Oppo Find N2 Flip : ಫೆಬ್ರವರಿ 15 ರಂದು ಮೊದಲ ಫೋಲ್ಡೇಬಲ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿರುವ ಓಪ್ಪೋ; ಹೇಗಿದೆ ಓಪ್ಪೋ ಫೈಂಡ್‌ N2 ಫ್ಲಿಪ್‌

ಸ್ಮಾರ್ಟ್‌ಪೋನ್‌ (Smartphone) ಪ್ರಪಂಚದಲ್ಲಿ ಗುಣಮಟ್ಟದ ಕ್ಯಾಮೆರಾದಿಂದ ಹೆಸರುವಾಸಿಯಾಗಿರುವ ಓಪ್ಪೋ (Oppo) ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಲೇ ಇದೆ. ಸ್ಮಾರ್ಟ್‌ ಸಾಧನಗಳ ಬ್ರ್ಯಾಂಡ್‌ ಆಗಿರುವ ಓಪ್ಪೋ, ಫ್ಲಿಪ್‌ ಶೈಲಿಯ ಪೋಲ್ಡೇಬಲ್‌ ಸ್ಮಾರ್ಟ್‌ಫೋನ್‌ (Oppo Find N2 Flip) ಅನ್ನು ಪರಿಚಯಿಸಲಿದೆ. ಇದು ಓಪ್ಪೋ ಕಂಪನಿ ಹೊರತರುತ್ತಿರುವ ಮೊದಲ ಫೋಲ್ಡೇಬಲ್‌ ಸ್ಮಾರ್ಟ್‌ಫೋನ್‌ (First Foldable Smartphone) ಆಗಿದೆ. ಕಂಪನಿ ಇದನ್ನು ಫೈಂಡ್‌ N2 ಫ್ಲಿಪ್‌ (Find N2 Flip) ಎಂದು ಹೆಸರಿಸಿದೆ. ಇದನ್ನು ಜಾಗತಿಕವಾಗಿ ಫೆಬ್ರವರಿ 15 ರಂದು ಲಂಡನ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಐದು ವರ್ಷಗಳ ಕಂಪನಿಯ R&D ‌ಪ್ರಯತ್ನದಿಂದ ಯಾವುದೇ ಕ್ರೀಸ್‌ಗಳಿಲ್ಲದ ಈ ಫೋಲ್ಡೇಬಲ್‌ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ತರಲು ಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ.

ಈಗ ಬಿಡುಗಡೆಗೆ ಸಿದ್ಧವಾಗಿರುವ ಹೊಸ ಓಪ್ಪೋ ಫೈಂಡ್‌ N2 ಫ್ಲಿಪ್ ಅನ್ನು ಫೋಲ್ಡೇಬಲ್‌ ಫೋನುಗಳ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಓಪ್ಪೋ ಹೇಳುತ್ತದೆ. ಈ ಫೋನ್‌ ಶಕ್ತಿಶಾಲಿ ಕ್ಯಾಮೆರಾ ಮತ್ತು ಬಳಕೆದಾರರಿಗೆ ಉತ್ತಮ ಅನುಭವ ನೀಡುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ : Lic Whatsapp Services : ಪಾಲಿಸಿದಾರರ ಗಮನಕ್ಕೆ : ಎಲ್‌ಐಸಿಯಿಂದ ವಾಟ್ಸಪ್‌ ಸೇವೆ ಕುಳಿತಲ್ಲೇ ಎಷ್ಟೆಲ್ಲಾ ಸೌಲಭ್ಯ!

ಸ್ಮಾರ್ಟ್‌ಫೋನ್‌ ತಯಾರಕರು ಫ್ಲಿಪ್‌ ಪೋನ್‌ಗಳಿಗೆ ಕಾಂಪ್ಯಾಕ್ಟ್‌ ಆಯಾಮಗಳು ಮತ್ತು ವಿಶಿಷ್ಟ ವಿನ್ಯಾಸ್ ಹೊಂದಿಸಿದ್ದಾರೆ. ಇದು ಫ್ಲಿಪ್‌ ಫೋನ‌್ನಲ್ಲಿ ಇದುವರೆಗಿನ ಅತಿದೊಡ್ಡ ಸ್ಕ್ರೀನ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಬೆಜೆಲ್-ಫ್ರೀ ವರ್ಟಿಕಲ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಅದು ದೊಡ್ಡ ಕ್ಯಾನ್ವಾಸ್‌, ವಿಜೆಟ್‌ಗಳು, ಬಹುಮುಖ ವ್ಯೂಫೈಂಡರ್‌ ಇದ್ದು, ಇದು ಉತ್ತಮ ಸೃಜನಶೀಲ ಛಾಯಾಗ್ರಹಣವನ್ನು ಉತ್ತೇಜಿಸುತ್ತದೆ. ಇಲ್ಲಿಯವರೆಗೆ ಕಂಪನಿಯು ಹೆಚ್ಚಿನ ಒಳನೋಟವನ್ನು ಬಹಿರಂಗಪಡಿಸಿಲ್ಲ. ಈ ಸ್ಮಾರ್ಟ್‌ಪೋನ್‌ #SeeMoreInASnap ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ರೆಂಡಿಂಗ್‌ನಲ್ಲಿದೆ. ಈ ಹ್ಯಾಂಡ್‌ಸೆಟ್‌ನ ಅಧಿಕೃತ ಬಿಡುಗಡೆಯನ್ನು ವೀಕ್ಷಿಸಲು ಆಸಕ್ತಿ ಹೊಂದಿರುವವರು ಓಪ್ಪೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಓಪ್ಪೋದ ಫೈಂಡ್‌ N2 ಪ್ಲಿಪ್‌ ಸ್ಮಾರ್ಟ್‌ಫೋನ್‌ ಈಗಾಗಲೇ ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ Z ಸರಣಿಯ ಫ್ಲಿಪ್‌ ಮತ್ತು ಫೋಲ್ಡ್‌ ಮೊಬೈಲ್‌ನೊಂದಿಗೆ ಕಠಿಣ ಸ್ಪರ್ಧೆಯನ್ನು ಎದುರಿಸಲಿದೆ. ಈ ಫೋನ್‌ನ ಹೆಚ್ಚಿನ ಮಾಹಿತಿ ಬಿಡುಗಡೆಯ ನಂತರವೇ ತಿಳಯಲಿದೆ.

ಇದನ್ನೂ ಓದಿ : International Epilepsy Day : ಅಂತರಾಷ್ಟ್ರೀಯ ಅಪಸ್ಮಾರ ದಿನ : ಇದು ಮಾನಸಿಕ ಕಾಯಿಲೆ ಅಲ್ಲ; ಮೆದುಳಿನ ಅಸ್ವಸ್ಥತೆ

(Oppo Find N2 Flip is ready to launch on February 15. what we can expect?)

Comments are closed.