Oppo Watch Free: ಒಪ್ಪೋ ಸ್ಮಾರ್ಟ್‌ವಾಚ್; 72 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆದರೆ 14 ದಿನ ಹೆದರಿಕೆಯಿಲ್ಲ, ಬೆಲೆಯೆಷ್ಟು?

ಪ್ರತಿಷ್ಠಿತ ಚೀನಾ ಸ್ಮಾರ್ಟ್ ಫೋನ್ ಕಂಪೆನಿ ಒಪ್ಪೋ ತನ್ನ ಒಪ್ಪೋ ರೇನೋ 7 (Oppo Reno 7 )ಸರಣಿಯ ಜೊತೆಗೆ, ಭಾರತದಲ್ಲಿ ವಾಚ್ ಫ್ರೀ ಫಿಟ್ನೆಸ್ ಟ್ರ್ಯಾಕರ್ ಅನ್ನು ಸಹ ಪ್ರಾರಂಭಿಸುತ್ತಿದೆ. ಒಪ್ಪೋ ಇನ್ನೂ ಪೂರ್ಣ ವೈಶಿಷ್ಟ್ಯದ ಸೆಟ್ ಅಥವಾ ನಿರೀಕ್ಷಿತ ಬೆಲೆಯನ್ನು ಬಹಿರಂಗಪಡಿಸಿಲ್ಲ. ವಾಚ್ ಫ್ರೀ (Oppo Watch Free) ಜಾಗತಿಕ ಮಾರುಕಟ್ಟೆಗಳಲ್ಲಿ ಈಗ ಸ್ವಲ್ಪ ಸಮಯದಿಂದ ಲಭ್ಯವಿದೆ.

ಒಪ್ಪೋ ವಾಚ್ ಫ್ರೀ ದೀರ್ಘವಾದ ಆಯತಾಕಾರದ ಪ್ರದರ್ಶನದೊಂದಿಗೆ ಹುವೈ (Huawei )ಬ್ಯಾಂಡ್ ವಾಚ್‌ಗಳಂತೆ ಕಾಣುತ್ತದೆ. ಚೀನಾದಲ್ಲಿ, ವಾಚ್ ಫ್ರೀ ಅನ್ನು ಸಿಎನ್ ವೈ 549 (ಅಂದಾಜು ರೂ. 6,200) ಬೆಲೆಯಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಇದು ಗೋಲ್ಡ್ ಹಾಗೂ ಕಪ್ಪು ಎರಡು ಬಣ್ಣಗಳಲ್ಲಿ ಬರುತ್ತದೆ. ಭಾರತದಲ್ಲಿ ಸಹ ವಾಚ್ ಇದೇ ಬೆಳೆಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಬಿಡಿ ಭಾಗಗಳ ಬೆಲೆ ಜಾಸ್ತಿಯಾಗಿದೆ.

