಕಾರ್ಯಗಳ ಕುರಿತು ಕಲರ್ಸ್​ ಕನ್ನಡ ಚಾನೆಲ್​ ಬ್ಯುಸಿನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​​ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹೌದು..! ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಹೊಸದಾಗಿ ನಿರ್ಮಾಣವಾಗುತ್ತಿರುವ ಬಿಗ್​ ಬಾಸ್​ ಮನೆ ಎದುರು ಕ್ಲಿಕ್ಕಿಸಿಕೊಂಡಿರುವ ತಮ್ಮ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ಫೋಟೋಗೆ ನಿರ್ಮಾಣ ಹಂತದಲ್ಲಿದೆ ಎಂದು ಶೀರ್ಷಿಕೆ ನೀಡಿದ್ದಾರೆ . ಈ ಮೂಲಕ ಬಿಗ್​ ಬಾಸ್​ ಕನ್ನಡ ಸೀಸನ್​ 9 ಆರಂಭವಾಗುತ್ತೆ ಎಂಬ ಎಲ್ಲಾ ವರದಿಗಳಿಗೆ ಪರಮೇಶ್ವರ್​ ಗುಂಡ್ಕಲ್​ ಸಾಕ್ಷ್ಯ ನೀಡಿದಂತಾಗಿದೆ.


ಕಳೆದ ಬಾರಿ ಬಿಗ್​ ಬಾಸ್​ ಸೀಸನ್​​ 8 ಮುಗಿದ ಬಳಿಕ ಅದೇ ಮನೆಗೆ ಕಲರ್ಸ್​ ಕನ್ನಡ ವಾಹಿನಿಯ ಧಾರವಾಹಿಗಳಲ್ಲಿ ಕಾಣಿಸಿಕೊಳ್ಳುವವರನ್ನು ಕಳುಹಿಸಿ ಒಂದು ಮಿನಿ ಸೀಸನ್​ ಮಾಡಿದ್ದರು.ಆದರೆ ಈ ಬಾರಿ ಇದು ಉಲ್ಟಾ ಇರಲಿದೆ. ಆಗಸ್ಟ್​ ತಿಂಗಳಲ್ಲಿ ಬಿಗ್​ ಬಾಸ್​ ಮಿನಿ ಸೀಸನ್​ ಆರಂಭಗೊಳ್ಳಲಿದೆ. ಈ ಮಿನಿ ಸೀಸನ್​ನಲ್ಲಿ ಸೋಶಿಯಲ್​ ಮೀಡಿಯಾ ಇನ್​​ಫ್ಲೂಯೆನ್ಸರ್ಸ್ ಹಾಗೂ ಸೆಲೆಬ್ರಿಟಿಗಳು ಇರಲಿದ್ದಾರೆ ಎನ್ನಲಾಗಿದೆ. ಈ ಕಾರ್ಯಕ್ರಮ ವೂಟ್​ನಲ್ಲಿ ಪ್ರಸಾರವಾಗಲಿದೆ.


ಈ ಮಿನಿ ಸೀಸನ್​ ಅಕ್ಟೋಬರ್​ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಇದಾದ ಬಳಿಕ ಅಸಲಿ ಬಿಗ್​ ಬಾಸ್​ ಶೋ ಕಾರ್ಯಕ್ರಮ ಆರಂಭಗೊಳ್ಳಲಿದೆ. ಎರಡೂ ಕಾರ್ಯಕ್ರಮಗಳನ್ನು ನಟ ಕಿಚ್ಚ ಸುದೀಪರೇ ನಡೆಸಿಕೊಡ್ತಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದನ್ನು ಓದಿ : Actor Sudeep ವಿರುದ್ಧ ಅವಹೇಳನಕಾರಿ ಮಾತು : ಸೈಬರ್ ಕ್ರೈಂ ಮತ್ತು ಆಯುಕ್ತರಿಗೆ ಭಾಮಾ ಹರೀಶ್ ದೂರು

ಇದನ್ನೂ ಓದಿ : John Abraham Mike : ಚೊಚ್ಚಲ ಮಲಯಾಳಂ “ಮೈಕ್” ಸಿನಿಮಾದಲ್ಲಿ ಜಾನ್ಅಬ್ರಹಾಂ

bigg boss kannada 9 colors kannada business head parameshwar gundkal reveals bigg boss house is under construction

Comments are closed.