covid guidelines: ಕೋವಿಡ್​ ಮಾರ್ಗಸೂಚಿ ವಿಚಾರದಲ್ಲಿ ಅಡಕತ್ತರಿಗೆ ಸಿಲುಕಿದ ರಾಜ್ಯ ಸರ್ಕಾರ

ಬೆಂಗಳೂರು :covid guidelines:ಕೊರೊನಾ ಮೂರನೇ ಅಲೆಯ ಭಯವು ದೇಶಾದ್ಯಂತ ಮಿತಿಮೀರುತ್ತಲೇ ಇದೆ. ಇದ್ದ ರಾಜ್ಯದಲ್ಲೂ ಸಹ ಕೊರೊನಾ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಂಡುಬರುತ್ತಲೇ ಇದೆ.ಬೆಂಗಳೂರಿನಲ್ಲಂತೂ ಕೋವಿಡ್​ ಸೋಂಕು ತಹಬದಿಗೆ ಬರುವಂತೆ ಕಾಣುತ್ತಿಲ್ಲ. ಈ ಎಲ್ಲದರ ನಡುವೆ ರಾಜ್ಯ ಸರ್ಕಾರವು ವೀಕೆಂಡ್​ ಕರ್ಫ್ಯೂ, ಲಾಕ್​ಡೌನ್​ನಂತಹ ಅಸ್ತ್ರವನ್ನು ಬಳಕೆ ಮಾಡಿ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಬೇಕಾ..? ಅಥವಾ ಮಾರ್ಗಸೂಚಿಗಳನ್ನು ಸಡಿಲ ಮಾಡಿ ಜನರ ಆರ್ಥಿಕ ಬೆಳವಣಿಗೆಗೆ ಕಷ್ಟವಾಗದಂತೆ ನೋಡಿಕೊಳ್ಳಬೇಕಾ ಎಂಬ ಗೊಂದಲದಲ್ಲಿದೆ.


ಈಗಾಗಲೇ ಸಾಕಷ್ಟು ಉದ್ಯಮಿಗಳು ಹಾಗೂ ವ್ಯಾಪಾರಿಗಳು ನೀವು ಏನು ಬೇಕಿದ್ದರೆ ಮಾಡಿ ಆದರೆ ಸೋಂಕು ತಡೆಯುವ ನೆಪದಲ್ಲಿ ಲಾಕ್​ಡೌನ್​ ಮಾತ್ರ ಮಾಡಿ ನಮ್ಮ ಆದಾಯಕ್ಕೆ ಕುತ್ತು ತರಬೇಡಿ ಎಂದು ಸಾಕಷ್ಟು ಜನರು ಸರ್ಕಾರದ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನಾಳೆ ವಿವಿಧ ವಲಯಗಳ ಉದ್ಯಮಿಗಳ ಜೊತೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಂತಿಮ ಹಂತದ ಸಭೆಯನ್ನು ನಡೆಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.


ರಾಜ್ಯ ಸರ್ಕಾರ ಜಾರಿಗೆ ತಂದಿರುವ ವೀಕೆಂಡ್​ ಕರ್ಫ್ಯೂವಿಗೆ ಆಡಳಿತ ಪಕ್ಷದಲ್ಲಿಯೇ ಅಸಮಾಧಾನ ವ್ಯಕ್ತವಾಗುತ್ತಲೇ ಇದೆ. ಆದರೆ ಸಿಎಂ ಬೊಮ್ಮಾಯಿಗೆ ಮಾತ್ರ ಜನರ ಕಷ್ಟವನ್ನು ಆಲಿಸಬೇಕಾ ಅಥವಾ ತಜ್ಞರ ಮಾತಿಗೆ ಬೆಲೆ ನೀಡಬೇಕಾ ಎಂಬುದೇ ಗೊಂದಲವಂತೆ. ಲಾಕ್​ಡೌನ್​, ಕರ್ಫ್ಯೂಗಳನ್ನು ತೆರವು ಮಾಡಿ ಸೋಂಕು ಹೆಚ್ಚಾದರೆ ಎಂಬ ಭಯ ಒಂದೆಡೆಯಾದರೆ ಜನರನ್ನು ಆರ್ಥಿಕ ಸಂಕಷ್ಟಕ್ಕೆ ನೂಕಬೇಕಾ ಎಂಬ ಆತಂಕ ಮತ್ತೊಂದೆಡೆ ಮನೆ ಮಾಡಿದೆ.


ಇನ್ನು ಇದರ ಜೊತೆಯಲ್ಲಿ ಪಂಚರಾಜ್ಯಗಳ ಚುನಾವಣೆ ಬೇರೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ಕರ್ಫ್ಯೂವನ್ನು ಜಾರಿ ಮಾಡಿದರೆ ಪಕ್ಷದ ಪ್ರಚಾರಕ್ಕೆ ಭಾರೀ ದೊಡ್ಡ ಹೊಡೆತ ಬೀಳುತ್ತದೆ. ಹೀಗಾಗಿ ರಾಜ್ಯದಲ್ಲಿ ಕರ್ಫ್ಯೂ ಎಲ್ಲಾ ಏನೂ ಬೇಡ ಎಂದು ಬಿಜೆಪಿ ಹೈಕಮಾಂಡ್​ಕೂಡ ಹೇಳಿದೆ ಎನ್ನಲಾಗಿದೆ.

karnataka cm basavaraj bommai in dilemma as to continue covid guidelines or to spare the businessmen from a certain collapse of business

ಇದನ್ನು ಓದಿ : School Reopen ಗೆ ಖಾಸಗಿ ಶಾಲೆಗಳ ಒತ್ತಡ, ಲಸಿಕೆ ಪಡೆಯದ ಮಕ್ಕಳ ಮೇಲೆ ಪ್ರಯೋಗ : ಸರಕಾರದ ವಿರುದ್ದ ಪೋಷಕರ ಆಕ್ರೋಶ

ಇದನ್ನೂ ಓದಿ : PUC 2022 Exam : ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

Comments are closed.