Manish Pandey double century: ನಾಯಕ್ವತರಿಂದ ಕೆಳಗಿಳಿದ ನಂತರ ಪವರ್ ತೋರಿಸಿದ ಪಾಂಡೆ, ರಣಜಿ ಟ್ರೋಫಿಯಲ್ಲಿ ಸಿಡಿಲಬ್ಬರದ ದ್ವಿಶತಕ

ಪೊರ್ವರಿಮ್ (ಗೋವಾ): ಕರ್ನಾಟಕ ತಂಡದ ಮಾಜಿ ನಾಯಕ ಮನೀಶ್ ಪಾಂಡೆ (Manish Pandey double century) ಕೊನೆಗೂ ತಮ್ಮ ತಾಕತ್ತು ತೋರಿಸಿದ್ದಾರೆ. ಕರ್ನಾಟಕ ತಂಡದ ನಾಯಕತ್ವವನ್ನು ಕಳೆದುಕೊಂಡಿರುವ ಮನೀಶ್ ಪಾಂಡೆ, ಗೋವಾ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ (Ranji Trophy 2022-23) ಪಂದ್ಯದಲ್ಲಿ ಸಿಡಿಲಬ್ಬರದ ದ್ವಿಶತಕದೊಂದಿಗೆ ಆರ್ಭಟಿಸಿದ್ದಾರೆ.

ಗೋವಾ ಕ್ರಿಕೆಟ್ ಸಂಸ್ಥೆ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಎಲೈಟ್ ‘ಸಿ’ ಗುಂಪಿನ ಪಂದ್ಯದ 2ನೇ ದಿನ ಮನೀಶ್ ಪಾಂಡೆ ಅಕ್ಷರಶಃ ಅಬ್ಬರಿಸಿದರು. ರಣಜಿ ವೃತ್ತಿಜೀವನದಲ್ಲಿ 19ನೇ ಶತಕ ಬಾರಿಸಿದ ಮನೀಶ್, 186 ಎಸೆತಗಳಲ್ಲಿ ಅಜೇಯ 208 ರನ್ ಸಿಡಿಸಿ ತಮ್ಮ ಹಳೇ ಖದರ್ ತೋರಿಸಿದರು. ಪಾಂಡೆ ಅವರ ಪವರ್’ಫುಲ್ ಇನ್ನಿಂಗ್ಸ್’ನಲ್ಲಿ 14 ಬೌಂಡರಿಗಳು ಮತ್ತು 11 ಸಿಕ್ಸರ್’ಗಳು ಒಳಗೊಂಡಿದ್ದವು. 208 ರನ್’ಗಳಲ್ಲಿ 122 ರನ್’ಗಳನ್ನು ಪಾಂಡೆ ಬೌಂಡರಿ-ಸಿಕ್ಸರ್’ಗಳ ಮೂಲಕವೇ ಸಿಡಿಸಿದ್ದು ವಿಶೇಷ.

ಡಿಸೆಂಬರ್ 23ರಂದು ನಡೆದ ಐಪಿಎಲ್ ಹರಾಜಿನಲ್ಲಿ 2.40 ಕೋಟಿ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇಲ್ ಆಗಿದ್ದ ಮನೀಶ್ ಪಾಂಡೆ, ಐಪಿಎಲ್ ಹರಾಜಿನ ಬೆನ್ನಲ್ಲೇ ದ್ವಿಶತಕ ಸಿಡಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಗೋವಾ ವಿರುದ್ಧದ ಪಂದ್ಯದ ಮೊದಲ ದಿನ ಉಪನಾಯಕ ಆರ್.ಸಮರ್ಥ್ ಭರ್ಜರಿ 140 ರನ್ ಸಿಡಿಸಿದ್ರೆ, 2ನೇ ದಿನ ಮನೀಶ್ ಪಾಂಡೆ ದ್ವಿಶತಕ ಸಿಡಿಸಿ ಮಿಂಚಿದರು. 3ನೇ ಕ್ರಮಾಂಕದ ಬ್ಯಾಟ್ಸ್’ಮನ್ ವಿಶಾಲ್ ಓನಟ್ 91 ರನ್’ಗಳಿಗೆ ಔಟಾಗುವ ಮೂಲಕ ಕೇವಲ 9 ರನ್’ಗಳಿಂದ ಚೊಚ್ಚಲ ಶತಕ ವಂಚಿತರಾದರು.

ಸಮರ್ಥ್ ಶತಕ (140), ಮನೀಶ್ ಪಾಂಡೆ (ಅಜೇಯ 208) ದ್ವಿಶತಕ ಮತ್ತು ನಾಯಕ ಮಯಾಂಕ್ ಅಗರ್ವಾಲ್ (50) ಹಾಗೂ ವಿಶಾಲ್ ಓನಟ್ (91) ಅವರ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 7 ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿತು. ನಂತರ ತನ್ನ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಗೋವಾ ತಂಡ 2ನೇ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದೆ.

ಇದನ್ನೂ ಓದಿ : Rohit Rahul Kohli out of T20 team: ಟಿ20 ತಂಡಕ್ಕೆ ಮೇಜರ್ ಸರ್ಜರಿ; ತ್ರಿಮೂರ್ತಿಗಳು ಇನ್ನು ಟಿ20ಯಲ್ಲಿ ಕಾಣಿಸಿಕೊಳ್ಳುವುದು ಡೌಟ್!

ಇದನ್ನೂ ಓದಿ : KL Rahul removed: ಭಾರತಕ್ಕೆ 7 ಸತತ ಗೆಲುವು ತಂದುಕೊಟ್ಟ ರಾಹುಲ್‌ಗೆ ಉಪನಾಯಕತ್ವದಿಂದ ಕೈ ಕೊಟ್ಟಿದ್ದು ಎಷ್ಟು ಸರಿ?

Manish Pandey double century Karnataka vs Goa Ranji Trophy 2022-23

Comments are closed.