POCO C50 : ಹೊಸ ವರ್ಷದ ಆರಂಭದಲ್ಲೇ ಬಿಡುಗಡೆಯಾಗಲಿದೆ ಪೊಕೊ C50 ಸ್ಮಾರ್ಟ್‌ಫೋನ್‌

ಮಿಡ್‌–ರೇಂಜ್‌ ಫೋನ್‌ಗಳ ತಯಾರಿಕಾ ಕಂಪನಿ ಪೊಕೊ ಜನವರಿ 3 ರಂದು C50 (POCO C50) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಿದೆ. ಇದನ್ನು ಭಾರತದಲ್ಲಿ ಬಿಡುಗಡೆ ಮಾಡುವುದರ ಮೂಲಕ ಪೊಕೊ ತನ್ನ ಸಿ ಸರಣಿಯ ಮೂರನೇ ಸ್ಮಾರ್ಟ್‌ಫೋನ್‌ ಅನ್ನು ಹೊರತರಲಿದೆ. ಪೊಕೊ ಅಕ್ಟೋಬರ್‌ 2020 ಯಲ್ಲಿ ಪೊಕೊ C3 ಮತ್ತು ಸೆಪ್ಟೆಂಬರ್‌ 2021 ರಲ್ಲಿ C31 ಬಿಡುಗಡೆ ಮಾಡಿತ್ತು. ಪೊಕೊ C50 ಸ್ಮಾರ್ಟ್‌ಫೋನ್‌ ಇದು ಜಾಗತಿಕವಾಗಿ ಬಿಡುಗಡೆಯಾದ ಪೊಕೊ C40 ಯ ಮುಂದಿನ ಆವೃತ್ತಿ ಎಂದು ಹೇಳಲಾಗುತ್ತಿದೆ. ಆ ಸ್ಮಾರ್ಟ್‌ಫೋನ್‌ 6.71 ಇಂಚಿನ ಡಿಸ್ಪ್ಲೇ , ಒಕ್ಟಾ–ಕೋರ್ ಪ್ರೊಸೆಸರ್ ಮತ್ತು 6,000 mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಬಂದಿತ್ತು.

ಪೊಕೊ C50 ವೈಶಿಷ್ಟ್ಯಗಳನ್ನು ಕಂಪನಿ ಬಹಿರಂಗಪಡಿಸಿಲ್ಲ. ಆದರೂ ಇದು ಬಜೆಟ್‌ ಸ್ಮಾರ್ಟ್‌ಫೋನ್‌ ಆಗಿರಬಹುದು ಎಂದು ನಿರೀಕ್ಷಿಸಿಲಾಗಿದೆ. ಏಕೆಂದರೆ ಸಿ ಸರಣಿರು ಮೂಲಭೂತವಾಗಿ ಎಂಟ್ರೀ–ಲೆವಲ್‌ ಕೊಡುಗೆಯಾಗಿದೆ. ಈ ಹಿಂದೆ ಪೊಕೊ C31 ಬಿಡುಗಡೆಯಾದಾಗ ಅದರ ಬೆಲೆಯನ್ನು 8,499 ರೂ. ಗೆ ನಿಗದಿ ಪಡಿಸಿತ್ತು. ಪೊಕೊ ಈ ಹಿಂದೆ ನವೆಂಬರ್‌ನಲ್ಲೇ ಪೊಕೊ C50 ಭಾರತದಲ್ಲಿ ಲಭ್ಯವಿರುತ್ತದೆ ಎಂದು ಹೇಳಿತ್ತು. ಆದರೆ ಕಾರಣಾಂತರಗಳಿಂದ ಫೋನ್‌ ಬಿಡುಗಡೆಯಾಗಿರಲಿಲ್ಲ. ಆದ್ದರಿಂದ ನಾವು ಇದರಲ್ಲಿ ಪ್ಲಾಸ್ಟಿಕ್ ಬಾಡಿ ಮತ್ತು ವಾಟರ್‌ಡ್ರಾಪ್ ಡಿಸ್ಪ್ಲೇಯಂತಹ ಮೂಲಭೂತ ಅಂಶಗಳನ್ನು ನಿರೀಕ್ಷಿಸಬಹುದು. ಸ್ಮಾರ್ಟ್‌ಫೋನ್‌ HD+ ಡಿಸ್ಪ್ಲೇ ಮತ್ತು ಸ್ನಾಪ್‌ಡ್ರಾಗನ್ ಅಥವಾ ಮೀಡಿಯಾ ಟೆಕ್‌ನಿಂದ ಮೂಲ ಪ್ರೊಸೆಸರ್ ಅನ್ನು ಹೊಂದಿರಬಹುದು. ಏಕೆಂದರೆ ಬಜೆಟ್‌ ಬೆಲೆಯ ಪೊಕೊ C31 ಫೋನ್‌ 6.53 ಇಂಚಿನ HD+ ಡಿಸ್ಪ್ಲೇ, ಮೀಡಿಯಾ ಟೆಕ್‌ ಹೀಲಿಯೊ G35 ನಿಂದ ಚಾಲಿತವಾಗುತ್ತದೆ. ಅದು ಹಿಂಬದಿಯಲ್ಲಿ 13MP ಮುಖ್ಯ ಕ್ಯಾಮೆರಾ ಇರುವ ಮೂರು ಕ್ಯಾಮೆರಾ ಸೆಟೆಪ್‌ ಅನ್ನು ಹೊಂದಿದೆ ಮತ್ತು ಫಿಂಗರ್‌ಪ್ರಿಂಟ್‌ ಸಂವೇದಕವನ್ನು ಹಿಂಬದಿಯಲ್ಲೇ ಹೊಂದಿದೆ. ಇದು 5,000mAh ಬ್ಯಾಟರಿ, ಮತ್ತು 4GB RAM ನೊಂದಿಗೆ ಲಭ್ಯವಿದೆ. ಆ ಕಾರಣದಿಂದಲೇ ಈಗ ಬಿಡುಗಡೆಯಾಗಲಿರುವ ಪೊಕೊ C50 ಹಿಂದಿಗಿಂತ ಕೆಲವು ಸುಧಾರಣೆಗಳನ್ನು ಹೊಂದಿರಬಹುದು ಎಂದು ನಿರೀಕ್ಷಿಸಬಹುದಾಗಿದೆ.

ಇದನ್ನೂ ಓದಿ : Bal Jeevan Bima : ಬಾಲ ಜೀವನ ವಿಮಾ: ಪೋಸ್ಟ್‌ ಆಫೀಸ್‌ನ ಈ ಯೋಜನೆ ಬಗ್ಗೆ ನಿಮಗೆ ಗೊತ್ತಾ..

ಇದನ್ನೂ ಓದಿ : Upcoming 5G Smartphones : 2023 ರಲ್ಲಿ ಬಿಡುಗಡೆಯಾಗಲಿರುವ 5G ಸ್ಮಾರ್ಟ್‌ಫೋನ್‌ಗಳು

(POCO C50 most awaited and budget smartphone c50 to launch on 3rd January 2023)

Comments are closed.