ಒಪ್ಪೋ ವಾಚ್ ಸ್ಪೆಸಿಫಿಕೇಶನ್
ಒಪ್ಪೋ ಫ್ರೀ ವಾಚ್ ಸ್ಟಾರ್ ವೈಶಿಷ್ಟ್ಯವು 2.5D ಬಾಗಿದ ಗಾಜಿನೊಂದಿಗೆ ಅದರ 1.6-ಇಂಚಿನ ಅಮೋಲ್ಡ್ ಟಚ್‌ಸ್ಕ್ರೀನ್ ಡಿಸ್ಪ್ಲೇ ಆಗಿದೆ. ನಿಮ್ಮ ಸ್ಮಾರ್ಟ ವಾಚ್ ನಿಂದ ನೋಟಿಫಿಕೇಶನ್ ಬೇರೆಡೆಗೆ ತಿರುಗಿಸುವ ಇ-ಸ್ಪೋರ್ಟ್ಸ್ ಮೋಡ್ ಅನ್ನು ಇದು ಹೊಂದಿದೆ. ಅಷ್ಟೇ ಅಲ್ಲದೇ ಸ್ಮಾರ್ಟ್‌ಫೋನ್ ನೋಟಿಫಿಕೇಶನ್ ಬೆಂಬಲಿಸುವ ಸ್ವಾಮ್ಯದ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡಲು ಈ ಡಿಸ್‌ಪ್ಲೇಯನ್ನು ಬಳಸಲಾಗುತ್ತದೆ. ಈ ವಾಚ್ ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಮತ್ತು ವಾಯ್ಸ್ ರೆಕಾಗ್ನಿಶನ್ ಸಹ ಮಾಡುತ್ತದೆ. ಆದರೂ ಜಾಗತಿಕ ಮಾದರಿಗಳು ಗೂಗಲ್ ಅಸಿಸ್ಟೆಂಟ್ ಅಥವಾ ಅಲೆಕ್ಸಾವನ್ನು ಬೆಂಬಲಿಸುತ್ತವೆಯೇ ಎಂದು ನೋಡಬೇಕಾಗಿದೆ. ಬಳಕೆದಾರರು ಹೆಚ್ಚುವರಿಯಾಗಿ, ವಾಚ್ ಫ್ರೀ ಟ್ರ್ಯಾಕಿಂಗ್‌ಗಾಗಿ 100 ಕ್ರೀಡಾ ವಿಧಾನಗಳನ್ನು ಪಡೆಯುತ್ತದೆ. ಇದು ನಿದ್ರೆಯ ಟ್ರ್ಯಾಕಿಂಗ್, ಗೊರಕೆ ವಿಶ್ಲೇಷಣೆ, ಕುಳಿತುಕೊಳ್ಳುವ ಜ್ಞಾಪನೆಗಳು, ದೈನಂದಿನ ಚಟುವಟಿಕೆ ಮತ್ತು ಹೆಚ್ಚಿನವುಗಳೊಂದಿಗೆ ಹೃದಯ ಬಡಿತದ ಮೇಲ್ವಿಚಾರಣೆ ಮತ್ತು ಓಕ್ಸಿಜನ್ ಮಾನಿಟರಿಂಗ್ ಅನ್ನು ಸಹ ಮಾಡುತ್ತದೆ. ಗಡಿಯಾರವು ಆಂಬಿಯೆಂಟ್ ಲೈಟ್ ಸೆನ್ಸರ್ ಅನ್ನು ಸಹ ಹೊಂದಿದೆ.ಇದು ಡಿಸ್ಪ್ಲೇಯ ಆಟೋ ಬ್ರೈಟ್ನೆಸ್ ವೈಶಿಷ್ಟ್ಯದಂತಹ ಫೀಚರ್ ಒಳಗೊಂಡಿದೆ.

ಇವೆಲ್ಲವೂ 230ಎಂಎಎಚ್ ಬ್ಯಾಟರಿಯ ಮೇಲೆ ಅವಲಂಬಿತವಾಗಿದೆ. ಇದು ಒಂದೇ ಚಾರ್ಜ್‌ನಲ್ಲಿ 14 ದಿನಗಳವರೆಗೆ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಒಪ್ಪೋ ಹೇಳುತ್ತದೆ. 75 ನಿಮಿಷಗಳಲ್ಲಿ ವಾಚ್ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಒಪ್ಪೋ ಹೇಳಿದೆ.

ಕಳೆದ ವರ್ಷದ ಆರಂಭದಲ್ಲಿ ಅತ್ಯಂತ ಕೈಗೆಟುಕುವ ದರದಲ್ಲಿ ಬಿಡುಗಡೆಯಾದ ಒಪ್ಪೋ ಬ್ಯಾಂಡ್ ಸುಮಾರು ಒಂದು ವರ್ಷದ ನಂತರ ವಾಚ್ ಫ್ರೀ ಬರುತ್ತದೆ. ಒಪ್ಪೋ ತನ್ನ ವಾಚ್ ಅನ್ನು 2020 ರಲ್ಲಿ ಬಿಡುಗಡೆ ಮಾಡಿತ್ತು, ಅದನ್ನು ನಂತರ 2021 ರಲ್ಲಿ ಕೆಲವು ವೈಶಿಷ್ಟ್ಯಗಳೊಂದಿಗೆ ನವೀಕರಿಸಲಾಯಿತು.

ಇದನ್ನೂ ಓದಿ: Indian Smartphone OS: ಆಂಡ್ರಾಯ್ಡ್ ಹಾಗೂ ಐಓಎಸ್ ಗೆ ಪ್ರತಿಸ್ಪರ್ಧಿಯಾಗಿ ಭಾರತೀಯ ಒಎಸ್! ಮೇಡ್ ಇನ್ ಇಂಡಿಯಾ ತಂತ್ರಾಂಶ ತಯಾರಿಗೆ ಕೇಂದ್ರದ ಒಲವು

ಇದನ್ನೂ ಓದಿ: Micromax In Note 2: ಮೈಕ್ರೊಮ್ಯಾಕ್ಸ್ ಇನ್ ನೋಟ್ 2 ಬಿಡುಗಡೆ; ರೂ 13,490 ಕ್ಕೆ ಉತ್ತಮ ಸ್ವದೇಶಿ ಫೋನ್

(Oppo Watch Free launching in India read price and specification)

Comments are closed.