OPPO F21 Pro: ಒಪ್ಪೋ ಬ್ರ್ಯಾಂಡ್ ಮೊಬೈಲ್‌ಗಳಿಗೆ ಭಾರತದಲ್ಲಿ ಬಾರೀ ಬೇಡಿಕೆಯಿದೆ. ಅದ್ರಲ್ಲೂ ಒಪ್ಪೋ ಕಂಪೆನಿ ಅತ್ಯಾಧುನಿಕ ತಂತ್ರಜ್ಞಾನ, ವಿಶಿಷ್ಟವಾಗಿರುವ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದ್ರಲ್ಲೂ ಪೋಲ್ಡೇಬಲ್ ಪೋನ್ ಭಾರಿ ಸದ್ದು ಮಾಡುತ್ತಿದೆ.
ಒಪ್ಪೋ ಕಂಪೆನಿ ಮಾರುಕಟ್ಟೆಗೆ ಒಪ್ಪೋ ಎಫ್21 ಪ್ರೋ ( OPPO F21 Pro)ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪರಿಚಯಿಸಿದ್ದು, ಇದೀಗ ಈ ಸ್ಮಾರ್ಟ್ ಪೋನ್ ಮೇಲೆ ಬಾರೀ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಅದ್ರಲ್ಲೂ OPPO F21 Pro ಸ್ಮಾರ್ಟ್ ಪೋನ್ 8GB RAM, 64MP ಕ್ಯಾಮೆರಾ ಜೊತೆಗೆ ಅತ್ಯುತ್ತಮ ಪ್ರೊಸೆಸರ್ ಒಳಗೊಂಡಿದೆ.

Image Credit to Original Source
OPPO F21 Pro ಸ್ಮಾರ್ಟ್ ಪೋನ್ ಸಾಮಾಣ್ಯ ಬೆಲೆ 27,999 ರೂಪಾಯಿ. ಆದರೆ ಇದೀಗ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್‌ನಲ್ಲಿ ಈ ಮೊಬೈಲ್ ಪೋನ್ ಮೇಲೆ ಬಾರೀ ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ. ಈ ಆಫರ್‌ನಲ್ಲಿ ಕೇವಲ 19,980 ರೂ.ಗೆ ಅಂದರೆ ಬರೋಬ್ಬರಿ ಶೇ.28ರಷ್ಟು ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ : ಕೇವಲ 8 ಸಾವಿರಕ್ಕೆ 5G ಮೊಬೈಲ್, ಜೊತೆಗೆ 50MP ಕ್ಯಾಮೆರಾ : ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಭರ್ಜರಿ ಡಿಸ್ಕೌಂಟ್
ಜೊತೆಗೆ ವಿವಿಧ ಬ್ಯಾಂಕುಗಳ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಇನ್ನಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅದ್ರಲ್ಲೂ ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕುಗಳ ಭರ್ಜರಿ ಆಫರ್ ಘೋಷಣೆ ಮಾಡಿವೆ. ಪ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಈ ಸ್ಮಾರ್ಟ್ ಪೋನ್ ಖರೀದಿಸಿದ್ರೆ ಶೇ.5 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ.
ಅಲ್ಲದೇ ಪ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ನೀವು ಇಎಂಐ ಆಫರ್ ಕೂಡ ಪಡೆಯಬಹುದು. ಕ್ರೆಡಿಟ್ ಕಾರ್ಡ್ ಮೂಲಕ ಇಎಂಐ ಆಫರ್ ಪಡೆದ್ರೆ ಶೇ.5 ರಷ್ಟು ಹೆಚ್ಚುವರಿ ರಿಯಾಯಿತಿ ದೊರೆಯಲಿದೆ. ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್‌ನಲ್ಲಿ ಶೇ.10ರಷ್ಟು ರಿಯಾಯಿತಿ. ಪಡೆಯಬಹುದಾಗಿದೆ.
ಜೊತೆಗೆ EMI ಆಯ್ಕೆಯನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ. ಪ್ರತೀ ತಿಂಗಳು ಕೇವಲ 3,330 ರೂ. ಹೊರತಾಗಿ ಈ ಪೋನ್ ಗಳ ಖರೀದಿಯ ಮೇಲೆ ಇನ್ನಷ್ಟು ಆಫರ್‌ಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ.

