ಸೋಮವಾರ, ಏಪ್ರಿಲ್ 28, 2025
HometechnologyPink Moon 2022: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪಿಂಕ್‌ ಮೂನ್‌ ಫೋಟೊ ತೆಗೆಯಬೇಕೆ? ಹಾಗಾದರೆ ಈ 10...

Pink Moon 2022: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪಿಂಕ್‌ ಮೂನ್‌ ಫೋಟೊ ತೆಗೆಯಬೇಕೆ? ಹಾಗಾದರೆ ಈ 10 ಟಿಪ್ಸ್‌ ಪಾಲಿಸಿ

- Advertisement -

ಭಾರತದಲ್ಲಿ ಏಪ್ರಿಲ್‌ ತಿಂಗಳ ಫುಲ್‌ ಮೂನ್‌(ಹುಣ್ಣಿಮೆ ಚಂದ್ರ) ಇದೇ ಏಪ್ರಿಲ್‌ 17 ಮಧ್ಯರಾತ್ರಿ 12:25 ಕ್ಕೆ ಕಾಣಿಸಲಿದೆ. ನೀವು ಚಂದ್ರನ ಈ ಪಿಂಕ್‌ ಅವತಾರವನ್ನು(Pink Moon 2022) ಸೆರೆಹಿಡಿಯಲು ಬಯಸಿದ್ದೀರಾ? ಇದಕ್ಕೆ DSLR ಕ್ಯಾಮರಾ ಉತ್ತಮ. ಆದರೆ, ನಿಮ್ಮ ಹತ್ತಿರ ಕ್ಯಾಮರಾವಿಲ್ಲ, ಸ್ಮಾರ್ಟ್‌ಫೋನ್‌ ಮಾತ್ರವಿದೆ ಎಂದಾದರೆ ಇಲ್ಲಿ ಹೇಳಿರುವ ಕೆಲವು ಟಿಪ್ಸ್‌ ಪಾಲಿಸುವುದರಿಂದ ಉತ್ತಮ ಫೋಟೋ ತೆಗೆಯಬಹುದು.

