RRR Film: ಚೀನಾ, ಜಪಾನ್ ನಲ್ಲೂ ಆರ್ ಆರ್ ಆರ್ ಮೇನಿಯಾ! ಈ ವರ್ಷದ ಕೊನೆಯಲ್ಲಿ ತೆರೆಕಾಣಲಿದೆ ಸಿನಿಮಾ

ಮಳೆ ನಿಂತರು ಮಳೆ ಹನಿ ನಿಲ್ಲೋದಿಲ್ಲ ಅಂತಾರಲ್ಲ ಹಾಗಾಗಿದೆ ಆರ್ ಆರ್ ಆರ್(RRR Film) ಸಿನಿಮಾದ ಕತೆ. ಇದು ಭರ್ಜರಿ ಬಿಡುಗಡೆಯಾಗಿ ಹೆಚ್ಚುಕಮ್ಮಿ 20 ದಿನ ಕಳೆದಿದೆ. ಆದರೂ ಸಿನಿಮಾದ ಪ್ರದರ್ಶನ, ಅದರ ಅಬ್ಬರ ಮಾತ್ರ ಇನ್ನೂ ನಿಂತಿಲ್ಲ. ಸಿನಿಮಾ ನೋಡಲೆಂದೇ ಈಗಲೂ ಪ್ರೇಕ್ಷಕರು ಕಾಯುತ್ತಿದ್ದಾರಂತೆ. 30 ದೇಶಗಳಲ್ಲಿ ಪ್ರದರ್ಶನಗೊಂಡಿರುವ ಆರ್ ಆರ್ ಆರ್ ಸಿನಿಮಾ ಹೆಚ್ಚು ಕಮ್ಮಿ1050 ಕೋಟಿ ಹಣ ಗಳಿಸಿದೆಯಂತೆ.

ಆರ್ ಆರ್ ಆರ್ ಸಿನಿಮಾ ಇಡೀ ಭಾರತೀಯ ಚಿತ್ರರಂಗವನ್ನೇ ತಿರುಗಿ ನೋಡುವಂತೆ ಮಾಡಿರುವುದಂತು ಸತ್ಯ. ಈಗ ಆರ್ ಆರ್ ಆರ್‌ ಸಿನಿಮಾ ಮತ್ತೊಂದು ಮೈಲಿಗಲ್ಲು ನೆಡಲು ಮುಂದಾಗುತ್ತಿದೆ. ಅದು ಏನೆಂದರೆ, ಈ ಸಿನಿಮಾ ಚೀನಾ ಮತ್ತು ಜಪಾನ್ ದೇಶಗಳಲ್ಲಿ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ.
ಅಲ್ಲಿಯೂ ಕೂಡ ಆರ್ ಆರ್ ಆರ್ ಸಿನಿಮಾಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಶುರುವಾಗಿದೆಯಂತೆ. ಎಲ್ಲಾ ಅಂದುಕೊಂಡಂತೆ ಆದರೆ, ಆರ್ ಆರ್ ಆರ್ ಸಿನಿಮಾ ಈ ವರ್ಷದ ಕೊನೆಯಲ್ಲಿ ಚೀನಾ ಮತ್ತು ಜಪಾನ್ ದೇಶಗಳಲ್ಲಿ ತೆರೆಕಾಣುವ ಎಲ್ಲಾ ಸಾಧ್ಯತೆಗಳು ಇವೆ.

ಚೀನಾ ಮತ್ತು ಜಪಾನ್ ದೇಶಗಳಲ್ಲಿಯೂ ರಾಮಚರಣ್ ತೇಜಾ ಮತ್ತು ಜ್ಯೂನಿಯರ್ ಎನ್ಟಿ ರಾಮರಾವ್ ಅವರ ಅಭಿಮಾನಿಗಳು ಇದ್ದಾರೆ. ಹಾಗಾಗಿ, ಆರ್ ಆರ್ ಆರ್ ಸಿನಿಮಾಕ್ಕೆ ಡಿಮ್ಯಾಂಡ್ ಶುರುವಾಗಿದೆ ಅಂದುಕೊಂಡರೆ ತಪ್ಪು. ಆರ್ ಆರ್ ಆರ್ ಸಿನಿಮಾ ನಿರ್ದೇಶಕ ರಾಜಮೌಳಿ ಅವರ ಸಿನಿಮಾ. ರಾಜಮೌಳಿ ಅವರು ಈಗಾಗಲೇ ವಿದೇಶಗಳಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಇದನ್ನೂ ಓದಿ :KGF 2 Collection: ಭರ್ಜರಿ ಕಲೆಕ್ಷನ್! ಬಾಹುಬಲಿ-2 ಅನ್ನು ಹಿಂದಿಕ್ಕಿದ ಕೆಜಿಎಫ್‌-2

ಚೀನಾ ಮತ್ತು ಜಪಾನ್ ದೇಶಗಳಲ್ಲಿ ಬಾಹುಬಲಿ-1 ಮತ್ತು 2 ಸಿನಿಮಾಗಳು ತೆರೆಕಂಡು ಯಶಸ್ಸುಗಳಿಸಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಈಗ ಜಪಾನ್ ಮತ್ತು ಚೀನಾದಲ್ಲಿ ಬಿಡುಗಡೆಗೊಳ್ಳುತ್ತಿದೆ. ಮುಂದಿನ ತಿಂಗಳ ನಂತರ, ರಾಮ್ ಚರಣ್ ತೇಜ ಮತ್ತು ಜ್ಯೂನಿಟರ್ ಎನ್ಟಿರಾಮರಾವ್ ಇಬ್ಬರೂ ನಟರು ಪ್ರಮೋಷನ್ ಕಾರ್ಯಕ್ರಮದಲ್ಲಿ ತೊಡಗುವ ಸಾಧ್ಯತೆ ಇವೆ.

ಆರ್ ಆರ್ ಆರ್ ಸಿನಿಮಾದ ಇನ್ನೊಂದು ಸಾಧನೆ ಎಂದರೆ ನಿರೀಕ್ಷೆಯಂತೆ 1050 ಕೋಟಿ ಕಲೆಕ್ಷನ್ ಆಗಿದೆ. ಮೊದಲವಾರದ ಗಳಿಕೆಯೇ 709 ಕೋಟಿ, ಎರಡನೆವಾರದಲ್ಲಿ 259 ಕೋಟಿ ಗಳಿಸಿದೆ. ಅಚ್ಚರಿಎಂದರೆ, ಮೊದಲದಿನದ ಕಲೆಕ್ಷನ್ ಕಮ್ಮಿ ಅಂದರೆ, 12.43 ಕೋಟಿ. ಎರಡನೇ ದಿನ 21.68 ಕೋಟಿ, ಮೂರನೇ ದಿನ ಇದಕ್ಕಿಂತ ಜಾಸ್ತಿ ಅಂದರೆ 25.72 ಕೋಟಿ ಗಳಿಸಿದೆ.

ಇದನ್ನೂ ಓದಿ : Rajamouli And Mahesh Babu : ಮಹೇಶ್ ಬಾಬು ಸಿನಿಮಾಗೆ ಕಥೆ ಮಾಡಲು ಒಂದು ವರ್ಷಬೇಕು! ಗಾಳಿಸುದ್ದಿಗೆ ಬ್ರೆಕ್‌ ಹಾಕಿದ ರಾಜಮೌಳಿ

(RRR Film is going to be released in China and Japan)

Comments are closed.