Oppo F21 Pro ವೈಶಿಷ್ಟ್ಯಗಳು:
ಒಪ್ಪೋ ಹೊಸ ಪೋನ್ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಅದ್ರಲ್ಲೂ ಈ ಪೋನ್ 20:9ರ ಅನುಪಾತದಲ್ಲಿ 6.43-ಇಂಚಿನ AMOLED ಡಿಸ್ಪ್ಲೇಯನ್ನು ಒಳಗೊಂಡಿದೆ. 409ppi ಪಿಕ್ಸೆಲ್ ಸಾಂದ್ರತೆಯ ಜೊತೆಗೆ 1080 x 2400 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಒಳಗೊಂಡಿದೆ. ಜೊತೆಗೆ ಪೋನ್‌ನಲ್ಲಿ ಪಂಚ್ ಹೋಲ್ ಆಯ್ಕೆ ಒಳಗೊಂಡಿದ್ದು, ಸೆಲ್ಪಿ ಕ್ಯಾಮೆರಾ ಲೆನ್ಸ್ ಒಳಗೊಂಡಿದೆ.
ಇದನ್ನೂ ಓದಿ : ಕೇವಲ 16,399 ರೂ.ಗೆ ಖರೀದಿಸಿ Apple IPhone 12 : ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್
ಈ ಸ್ಮಾರ್ಟ್‌ಪೋನ್ Quad-Core Krio 265 2.4GHz ಮತ್ತು Quad-Core Krio 265 1.9GHz ಜೊತೆಗೆ ಅಕ್ಟಾ ಕೋರ್ ಸಿಪಿಯು ವೇಗವನ್ನು ಒಳಗೊಂಡಿದೆ. ಅದ್ರಲ್ಲೂ Qualcomm Snapdragon 680 ಬಳಕೆಯಾಗಲಿದೆ ಇನ್ನು 8GB RAM ಮತ್ತು Adreno 610 GPU ಪೋನ್ ಕಾರ್ಯನಿರ್ವಹಿಸಲಿದೆ.
ಇನ್ನು ಹಿಂಬದಿಯ ಕ್ಯಾಮೆರಾಗಳು ಕೂಡ ಅತ್ಯುತ್ತಮವಾಗಿದೆ. ಈ ಫೋನ್ ನ ಮತ್ತೊಂದು ವಿಶೇಷತೆಯೇ ಎಲ್‌ಇಡಿ ಫ್ಲ್ಯಾಷ್ ಮತ್ತು ಫೇಸ್ ಡಿಟೆಕ್ಷನ್ ಆಟೋಫೋಕಸ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. ಪ್ರಮುಖವಾಗಿ 64 ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಿದೆ.

ಜೊತೆಗೆ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಲೆನ್ಸ್ ಕ್ಯಾಮೆರಾ ಮತ್ತು ಸೆಲ್ಫಿ ಮತ್ತು ವೀಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಸ್ಮಾರ್ಟ್‌ಪೋನ್‌ನಲ್ಲಿ ಅಳವಡಿಸಲಾಗಿದೆ. ಜೊತೆಗೆ 4500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ನೀಡಲಾಗಿದ್ದು, 33W ಚಾರ್ಜಿಂಗ್ ಮೂಲಕ ವೇಗವಾಗಿ ಮೊಬೈಲ್ ಚಾರ್ಜಿಂಗ್ ಮಾಡಬಹುದಾಗಿದೆ.
OPPO F21 Pro With 8GB 64MP Camera BIG Discount Sale flipkart big billion day sale