Post Office Gram Suraksha Yojana : ರೈತರಿಗೆ ಗುಡ್‌ ನ್ಯೂಸ್‌ : ಪ್ರತಿನಿತ್ಯ 50 ರೂ.ಹೂಡಿಕೆ ಮಾಡಿ 35 ಲಕ್ಷ ಲಾಭ ಪಡೆಯಿರಿ

ನವದೆಹಲಿ : ಭಾರತೀಯ ಅಂಚೆ ಕಚೇರಿ ತನ್ನ ಗ್ರಾಹಕರಿಗೆ ಅನೇಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದರಿಂದಾಗಿ ಫೋಸ್ಟ್‌ ಆಫೀಸ್‌ನ ಹೆಚ್ಚಿನ ಯೋಜನೆಗಳು ಸಾಕಷ್ಟು ಜನಪ್ರಿಯತೆಯನ್ನು ಹೊಂದಿವೆ. ಏಕೆಂದರೆ ಅವು ಜನರಿಗೆ ಉತ್ತಮ ಲಾಭವನ್ನು ನೀಡುತ್ತದೆ. ಅಂತಹದೇ ಒಂದು ಅಂಚೆ ಕಚೇರಿಯ (Post Office Gram Suraksha Yojana) ವಿಶೇಷ ಯೋಜನೆಯ ಬಗ್ಗೆ ನಾವು ಒಂದು ತಿಳಿಯೋಣ.

ವಿಶೇಷವಾಗಿ ಹಳ್ಳಿ ಮತ್ತು ಗ್ರಾಮಗಲ್ಲಿ ವಾಸಿಸುತ್ತಿರುವ ರೈತರಿಗೆ ಈ ಯೋಜನೆ ಜಾರಿಗೆ ತರಲಾಗಿದೆ. ಇದರ ಹೆಸರು ಪೋಸ್ಟ್ ಆಫೀಸ್ ಗ್ರಾಮ್ ಸುರಕ್ಷಾ ಯೋಜನೆ ಆಗಿದೆ. ಇದರ ಹೆಸರೇ ಹೇಳುವಂತೆ ಈ ಯೋಜನೆಯು ಸಾಕಷ್ಟು ಜನಪ್ರಿಯತೆ ಹೊಂದಿದೆ. ಗ್ರಾಮೀಣ ಜನರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲೀಕರಣ ಮಾಡುವ ಉದ್ದೇಶ ಈ ಯೋಜನೆ ಹೊಂದಿದೆ. ಇದರ ಪ್ರಮುಖ ವಿಷಯವೆಂದರೆ ಇದರಲ್ಲಿ ನೀವು ಪ್ರತಿದಿನ ಕೇವಲ 50 ರೂಪಾಯಿಗಳನ್ನು ಹೂಡಿಕೆ ಮಾಡಬೇಕು ಮತ್ತು ನಂತರ ನೀವು ಅತ್ಯುತ್ತಮವಾದ ಆದಾಯವನ್ನು ಪಡೆಯಬಹುದಾಗಿದೆ.

ಗ್ರಾಮ ಸುರಕ್ಷಾ ಯೋಜನೆಯ ಲಾಭ ಪಡೆಯುವುದು ಹೇಗೆ ?
ಈ ಯೋಜನೆಯಲ್ಲಿ ನೀವು ನಿತ್ಯ 50 ರೂಪಾಯಿ ಅಂದರೆ ತಿಂಗಳಿಗೆ 1500 ರೂಪಾಯಿ ಹೂಡಿಕೆ ಮಾಡಬೇಕು. ಈ ರೀತಿಯಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ 31 ಲಕ್ಷದಿಂದ 35 ಲಕ್ಷ ರೂಪಾಯಿಗಳಷ್ಟು ಮೊತ್ತವನ್ನು ಮರಳಿ ಪಡೆಯಬಹುದು. ಹೂಡಿಕೆದಾರರು ಒಂದು ವೇಳೆ ತನ್ನ 80 ವರ್ಷ ವಯಸ್ಸಿನಲ್ಲಿ ಮರಣಹೊಂದಿದರೆ, ಅವರ ನಾಮಿನಿಗೆ ಬೋನಸ್‌ ಸೇರಿದಂತೆ ಹೂಡಿಕೆಯ ಸಂಪೂರ್ಣ ಮೊತ್ತ ಸಿಗುತ್ತದೆ. ಈ ಯೋಜನೆಯಲ್ಲಿ 19 ವರ್ಷದಿಂದ 55 ವರ್ಷಗಳವರೆಗೆ ಭಾರತದ ಯಾವುದೇ ನಾಗರಿಕರು ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದರಲ್ಲಿ ಕನಿಷ್ಠ 1,000 ರಿಂದ 10 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಪ್ರೀಮಿಯಂ ಪಾವತಿಸಲು ಹಲವು ಆಯ್ಕೆಗಳನ್ನೂ ನೀಡಲಾಗುತ್ತದೆ. ಹೂಡಿಕೆದಾರರು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಕಂತನ್ನು ಪಾವತಿಸಬಹುದು.