  1. ಸರಿಯಾದ ಜಾಗ ಹುಡುಕಿ
    ಫೋಟೋ ತೆಗೆಯಲು ಸಂಪೂರ್ಣ ಕತ್ತಲೆಯಿರುವ, ಎತ್ತರದ ಜಾಗ ಹುಡುಕಿಕೊಳ್ಳಿ. ಅಲ್ಲಿ ಯಾವುದೇ ಅಡತಡೆಗಳು ಅಂದರೆ ವೈರ್‌, ಕಂಬಗಳು, ಮರ ಇತ್ಯಾದಿ ಇಲ್ಲವೆಂದು ಖಚಿತಪಡಿಸಿಕೊಳ್ಳಿ.
  1. ಟ್ರೈ ಪಾಡ್‌ ಬಳಕೆ
    ಸ್ಥಿರ ಮತ್ತು ಬ್ಲರ್‌ ಫ್ರೀ ಫೋಟೋಗಾಗಿ ಟ್ರೈ ಪಾಡ್‌ ಬಳಸಿ.
  2. ಸ್ಪ್ಲಾಶ್‌ ಹಾಕಬೇಡಿ, ಅದು ನಿಮ್ಮ ಫೋಟೋ ಹಾಳು ಮಾಡಬಹುದು
    ಚಂದ್ರ, ಭೂಮಿಯಿಂದ 3,84,400 ಕಿಲೋಮೀಟರ್‌ ದೂರವಿರುವುದರಿಂದ ಫ್ಲಾಶ್‌ ಹಾಕಿದರೆ ಏನೂ ಪ್ರಯೋಜನವಿಲ್ಲ. ಅದಕ್ಕಾಗಿ ಫ್ಲಾಶ್‌ ಆಪ್‌ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇಲ್ಲವಾದರೆ, ಫ್ಲಾಶ್‌ ದೂಳಿನ ಕಣಗಳ ಮೇಲೆ ಬೆಳಕು ಹರಡಿ ನೀವು ತೆಗೆದ ಫೋಟೋ ಹಾಳಾಗಬಹುದು.
  3. HDR ಮೋಡ್‌ನಲ್ಲಿ ಪೋಟೋ ಸೆರೆಹಿಡಿಯಿರಿ
    HDR ಮೋಡ್‌ ಅನ್ನು ಎನೇಬಲ್‌ ಮಾಡಿದ್ದೀರೆಂದು ಖಚಿತಪಡಿಸಿಕೊಳ್ಳಿ. HDR ಇಮೇಜ್‌ನ ಕ್ವಾಲಿಟಿಯನ್ನು ಹೆಚ್ಚಿಸುತ್ತದೆ ಮತ್ತು ಇದು ಚಂದ್ರನ ಉತ್ತಮ ಚಿತ್ರ ತೆಗೆಯಲು ಸಹಾಯಮಾಡುತ್ತದೆ.
  4. ಬಿಲ್ಟ್–ಇನ್‌ ಟೈಮರ್‌ ಬಳಸಿ ಅಥವಾ ಶಟರ್‌ ಬಳಸಿ
    ಯಾವಾಗಲೂ ದೂರದ ಚಿತ್ರಗಳನ್ನು ಸೆರೆಹಿಡಿಯಲು ಬಿಲ್ಟ್‌–ಇನ್‌ ಟೈಮರ್‌ ಬಳಸಿ ಅಥವಾ ಶಟರ್‌ ಸ್ಪೀಡ್‌ ಸೆಟ್‌ ಮಾಡಿ. ಇದು ಕ್ಲಿಯರ್‌, ಶಾರ್ಪ್‌ ಮತ್ತು ಶೇಕ್‌ ಆಗದ ಫೋಟೋ ತೆಗೆಯಲು ಸಹಾಯಮಾಡುತ್ತದೆ.
  5. ಆಪ್ಟಿಕಲ್‌ ಝೂಮ್‌ ಬಳಕೆ ಮಾಡಿ
    ಡಿಜಿಟಲ್‌ ಝೂಮ್‌ ಇಮೇಜ್‌ನ ಕ್ವಾಲಿಟಿ ಕಡಿಮೆ ಮಾಡುತ್ತದೆ. ಆದ್ದರಿಂದ ಆಪ್ಟಿಕಲ್‌ ಝೂಮ್‌ ಅನ್ನೇ ಬಳಸಿ. ಹೆಚ್ಚಿನ ಆಧುನಿಕ ಸ್ಮಾರ್ಟ್‌ಫೋನ್‌ಗಳು 2X ಅಥವಾ 3X ಆಪ್ಟಿಕಲ್‌ ಜೂಮ್‌ ಸೆನ್ಸಾರ್‌ ಅಳವಡಿಸಿದೆ.
  6. ಸ್ಮಾರ್ಟ್‌ಫೋನ್‌ಲ್ಲಿರುವ ಫುಲ್‌ ರೆಸಲ್ಯುಷನ್‌ನ ಬಳಕೆ ಮಾಡಿ
    ಹೆಚ್ಚಿನ ಆಧುನಿಕ ಸ್ಮಾರ್ಟ್‌ಫೋನ್‌ಗಳು 64MP ಅಥವಾ 50MP ಅಥವಾ 108MP ಸೆನ್ಸಾರ್‌ ಇರುವ ಫುಲ್‌ ರೆಸಲ್ಯುಷನ್‌ ನಿಂದ ಕೂಡಿದೆ. ಸಾಧ್ಯವಾದರೆ ಫುಲ್‌ ರೆಸಲ್ಯುಷನ್‌ ಮೋಡ್‌ ಗೆ ಬದಲಾಯಿಸಿಕೊಂಡು ಉತ್ತಮ ಫೋಟೊ ಸೆರೆಹಿಡಿಯಿರಿ.
  7. ಚಂದ್ರನನ್ನೇ ಫೋಕಸ್‌ ಮಾಡಿ
    ಫೋಟೋ ತೆಗೆಯಬೇಕಾದರೆ, ಚಂದ್ರನ ಮೇಲೆ ಟ್ಯಾಪ್‌ ಮಾಡಿ ಮತ್ತು ಅದನ್ನೇ ಒತ್ತಿ ಹಿಡಿಯುವುದರ ಮೂಲಕ ಫೋಕಸ್‌ ಮಾಡಿ. ಇದು ಚಂದನೇ ಫೋಕಸ್‌ ಆಗಿದ್ದಾನೆ ಎಂದು ಹೇಳುತ್ತದೆ.
  1. ಎಕ್ಸಫೋಸರ್‌ ಕಡಿಮೆ ಮಾಡಿ
    ಮೂನ್‌ ಮೇಲೆ ಟ್ಯಾಪ್‌ ಮಾಡಿ ಎಕ್ಸಫೊಸರ್‌ ಕಂಟ್ರೋಲ್‌ ಆಯ್ದುಕೊಳ್ಳಿ, ಮತ್ತು ಅದನ್ನು ಮಿನಿಮಮ್‌ಗೆ ಸೆಟ್‌ ಮಾಡುವುದರ ಮೂಲಕ ಕಡಿಮೆ ಮಾಡಿ.
  2. ಟೈಮ್‌ಲಾಪ್ಸ್‌ ವಿಡಿಯೋ ರಚಿಸಿ
    ನೀವು ಬೇಕಾದರೆ ಟೈಮ್‌ಲಾಪ್ಸ್‌ ವಿಡಿಯೋ ರೆಕಾರ್ಡ್‌ ಮಾಡಿಕೊಳ್ಳಬಹುದು ಇದು ಸಿನೆಮೆಟಿಕ್‌ ಅನುಭವ ನೀಡುತ್ತದೆ.

ಇದನ್ನೂ ಓದಿ : Google Lens : ಡೆಸ್ಕ್‌ಟಾಪ್‌ ಕ್ರೋಮ್‌ನಲ್ಲಿಯ ಗೂಗಲ್‌ ಲೆನ್ಸ್‌ ಹೇಗೆಲ್ಲಾ ಕೆಲಸ ಮಾಡುತ್ತದೆ ಗೊತ್ತೇ?

ಇದನ್ನೂ ಓದಿ : Cut Noise on Twitter: ಟ್ವಿಟರ್‌ನಲ್ಲಿ ನಿಮ್ಮದೇ ಒಂದು ಲಿಸ್ಟ್‌ ಕ್ರಿಯೇಟ್‌ ಮಾಡಿಕೊಳ್ಳಿ: ಗದ್ದಲಗಳಿಂದ ದೂರವಿರಿ!

(Pink Moon 2022 How to capture pink moon at dark night)

RELATED ARTICLES

Most Popular