ಈ ಯೋಜನೆಯ ಹಣವನ್ನು ಮರಳಿ ಪಡೆಯುವುದು ಯಾವಾಗ ?
ಇದರಲ್ಲಿ ಹೂಡಿಕೆದಾರರಿಗೆ 55 ವರ್ಷಗಳಲ್ಲಿ 31,60,000 ರೂ. 58 ನೇ ವಯಸ್ಸಿನಲ್ಲಿ 33,40,000 ಮತ್ತು 60ನೇ ವಯಸಿನಲ್ಲಿ 34.60 ಲಕ್ಷ ಸಿಗುತ್ತವೆ. 80 ವರ್ಷಗಳು ಪೂರ್ಣಗೊಂಡ ನಂತರ ಸಂಪೂರ್ಣ ಮೊತ್ತವನ್ನು ನೀಡಲಾಗುತ್ತದೆ.

ಇದನ್ನೂ ಓದಿ : Banana Price Hike : ಬಾಳೆಹಣ್ಣಿನ ಬೆಲೆ ಡಜನ್ ಗೆ 80 ರೂಪಾಯಿ : ಬೆಲೆ ಕೇಳಿ ಸುಸ್ತಾದ ಗ್ರಾಹಕರು

ಇದನ್ನೂ ಓದಿ : Pan – Aadhar Link Status : ಕೇಂದ್ರ ಸರಕಾರದಿಂದ ಅಧಿಸೂಚನೆ : ಇದನ್ನು ಮಾಡದಿದ್ದರೆ, 13 ಕೋಟಿ ಪ್ಯಾನ್ ಕಾರ್ಡ್ ರದ್ದು

ಇದನ್ನೂ ಓದಿ : ರೈಲು ಪ್ರಯಾಣದ ಸಮಯದಲ್ಲಿ ನಿಮ್ಮ ಆಹಾರವನ್ನು ವಾಟ್ಸಪ್ ಮೂಲಕ ಆರ್ಡರ್ ಮಾಡಿ. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಈ ಯೋಜನೆಯಲ್ಲಿ ಸಾಲ ಸೌಲಭ್ಯವು ಲಭ್ಯ :
ಗ್ರಾಮ ಸುರಕ್ಷಾ ಯೋಜನೆಯನ್ನು ಖರೀದಿಸಿದ ನಂತರ ನೀವು ಸಾಲವನ್ನು ಸಹ ಪಡೆಯಬಹುದು. ಪಾಲಿಸಿಯನ್ನು ಖರೀದಿಸಿದ ದಿನಾಂಕದಿಂದ 4 ವರ್ಷಗಳ ನಂತರ ಸಾಲವನ್ನು ಪಡೆಯಬಹುದು. ಇದರ ಹೊರತಾಗಿ, ಪಾಲಿಸಿಯ ಅವಧಿಯಲ್ಲಿ ಪ್ರೀಮಿಯಂ ಪಾವತಿಸಲು ಡೀಫಾಲ್ಟ್ ಆಗಿದ್ದರೆ, ಬಾಕಿ ಇರುವ ಪ್ರೀಮಿಯಂ ಮೊತ್ತವನ್ನು ಪಾವತಿಸುವ ಮೂಲಕ ನೀವು ಅದನ್ನು ಮತ್ತೆ ಪ್ರಾರಂಭಿಸಬಹುದು.

Post Office Gram Suraksha Yojana: Good news for farmers: Invest Rs 50 daily and get 35 lakh profit

Comments are closed.